ಪಡೇಕನೂರ ಅಂಗನವಾಡಿ ಕೇಂದ್ರ-3 ಸಿಇಒ ರಿಷಿ ಆನಂದ ಭೇಟಿ

ಪಡೇಕನೂರ ಅಂಗನವಾಡಿ ಕೇಂದ್ರ-3 ಸಿಇಒ ರಿಷಿ ಆನಂದ ಭೇಟಿ  Padekanur Anganwadi Center-3 CEO Rishi Ananda met

ತಾಳಿಕೋಟಿ 12 :  ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯತಿಯ ಪಡೇಕನೂರ ಗ್ರಾಮಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಬುಧವಾರ ಭೇಟಿ ನೀಡಿ ಮೂಲಸೌಕರ್ಯಗಳ ಕುರಿತು ಪರೀಶೀಲನೆ ನಡೆಸಿದರು. ಪಡೇಕನೂರ ಗ್ರಾಮದೊಳಗಿನ ಬಾಕಿ ರಸ್ತೆಗಳ ಸಿಸಿ, ಚರಂಡಿ ನಿರ್ಮಾಣ ಮತ್ತು ಪಡೇಕನೂರ ಗ್ರಾಮದಿಂದ ಕೊಣ್ಣೂರ ಗ್ರಾಮದವರೆಗೆ ಸಿಸಿ ರಸ್ತೆ ನಿರ್ಮಾಣದ ಅವಶ್ಯಕತೆ ಕುರಿತು ಪರೀಶೀಲನೆ ಮಾಡಿದರು.ಪಡೇಕನೂರ ಗ್ರಾಮದಿಂದ ಹಳ್ಳೂರ ಗ್ರಾಮದವರೆಗಿನ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪರೀಶೀಲಿಸಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಕ್ರಮವಹಿಸಲು ಡಬ್ಲ್ಯೂಇ ವಿದ್ಯಾಧರ ನ್ಯಾಮನಗೌಡ ಅವರಿಗೆ ಗುಣಮಟ್ಟದ ಕಾಮಗಾರಿ ಮಾಡಲು ಸೂಚಿಸಿದರು.

ನಂತರ ಪಡೇಕನೂರ ಗ್ರಾಮದ ಅಂಗನವಾಡಿ ಕೇಂದ್ರ-3 ಕ್ಕೆ ಭೇಟಿ ನೀಡಿ ಮಕ್ಳಳ ಹಾಜರಾತಿ ಮತ್ತು ಮಕ್ಕಳಿಗೆ ಉತ್ತಮ ಗುಣಮಟ್ಟದ ಅಹಾರ ನೀಡುತ್ತಿರುವ ಕುರಿತು ಪರೀಶೀಲಿಸಿ, ಸಮಯಕ್ಕೆ ಸರಿಯಾಗಿ ಮಕ್ಕಳ ಪೌಷ್ಟಿಕ ಆಹಾರವನ್ನು ತಯಾರಿಸಿ ಉಣಬಡಿಸಬೇಕು. ಬೇಸಿಗೆ ಪ್ರಾರಂಭವಾಗಿದ್ದು, ಆದಷ್ಟು ನೆರಳಲ್ಲೆ ಮಕ್ಕಳ ಪಾಲನೆ ಮಾಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಗೆ ಸೂಚಿಸಿದರು.ಈ ಸಂದರ್ಭದಲ್ಲಿ ಪಿ.ಆರ್‌.ಇ.ಡಿ. ಡಬ್ಲ್ಯೂಇ ವಿದ್ಯಾಧರ ನ್ಯಾಮನಗೌಡ, ಎ.ಡಬ್ಲ್ಯೂ ಶಿವರಾಜ ನಾಯಕ, ಅಭಿಯಂತರ ಸಂತೋಷ ಲಮಾಣಿ ಇದ್ದರು.