ಲೋಕದರ್ಶನ ವರದಿ
ಉದ್ಯೋಗ ಖಾತರಿ ಕೆಲಸದ ಸ್ಥಳಕ್ಕೆ ಕಲ್ಲಾಪೂರ ಭೇಟಿ
ಸಂಬರಗಿ 03: ಗಡಿ ಭಾಗದ ಗ್ರಾಮಗಳು ಬರಗಾಲಕ್ಕೆ ಸಿಲುಕಿ ಕೂಲಿಕಾರರಿಗೆ ಕೆಲಸ ಇಲ್ಲದಂತಾಗಿತ್ತು. ಕೆಲಸಕ್ಕಾಗಿ ಮಹಾರಾಷ್ಟ್ರದಲ್ಲಿ ಕೆಲಸಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ಬಂದೊದಗಿತ್ತು. ಆಕಸ್ಮಿಕವಾಗಿ ಅಥಣಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ ಉದ್ಯೋಗ ಖಾತರಿ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರ್ಮಿಕರಿಗೆ ಮಾಹಿತಿ ನೀಡಿದರು.
ಗಡಿ ಭಾಗದ ಶಿರೂರ ಗ್ರಾಮ ಕೊನೆಯ ಹಳ್ಳಿ ಕೊನೆಯ ಗ್ರಾಮ ಪಂಚಾಯತಿ ಇದ್ದು, ಕೂಲಿ ಕಾರ್ಮಿಕರು ಕೆಲಸ ನೀಡುವಂತೆ ಮನವಿ ಮಾಡಿಕೊಂಡ ನಂತರ 110 ಕೂಲಿಕಾರ್ಮಿಕರಿಗೆ ಅಗ್ರಾಣಿ ಹಳ್ಳದಲ್ಲಿ ಹೂಳೆತ್ತುವ ಕೆಲಸ ಪ್ರಾರಂಭ ಮಾಡಿದ್ದಾರೆ. ಪ್ರತಿ ಕೂಲಿಗಾರರಿಗೆ ಸರಕಾರದ ನಿಯಮದ ಪ್ರಕಾರ 370 ರೂ ಕೂಲಿ 15 ದಿನದಲ್ಲಿ ಅವರ ಖಾತೆಗೆ ಪಾವತಿಯಾಗುತ್ತದೆ. ಇನ್ನೂ ಉದ್ಯೋಗ ಖಾತರಿ ಕೆಲಸಕ್ಕೆ ಕೂಲಿಕಾರರು ಹೆಚ್ಚಾಗುವ ಸಾದ್ಯತೆ ಇದೆ. ಈ ಗ್ರಾಮದಲ್ಲಿ ಉದ್ಯೋಗ ಖಾತರಿ ಕೆಲಸ ಪ್ರಾರಂಭ ಮಾಡಿದ್ದಾರೆ. ಬರಗಾಲದಲ್ಲಿ ಜನರಿಗೆ ಅನುಕೂಲವಾಗಿದೆ. ಶಿರೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪಾಂಡೇಗಾಂವ ಹಾಗೂ ಖೋತವಾಡಿ ಗ್ರಾಮದಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡುತ್ತಿದ್ದು, ಕೂಲಿಕಾರರು ನೇರವಾಗಿ ಗ್ರಾಮ ಪಂಚಾಯತಿಗೆ ಸಂಪರ್ಕಿಸಬೇಕೆಂದು ವಿನಂತಿಸಲಾಗಿದೆ.
ತಾಲೂಕಾ ಪಂಚಾಯತ ವ್ಯವಸ್ಥಾಪಕ ಜಿ.ಎಮ್.ಸ್ವಾಮಿ, ಅನೀಲಕುಮಾರ ಸಂತೆ ಪಿಡಿಓ, ಎಮ್.ಬಿ.ಬಾಡಗಿ ಕಾರ್ಯದರ್ಶಿ, ಸಂಜಯ ಸಕಾನಟ್ಟಿ, ವಿನಾಯಕ ಗಡದೆ ಇವರು ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಉದ್ಯೋಗ ಖಾತರಿ ಯೋಜನೆ ಪ್ರಾರಂಭವಾಗಿದ್ದು, ತಾಲೂಕಿನ ಯಾವದೇ ಗ್ರಾಮದಲ್ಲಿ ಕೂಲಿಕಾರ್ಮಿಕರು ಕೆಲಸಕ್ಕೆ ಅರ್ಜಿ ಸಲ್ಲಿಸದರೆ ಕೆಲಸ ಕೋಡುವದಾಗುವದು. ಕೆಲಸದ ಕೂಲಿಕಾರ್ಮಿಕರ ಮಕ್ಕಳನ್ನು ಸಂಭಾಳಿಸಲು ಕೂಸಿನ ಮನೆ ಪ್ರಾರಂಭಿಸುವಂತೆ ಪಿಡಿಓ ರವರಿಗೆ ಸೂಚಿಸಲಾಗಿದೆ.
ಶಿವಾನಂದ ಕಲ್ಲಾಪೂರ
ಅಥಣಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ