ತ್ರಿಪುರಾ, ಅಸ್ಸಾಂನಲ್ಲಿ ಭುಗಿಲೆದ್ದ ಹಿಂಸಾಚಾರ: ಸೇನೆ ನಿಯೋಜನೆ

ನವದೆಹಲಿ, ಡಿ 11 :        ಪೌರತ್ವ ತಿದ್ದುಪಡಿ ಕುರಿತು ರಾಜ್ಯಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುತ್ತಿರುವ ನಡುವೆಯೇ ಮತ್ತೊಂದೆಡೆ ದೇಶದ  ಹಲವು ರಾಜ್ಯದಲ್ಲಿ  ಹಿಂಸಾಚಾರ ಭುಗಿಲೆದ್ದಿದೆ. 

ಪ್ರತಿಭಟನಾಕಾರರನ್ನು ನಿಯಂತ್ರಿಸಲು ತ್ರಿಪುರಾ ಮತ್ತು ಅಸ್ಸಾಂಗೆ ಸೇನೆಯನ್ನು ನಿಯೋಜನೆ ಮಾಡಲಾಗಿದೆ. 

ತ್ರಿಪುರಾದ ಕಾಂಚನ್ ಪುರ್ ಮತ್ತು ಮಾನು ಪ್ರದೇಶಗ ಮತ್ತು   ಅಸ್ಸಾಂನ ಬೋನ್ಗೈಗಾಂವ್ ಪ್ರದೇಶಕ್ಕೂ ಸೇನಾಪಡೆ ಕಳಿಹಿಸಲಾಗಿದೆ  ಎಂದೂ ವರದಿ ತಿಳಿಸಿದೆ.

ಈಶಾನ್ಯ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ವ್ಯಾಪಕ  ಹಿಂಸಾಚಾರ ರಕ್ತಪಾತಕ್ಕೆ  ತಿರುಗಿದ ಕಾರಣ  ಸೇನೆ ರವಾನಿಸಲಾಗಿದೆ ಎಂದೂ  ವರದಿ ಹೇಳಿದೆ.