ಲೋಕದರ್ಶನ ವರದಿ
ಬೆಳಗಾವಿ, 01- ಅನಿಗೋಳದ ಬಾಬ್ಲೆಬೀದಿಯಲ್ಲಿ ಅಖಿಲ ಕನರ್ಾಟಕ ಬ್ರಾಹ್ಮಣ ಸಮಾಜ ಜಿಲ್ಲಾ ಘಟಕದವರು ನಿಮರ್ಿಸುತ್ತಿರುವ ಗಾಯತ್ರಿ ಭವನದ ಕಟ್ಟಡ ನಿಮರ್ಾಣ ನಡೆಯುತ್ತಿರುವ ಸ್ಥಳಕ್ಕೆ ಶೃಂಗೇರಿ ಪೀಠದ ಶ್ರೀ ವಿಧುಶೇಖರಭಾರತಿ ಮಹಾಸ್ವಾಮಿಗಳು ಭೇಟಿ ನೀಡಿದರು.
ಸುಮಂಗಲೆಯರು ಪೂರ್ಣಕುಂಭದೊಡನೆ ವಿಧುಶೇಖರಭಾರತಿ ಮಹಾಸ್ವಾಮಿಗಳಿಗೆ ಸ್ವಾಗತ ಕೋರಲಾಯಿತು. ಸ್ವಾಮಿಜಿಯವರು ಬರುವ ವಿಷಯ ತಿಳಿಯುತ್ತಿದ್ದಂತೆ ಬಾಬ್ಲೆಬೀದಿಯ ಜನರೆಲ್ಲರೂ ದಾರಿಯುದ್ದಕ್ಕೂ ತಮ್ಮ ತಮ್ಮ ಮನೆ ಮುಂದೆ ನೀರಿನಿಂದ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ, ತಮ್ಮ ಭಕ್ತಿಯನ್ನು ಮೆರೆದರು. ಹಬ್ಬದ ವಾತಾವರಣ ನಿಮರ್ಾಣವಾಯಿತು.
8 ಗುಂಟೆ ಜಾಗೆಯಲ್ಲಿರುವ ನಿಮರ್ಾಣವಾಗುತ್ತಿರುವ ಗಾಯತ್ರಿ ಭವನ ನೆಲಮಹಡಿಯಲ್ಲಿ ವಾಹನ ನಿಲುಗಡೆಗಾಗಿ ಹಾಗೂ ಮೊದಲ ಮಹಡಿ ಸಭಾಭವನ ಹಾಗೂ ಎರಡನೇ ಮಹಡಿಯನ್ನು ಮಹಳಾ ವಸತಿ ಗೃಹವಾಗಿ ನಿಮರ್ಾಣ ಮಾಡುವ ಯೋಜನೆಗಳನ್ನು ಗಾಯತ್ರಿ ಭವನ ಕಟ್ಟಡ ನಿಮರ್ಾಣ ಕುರಿತಂತೆ ಎಲ್ಲ ವಿಷಯಗಳನ್ನು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಎಸ್. ಎಂ. ಕುಲಕಣರ್ಿ ಹಾಗೂ ಕಾರ್ಯದಶರ್ಿ ಆರ್ .ಆಸ್. ಮುತಾಲಿಕ ವಿವರಿಸಿದರು. ಆಲಿಸಿದ ಸ್ವಾಮೀಜಿಯವರು ಎಲ್ಲ ಒಳತಾಗುವುದಾಗ ಹೇಳಿ ಮಂತ್ರಾಕ್ಷಿತ ನೀಡಿ ಶುಭ ಕೋರಿದರು.
ಖಜಾಂಚಿಗಳಾದ ಅರವಿಂದ ಹುನಗುಂದ, ಸಂಜೀವ ಬೆಳವಡಿ ಅಲ್ಲದೇ ಜಯತೀರ್ಥ ಸವದತ್ತಿ, ಕಾನಿಟಕರ, ರಾಖೇಶ ದೇಶಪಾಂಡೆ, ನರಸಿಂಹ ಸವದತ್ತಿ, ಶ್ರೀಧರ ಹಲಗತ್ತಿ, ವಿನಯ ಕುಲಕಣರ್ಿ, ಆನಂದ ಗಲಗಲಿ, ರಾಜೇಶ ಕಡಿವಾಳ, ವಿನೋದ ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.