ಬೆಳಗಾವಿ, 19 : ಬರುವ ಡಿಸೆಂಬರ್ 26 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾಡಾನೆಗಳ ದಾಳಿ, ಮಾನವ ಪ್ರಾಣ ಹಾನಿ ಕುರಿತು ಸ್ಥಳೀಯರೊಂದಿಗೆ ಖುದ್ದಾಗಿ ಚಚರ್ಿಸಿ ಸಲಹೆ ಪಡೆಯಲಾಗುವುದು. ಸಮಸ್ಯೆ ಪರಿಹಾರಕ್ಕೆ ಸಕರ್ಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕೊಡಗು ಜಿಲ್ಲೆಗೂ ಕೂಡ ಭೇಟಿ ನೀಡಲಾಗುವುದು. ಮುಖ್ಯಮಂತ್ರಿಯವರು ಈ ಕಾರ್ಯಕ್ಕೆ ಸಾಕಷ್ಟು ಹಣ ಒದಗಿಸಲು ಸಿದ್ಧವಿದ್ದಾರೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ರಾಜ್ಯ ವಿಧಾನ ಪರಿಷತ್ನಲ್ಲಿ ಇಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಂ.ಕೆ. ಪ್ರಾಣೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂಡಿಗೆರೆ ತಾಲೂಕಿನಲ್ಲಿ ರೈತರ ಜಮೀನಿನಲ್ಲಿ ಒಂಟಿ ಸಲಗವೊಂದು ದಾಳಿ ನಡೆಸಿದೆ. ಈ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾಯರ್ಾಚರಣೆಗೆ ಸಕ್ರಬೈಲು ಆನೆ ಬಿಡಾರದಿಂದ ಎರಡು ಸಾಕಾನೆಗಳನ್ನು ನಿಯೋಜಿಸಲಾಗಿದೆ. ಕಾಯರ್ಾಚರಣೆ ಪ್ರಗತಿಯಲ್ಲಿದೆ. ಕಾಡಾನೆಗಳ ದಾಳಿ ತಡೆಗಟ್ಟಲು 2017-18ನೇ ಸಾಲಿನಲ್ಲಿ 21.6 ಕಿ.ಮೀ ಆನೆ ನಿರೋಧಕ ಕಂದಕ, 15 ಕಿ.ಮೀ ಸೌರವಿದ್ಯುತ್ ತಂತಿ ಬೇಲಿ (ಸೋಲಾರ್ ಫೆನ್ಸಿಂಗ್) ನಿಮರ್ಾಣ ಮತ್ತು ನಿರ್ವಹಣೆ ಕಾರ್ಯಕೈಗೊಳ್ಳಲಾಗಿದೆ. ಚಿಕ್ಕಮಗಳೂರು, ಕೊಪ್ಪ ಹಾಗೂ ಭದ್ರಾಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಆನೆ ಹಿಮ್ಮೆಟ್ಟಿಸುವ 19 ಕ್ಯಾಂಪ್ಗಳಿವೆ. ವನ್ಯ ಪ್ರಾಣಿಗಳ ದಾಳಿಯಿಂದ 2016-17ರಲ್ಲಿ ಒಬ್ಬರು ಹಾಗೂ 2018-19ನೇ ಸಾಲಿನಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ದಯಾತ್ಮಕ ಧನ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಸದಸ್ಯರಾದ ಎಂ.ಕೆ.ಪ್ರಾಣೇಶ್ ಹಾಗೂ ಸುನೀಲ್ ಸುಬ್ರಮಣಿ ಸದನದ ಬಾವಿಗೆ ಇಳಿದು ಧರಣಿ ನಡೆಸಲು ಮುಂದಾದರು. ಆಗ ಮಧ್ಯಪ್ರವೇಶಿಸಿದ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಸಚಿವರು ಉತ್ತರ ಪೂರ್ಣಗೊಳಿಸಲು ಮೊದಲು ಅವಕಾಶ ನೀಡಿ ಎಂದು ಸೂಚಿಸಿದರು. ಸಭಾಪತಿಯವರ ಸೂಚನೆ ಮೇರೆಗೆ ಸದಸ್ಯರು ತಮ್ಮ ಸ್ಥಾನಗಳಿಗೆ ಮರಳಿದರು.
ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾಜರ್್ ಅವರು ಮಾತನಾಡಿ, ಮಾನವ ಪ್ರಾಣಿ ಸಂಘರ್ಷದ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ಇದರ ಪರಿಹಾರಕ್ಕೆ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿವೆ. ಅರಣ್ಯದಲ್ಲಿ ವನ್ಯ ಪ್ರಾಣಿಗಳಿಗೆ ಸಾಕಾಗುವಷ್ಟು ಆಹಾರ, ನೀರು ಲಭ್ಯವಾಗದಿರುವುದು ಮುಖ್ಯ ಕಾರಣವಾಗಿದೆ. ಪ್ರಾಣಿಗಳು ಒಂದು ಬಾರಿ ಸಮೀಪದ ಕಾಫಿ ಅಥವಾ ಇತರೆ ತೋಟಗಳಿಗೆ ನುಗ್ಗಿದರೆ ಪ್ರತಿಬಾರಿ ಅಲ್ಲಿಗೆ ಬರಲು ರೂಢಿಸಿಕೊಳ್ಳುತ್ತವೆ. ಸಕರ್ಾರ, ಸಚಿವರು ನೀತಿಗಳನ್ನು ರೂಪಿಸಬಹುದು ಸ್ಥಳೀಯ ಅಧಿಕಾರಿಗಳು ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ವನ್ಯ ಜೀವಿ ರಕ್ಷಣೆಗಾಗಿ ಹೋರಾಡುವ ಸಂಘ-ಸಂಸ್ಥೆಗಳು ಮಾನವ ಜೀವ ರಕ್ಷಣೆಗೆ ಸಕರ್ಾರದೊಂದಿಗೆ ಸಹಕರಿಸಬೇಕು ಎಂದರು.