ಸೌರವ್ ಗಂಗೂಲಿ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಹ್ಯಾಮಿಲ್ಟನ್, ಫೆ 5 :    ಹಲವು ದಾಖಲೆಗಳನ್ನು ಈಗಾಗಲೇ ಮುರಿದು ಪ್ರಾಾಬಲ್ಯ ಸಾಧಿಸಿರುವ ರನ್ ಮಶೀನ್ ಖ್ಯಾಾತಿನ ವಿರಾಟ್ ಕೊಹ್ಲಿಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ನೂತನ ಮೈಲುಗಲ್ಲು ಸೃಷ್ಠಿಸಿದ್ದಾರೆ.

ಇಲ್ಲಿನ ಸೆಡಾನ್ ಪಾರ್ಕ್ ಅಂಗಳದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್‌ಗಳಿಂದ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತು. ವಿರಾಟ್ ಕೊಹ್ಲಿ 63 ಎಸೆತಗಳಲ್ಲಿ 51 ರನ್ ಗಳಿಸಿದ್ದರು.

31ರ ಪ್ರಾಯದ ವಿರಾಟ್ ಕೊಹ್ಲಿ ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ 5,123 ರನ್ ಗಳಿಸಿದ್ದಾರೆ ಹಾಗೂ ನಾಯಕನಾಗಿ 148 ಪಂದ್ಯಗಳಿಂದ 5,082 ರನ್ ಗಳಿಸಿರುವ ಸೌರವ್ ಗಂಗೂಲಿ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

ವಿರಾಟ್ ಕೊಹ್ಲಿ  ಈ ಸಾಧನೆ ಮಾಡಲು 87 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾ ನಾಯಕ 21 ಶತಕಗಳು ಹಾಗೂ 23 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಮಹೇಂದ್ರ ಈ ಸಾಧನೆ ಮಾಡಿದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಧೋನಿ 6,641 ರನ್‌ಗಳನ್ನು ಸಿಡಿಸಿದ್ದಾರೆ.  ಮೊಹಮ್ಮದ್ ಅಜರುದ್ದೀನ್ 5,239 ರನ್‌ಗಳನ್ನು ಬಾರಿಸಿದ್ದಾರೆ. 8,497 ರನ್ ಗಳಿಸಿರುವ ರಿಕಿ ಪಾಂಟಿಂಗ್ ಅವರು ಏಕದಿನ ಕ್ರಿಕೆಟ್‌ನಲ್ಲಿ ತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ನಾಯಕರಾಗಿದ್ದಾರೆ. ಈ ಸಾಧನೆ ಮಾಡಲು ಪಾಂಟಿಂಗ್ 230 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.