ಸರಿಯಾದ ಆಹಾರ ಮತ್ತು ವ್ಯಾಯಾಮದಿಂದ ಸ್ರೀಯರು ಆರೋಗ್ಯ ಕಾಪಾಡಿಕೊಳ್ಳಿ -ಡಾ. ಅಜಿತ ಪ್ರಸಾದ
Women should maintain their health with proper diet and exercise - Dr. Ajit Prasad
ಲೋಕದರ್ಶನ ವರದಿ
ಧಾರವಾಡ 10: ಅಸ್ವಸ್ಥ ಆಹಾರ, ಅನಿಯಮಿತ ಕೆಲಸದ ಒತ್ತಡ ಮಹಿಳೆಯರ ಆರೋಗ್ಯದ ಮೇಲೆ ಅಗಾಧವಾದ ಪರಿಣಾಮ ಬೀರುತ್ತಿದೆ. ಮಹಿಳೆ ಆರೋಗ್ಯಯುತವಾಗಿದ್ದರೇ ಮನೆ, ಅವರು ಕಾರ್ಯನಿರ್ವಹಿಸುತ್ತಿರುವ ಸ್ಥಳ ಮತ್ತು ಸಮಾಜವು ಸಹ ಆರೋಗ್ಯವಾಗಿರುತ್ತದೆ. ಇತ್ತಿಚಿನ ದಿನಗಳಲ್ಲಿ ಹದಿಹರೆಯರಲ್ಲಿ ಅತಿ ಹೆಚ್ಚು ಕಂಡುಬರುತ್ತಿರುವ ರೋಗ ಕ್ಯಾನ್ಸರ್. ಕ್ಯಾನ್ಸರ್ ಎಂದರೆ ದೇಹದ ಕೋಶಗಳು ನಿಯಂತ್ರಣವಿಲ್ಲದೆ ಹೆಚ್ಚಾಗಿ ಬೆಳೆಯುವ ಒಂದು ಗಂಭೀರ ರೋಗ. ಇದು ದೇಹದ ಯಾವುದಾದರೂ ಭಾಗದಲ್ಲಿ ಉಂಟಾಗಬಹುದು. ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರು ಈ ರೋಗದಿಂದ ಬಳಲುತ್ತಿದ್ದಾರೆ ಎಂದು ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಉತ್ಸವ ಸಭಾಭವನದ ಜನತಾ ಶಿಕ್ಷಣ ಸಮಿತಿ, ಆರ್..ಬಿ ಪಾಟೀಲ್ ಕ್ಯಾನ್ಸರ್ ಆಸ್ಪತ್ರೆ, ನವನಗರ, ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಂಗವಾಗಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಸಣಾ ಶಿಬಿರ ಮತ್ತು ಸಂವಾದ ಕಾರ್ಯಕ್ರವನ್ನು ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ದೀಪ ಬೆಳಗಿಸವ ಮೂಲಕ ಉದ್ಘಾಟಿಸಿ ಮಾತನಾಡಿದರು. ಧೂಮಪಾನ, ಮದ್ಯಪಾನ, ಅಸ್ವಸ್ಥ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ಪರಿಸರದ ಮಾಲಿನ್ಯದಿಂದಾಗಿ ಕ್ಯಾನ್ಸರ್ ಬರುತ್ತದೆ. ಕೆಲವೊಮ್ಮೆ ಇದು ವಂಶಪಾರಂಪರ್ಯದಿಂದಲೂ ಬರುತ್ತದೆ. ದೇಹದಲ್ಲಿ ಅಸಹಜ ಗುಡ್ಡೆ ಕಾಣಿಸಿಕೊಳ್ಳುವುದು, ನಿರಂತರ ಕೆಮ್ಮು ಅಥವಾ ರಕ್ತ ಕೆಮ್ಮುವುದು, ತೂಕ ಕಡಿಮೆಯಾಗುವುದು. ಗಾಯಗಳು ಬೇಗ ಗುಣವಾಗದಿರುವುದು ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು. ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ ಹಾಗು ಸರಿಯಾದ ಚಿಕಿತ್ಸಾ ಕ್ರಮದಿಂದ ಇದನ್ನು ಗುಣಪಡಿಸಬಹುದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯ ಸ್ರೀರೋಗ ಮತ್ತು ಪ್ರಸೂತಿ ವೈದ್ಯರಾದ ಶ್ರೀ ರಮೇಶಕುಮಾರ. ಆರ್. ಮಾತನಾಡಿ ಸ್ರೀಯರು ಮನೆ ಮತ್ತು ಹೊರಗಡೆ ಎರಡು ಕಡೆಗಳಲ್ಲಿ ಕಾರ್ಯನಿರ್ವಹಣೆ ಮಾಡಿಕೊಂಡು ಹೋಗುವ ಕಾರಣದಿಂದಾಗಿ ಅವರು ಬೇಗನೆ ರೋಗಗಳಿಗೆ ತುತ್ತಾಗುತ್ತಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸಧೃಡರಾದರೇ ಮಾತ್ರ ಯಾವುದೇ ಕಾಯಿಲೆಗಳಿದ್ದರೂ ಬೇಗನೆ ಗುಣಮುಖಕರಾಗಬಹುದು. 35 ವಯಸ್ಸಿನ ನಂತರ ಹೆಣ್ಣು ಮಕ್ಕಳಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಾಶಯದ ಕ್ಯಾನ್ಸರ್ ಅತಿ ಹೆಚ್ಚು ಕಂಡುಬರುತ್ತಿದ್ದು, ಪ್ರಾರಂಭದಲ್ಲೆ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಭಾರತ ಕ್ಯಾನ್ಸರ ರೋಗಿಗಳ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದ್ದು, ರೋಗಿಗಳು ಕೊನೆಯ ಹಂತದಲ್ಲಿ ಇದಕ್ಕೆ ಚಿಕಿತ್ಸೆ ಪಡೆಯುವ ಬದಲು ಪ್ರಥಮ ಹಂತದಲ್ಲೆ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು. ಸ್ತೀಯರು ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಸಮಯಕ್ಕೆ ವೈದ್ಯರನ್ನು ಭೇಟಿ ಮಾಡಿ, ಸ್ವಚ್ಛತೆ ಕಾಪಾಡಿಕೊಳ್ಳಿ ಕೊರೆತಯಿರುವ ವಿಟಮಿನ್‌ಗಳನ್ನು ನೈಸರ್ಗಿಕವಾದ ಪಡೆಯುಲು ಪ್ರಯತ್ನಿಸಿ ಎಂದು ಆರೋಗ್ಯಕ್ಕೆ ಸಲಹೆ ಸೂಚನೆಗಳನ್ನು ನೀಡಿದರು ಇದೇ ಸಂದರ್ಭದಲ್ಲಿ 200 ಜನ ಮಹಿಳಾ ಸಿಬ್ಬಂದಿಗಳಿಗೆ ಮೆಮೊಗ್ರಾಫಿ ಪರೀಕ್ಷೆ ಮಾಡಲಾಯಿತು. ನವನಗರದ ಕ್ಯಾನ್ಸರ್ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಎಸ್.ಎಸ್ ಐ.ಟಿ.ಐ ಕಾಲೇಜಿನ ಮಹಾವೀರ ಉಪಾದ್ಯೆ ಸ್ವಾಗತಿಸಿದರು. ಜೆ.ಎಸ್.ಎಸ್ ನ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಂತಾನಿ ದಂಡಿನ, ಭಾರತಿ ಶಾನಭಾಗ, ರೇಣು ಪಾಟೀಲ್, ವಿದ್ಯಾ ಕೊಲ್ಹಾಪುರೆ, ಸುಜಾತಾ ಕೊಂಬಳಿ ಮತ್ತು ಇತರರು ಉಪಸ್ಥಿತರಿದ್ದರು. ಧನ್ವಂತರಿ ಹಿರೇಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 