ರಾಯಚೂರು 03: ರಾಯಚೂರು ನಗರ ಘಟಕ ಮತ್ತು ರಾಯಚೂರು ಗ್ರಾಮೀಣ ಘಟಕದ ಪದಾಧಕಾರಿಗಳು ಇದುವರೆಗೂ ಒಂದೇ ಒಂದು ಸಭೆಗಳನ್ನು ನಡೆಸದೆ, ಜಿಲ್ಲಾ ಸಮಿತಿ ಸಭೆಗೂ ಆಗಮಿಸದೆ ಮತ್ತು ರಾಜ್ಯ ಮತ್ತು ಜಿಲ್ಲಾ ಸಮಿತಿ ತೀರ್ಮಾನಗಳನ್ನು ಜಾರಿಗೊಳಿಸದೆ ಸಂಪೂರ್ಣ ನಿಸ್ಕ್ರಿಯವಾಗಿದೆ.
ಅಲ್ಲದೆ ರಾಜ್ಯ ಸಮಿತಿಯ ಮತ್ತು ಜಿಲ್ಲಾ ಸಮಿತಿಯ ಆದೇಶ ಮತ್ತು ನಿರ್ಣಯಗಳ ವಿರುಧ್ಧ ಗುಂಪುಗಾರಿಕೆ ಮಾಡುವ ಮೂಲಕ ಸಂಘ ವಿರೋಧಿ ಕೆಲಸ ಮಾಡಿದ್ದರಿಂದ ಮತ್ತು ಛಲವಾದಿ ಮಹಾಸಭಾದ ಗ್ರಾಮೀಣ ಘಟಕದ ಅಧ್ಯಕ್ಷರಾಗಿದ್ದ ವೀರೇಶ್ ಗಾಣದಾಳ್ ಅವರು ಎಂ ವಸಂತ ಅವರ ಸಂಘದ ಜಿಲ್ಲಾಧ್ಯಕ್ಷರಾಗಿದ್ದರಿಂದ ಮತ್ತು ಛಲವಾದಿ ಮಹಾಸಭಾದ ನಗರ ಘಟಕದ ಅಧ್ಯಕ್ಷ ವಿಜಯಪ್ರಸಾದ್ ಎಂ ವಸಂತ್ ಅವರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರಿಂದ ಇವರಿಬ್ಬರನ್ನು ಸಂಘ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಉಚ್ಚಾಟಿಸಲಾಗಿದೆ.
ಹಾಗೆಯೇ, ಛಲವಾದಿ ಮಹಾಸಭಾದ ರಾಯಚೂರು ನಗರ ಮತ್ತು ತಾಲ್ಲೂಕಿನಲ್ಲಿ ಸಂಘದ ಚಟುವಟಿಕೆಗಳನ್ನು ನಡೆಸಲು ಹೊಸ ಸಮಿತಿಯನ್ನು ಆಯ್ಕೆ ಮಾಡಲು ಜಿಲ್ಲಾ ಸಮಿತಿ ನಿರ್ಣಯಿಸಿದೆ. ಆದ್ದರಿಂದ ರಾಯಚೂರು ನಗರ ಮತ್ತು ತಾಲ್ಲೂಕು, ಗ್ರಾಮೀಣ ಘಟಕದ ಪದಾಧಿಕಾರಗಳನ್ನು ಹೊಸದಾಗಿ ಆಯ್ಕೆ ಮಾಡಲು ದಿನಾಂಕ: 8-12-2024 ರಂದು ಬೆಳಿಗ್ಗೆ 11ಗಂಟೆಗೆ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿರುವ ನೌಕರರ ಭವನದಲ್ಲಿ ಸಭೆ ಕರೆಯಲಾಗಿದೆ.ಸದರಿ ಸಭೆಗೆ ರಾಯಚೂರು ನಗರ ಮತ್ತು ಗ್ರಾಮೀಣ ಪ್ರದೇಶದ ಛಲವಾದಿ ಮಹಾಸಭಾದ ಸದಸ್ಯರು, ಹಿರಿಯರು, ಮುಖಂಡರು, ನೌಕರರು ತಪ್ಪದೇ ಆಗಮಿಸಿ ನೂತನ ಸಮಿತಿಗಳನ್ನು ಆಯ್ಕೆಗೆ ಸಹಕರಿಸುವಂತೆ ಕೋರುತ್ತೇವೆ.ಭೀಮಣ್ಣ ಮಂಚಾಲ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಛಲವಾದಿ ಮಹಾಸಭಾ ರಾಯಚೂರು.