ವಿವಿಧ ಗ್ರಾಮಗಳಿಗೆ ಅಧಿಕಾರಿಗಳ ತಂಡ ಭೇಟಿ

ಧಾರವಾಡ 27: ಹಿಂಗಾರು ಬೆಳೆ ನಷ್ಟ ಹಾಗೂ ಕುಡಿಯುವ ನೀರು, ದನಕರುಗಳಿಗೆ ಮೇವು, ನರೇಗಾ ಉದ್ಯೋಗ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಅಧ್ಯಯನ ಮಾಡಿ ಕೇಂದ್ರ  ಸರಕಾರಕ್ಕೆ ವರದಿ ಸಲ್ಲಿಸಲು  ಇಂದು ಕೇಂದ್ರ ಮಂತ್ರಾಲಯಗಳ ಅಧಿಕಾರಿಗಳ ತಂಡ ಧಾರವಾಡ ಜಿಲ್ಲೆಯ ವಿವಿಧ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ, ರೈತರೊಂದಿಗೆ ಚಚರ್ಿಸಿ, ಮಾಹಿತಿ ಪಡೆದುಕೊಂಡಿತು.

ಕೇಂದ್ರ ಸರಕಾರದ ಜಲಸಂಪನ್ಮೂಲ ಮಂತ್ರಾಲಯದ ಹಿರಿಯ ಜಂಟಿ ಆಯುಕ್ತ ಎಸ್.ಕೆ. ಕಾಂಬೊಜಿ ಅವರ ನೇತೃತ್ವದ ತಂಡದಲ್ಲಿ ಕೇಂದ್ರ ಪಶುಸಂಗೋಪನಾ ಮಂತ್ರಾಲಯದ ಹಿರಿಯ ಅಧಿಕಾರಿ ಡಾ.ತರುಣಕುಮಾರ್ ಸಿಂಗ್, ಭಾರತ ಆಹಾರ ನಿಗಮದ ಉಪಪ್ರಧಾನ ವ್ಯವಸ್ಥಾಪಕರು ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಮಂತ್ರಾಲಯದ ಸತ್ಯಕುಮಾರ ಮತ್ತು ದೇವರಾಜ ಅವರು ಇದ್ದರು.

ಬೆಳಿಗ್ಗೆ ಹುಬ್ಬಳ್ಳಿ ಸೆಕ್ಯುರಿಟ್ಟ್ ಟ್ ಹೌಸ್ದ ಸಭಾಭವನದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆ, ಬಿತ್ತನೆ ಮತ್ತು ಉಂಟಾಗಿರುವ ಬೆಳೆ ನಷ್ಟ ಹಾಗೂ ಬರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳಿಂದ ಜಿಲ್ಲೆಯ ಸಮಗ್ರ ಮಾಹಿತಿ ಪಡೆದ ಅಧಿಕಾರಿಗಳ ತಂಡ ಧಾರವಾಡ ತಾಲೂಕಿನ ಧಾರವಾಡ ಹೋಬಳಿಯ ಮನಸೂರ ಗ್ರಾಮದ ಶ್ರೀಮತಿ ಕರೆವ್ವ ಕರೆಪ್ಪಗೌಡ ಪಾಟೀಲ ಮತ್ತು ಶಿವಾನಂದ ಸಿದ್ದಪ್ಪ ಕುರಬರ ಅವರ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಪರಿಶೀಲಿಸಿ, ರೈತರಿಂದ ಮಾಹಿತಿ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ ಉಪಸ್ಥಿತರಿದ್ದು, ಬರ ಪರಿಸ್ಥಿತಿ ಕುರಿತು ವಿವರಿಸಿದರು.

  ನಂತರ ಅಮ್ಮಿನಭಾವಿ ಹೋಬಳಿ ಅಮ್ಮಿನಭಾವಿ ಗ್ರಾಮದ ಈರಪ್ಪ ಬಾಳಪ್ಪ ಧಾರವಾಡ ಅವರ ಜಮೀನಿಗೆ ಭೇಟಿ ನೀಡಿದ ತಂಡವು ಅಲ್ಲಿನ ಕುಸುಬಿ ಮತ್ತು ಕಡಲೆ ಮಿಶ್ರಬೆಳೆ ಹಾನಿ, ಗೋಧಿ ಬೆಳೆ ಹಾನಿ, ಜೋಳದ ಬೆಳೆಹಾನಿ ಮತ್ತು ಮೆಣಸಿನಕಾಯಿ ಹಾಗೂ ಈರುಳ್ಳಿ ಮಿಶ್ರ ಬೆಳೆಹಾನಿ ಕುರಿತು ಪರಿಶೀಲಿಸಿದರು. ಮತ್ತು ಅವರ ಜಮೀನಿನಲ್ಲಿ ಕೃಷಿ ಇಲಾಖೆ ಸಹಾಯಧನದಲ್ಲಿ ನಿಮರ್ಿಸಿರುವ ಕೃಷಿಹೊಂಡ ವೀಕ್ಷಿಸಿದರು. ಜಮೀನ ಮಾಲೀಕ ಸೇರಿದಂತೆ ರೈತರೊಂದಿಗೆ, ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳ ತಂಡವು ಬೆಳೆನಷ್ಟ ಹಾಗೂ ಬರ ಪರಿಹಾರ ಕಾಮಗಾರಿಗಳ ಕುರಿತು ಚಚರ್ಿಸಿತು. ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರು ತಾಲೂಕಿನ ಬರಪರಿಸ್ಥಿತಿ ಹಾಗೂ ರೈತರ ಕಷ್ಟಗಳ ಕುರಿತು ತಂಡಕ್ಕೆ ವಿವರಿಸಿದರು.

 ಅಲ್ಲಿಂದ ಹಾರೋಬೆಳವಡಿ  ಗ್ರಾಮದ ರೈತ ಬಸನಗೌಡ ಮಲ್ಲನಗೌಡ ಕೋಟೂರ ಅವರ ಜಮೀನಿಗೆ ತಂಡವು ಭೇಟಿ ನೀಡಿ, ನರೇಗಾ ಯೋಜನೆಯಡಿ ಉದ್ಯೋಗ ನೀಡಿ ನಿಮರ್ಿಸುತ್ತಿರುವ ಬದು ನಿಮರ್ಾಣ ಕಾರ್ಯ ಹಾಗೂ ಜೋಳದ ಬೆಳೆ ಹಾನಿ ಬಗ್ಗೆ ಚಚರ್ಿಸಿ ಮಾಹಿತಿ ಪಡೆದುಕೊಂಡಿತು. 

ತಂಡದ ನೇತೃತ್ವವಹಿಸಿದ್ದ ಹಿರಿಯ ಜಂಟಿ ಆಯುಕ್ತ ಎಸ್.ಕೆ. ಕಾಂಬೊಜಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜಿಲ್ಲಾಡಳಿತ ಹಿಂಗಾರು ಬೆಳೆಹಾನಿ ಹಾಗೂ ಬರ ಪರಿಹಾರಗಳ ಕುರಿತು ಪ್ರಸ್ತಾವನೆ, ವರದಿ ಸಲ್ಲಿಸಿದೆ. ತಂಡವು ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ರೈತರೊಂದಿಗೆ ಚಚರ್ೆ ಮಾಡಿ ಮಾಹಿತಿ ಪಡೆಯುತ್ತಿದೆ. ನಮ್ಮ ತಂಡವು ಧಾರವಾಡ, ಬೆಳಗಾವಿ, ಬಾಗಲಕೋಟ, ವಿಜಯಪುರ ಮತ್ತು ಗದಗ ಜಿಲ್ಲೆಗಳಲ್ಲಿ ಅಧ್ಯಯನ ಮಾಡಲಿದೆ. ನಂತರ ಎಲ್ಲ ಸಂಗ್ರಹಿತ ಮಾಹಿತಿಯನ್ನು ಸಭೆ ಕರೆದು ಚಚರ್ಿಸಿ, ಮಾರ್ಗಸೂಚಿಗಳ ಅನ್ವಯ ಸಕರ್ಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

 ಹಾರೋಬೆಳವಡಿಯಿಂದ ಇನಾಮಹೊಂಗಲ ಮಾರ್ಗವಾಗಿ ತಂಡವು ಬೆಳಗಾವಿ ಜಿಲ್ಲೆಗೆ ಪ್ರವಾಸ ಬೆಳೆಸಿತು.

  ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಸಿಇಓ ಡಾ.ಬಿ.ಸಿ. ಸತೀಶ್ ಅವರು ಕೇಂದ್ರ ತಂಡದೊಂದಿಗೆ ಇದ್ದು ಅಗತ್ಯ ಮಾಹಿತಿ ನೀಡಿದರು.

 ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವಿಜಯಲಕ್ಷ್ಮಿ ಪಾಟೀಲ, ಜಿಲ್ಲಾ ಪಂಚಾಯತ್ ಉಪಕಾರ್ಯದಶರ್ಿ ಎಸ್.ಜಿ. ಕೊರವರ, ತೋಟಗಾರಿಕೆ ಇಲಾಖೆ ಉಪನಿದರ್ೆಶಕ ಡಾ. ರಾಮಚಂದ್ರ ಕೆ. ಮಡಿವಾಳರ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ, ತಹಶೀಲ್ದಾರ ಪ್ರಕಾಶ ಕುದರಿ, ಇಓ ಎಸ್.ಎಸ್. ಖಾದ್ರೊಳ್ಳಿ, ಸಹಾಯಕ ಕೃಷಿ ನಿದರ್ೆಶಕ ಸಿ.ಜಿ. ಮೇತ್ರಿ, ಜಿಲ್ಲಾ ಪಂಚಾಯತ್ ಸದಸ್ಯ ಚನ್ನಬಸಪ್ಪ ಮಟ್ಟಿ, ಸಹಾಯಕ ಕೃಷಿ ಅಧಿಕಾರಿ ಎಚ್.ಎಂ. ಬದಾಮಿ, ಕಂದಾಯ ನಿರೀಕ್ಷಕರಾದ ಎಮ್.ಆರ್. ಹಿರೇಮಠ, ವಿನಾಯಕ ದಿಕ್ಷೀತ ಸೇರಿದಂತೆ ಕೃಷಿ, ಕಂದಾಯ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು, ಗ್ರಾಮಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.