ಗ್ರಾಮಗಳು ಅಭಿವೃದ್ದಿ ಹೊಂದಲು ಬಿಜೆಪಿಗೆ ಮತ ಹಾಕಿ: ಸವದಿ

ಸಂಬರಗಿ 29:  ರಾಜ್ಯ ಜಿಲ್ಲೆ ತಾಲೂಕಾ, ಗ್ರಾಮಗಳು  ಅಭಿವೃದ್ದಿ ಹೊಂದಲು ಬಿ.ಜೆ.ಪಿ ಪಕ್ಷದ ಅಭ್ಯಥರ್ಿಗೆ ಹೆಚ್ಚಿನ ಮತ ಹಾಕಿ ಆಯ್ಕೆ ಮಾಡಬೇಕು ಕಾಗವಾಡ ಕ್ಷೇತ್ರ ಅಭ್ಯಥರ್ಿ ಶ್ರೀಮಂತ ಪಾಟೀಲ ಆಯ್ಕೆಯಾದ ನಂತರ ಸಚಿವ ಸ್ಥಾನ ಪಡೆದುಕೊಂಡು ತಮ್ಮ ಕ್ಷೇತ್ರದಲ್ಲಿ ಬರುತ್ತಾರೆ ಎಂದು ರಾಜ್ಯದ ಉಪಮುಖ್ಯಮಂತ್ರಿ  ಲಕ್ಷ್ಮಣ ಸವದಿ ಹೇಳಿದರು. 

ಕಾಗವಾಡ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಂಬಗಿ, ಸಂಬರಗಿ, ಶಿರೂರ, ಅರಳಿಹಟ್ಟಿ ಸೇರಿದಂತ ಈ ಭಾಗದ ಗ್ರಾಮಗಳಲ್ಲಿ ಶ್ರೀಮಂತ ಪಾಟೀಲ ಪರ ಪ್ರಚಾರ ಮಾಡಿ ಮತ ಯಾಚನೆ ಮಾಡಿ ಮಾತನಾಡಿ ಅವರು ಕ್ಷೇತ್ರದ ಅಭಿವೃದ್ದಿ ಕಾರಣದಿಂದ ಸುಮಾರು 17 ಶಾಸಕರು ರಾಜಿನಾಮೆ ನೀಡಿ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಅವರಿಂದ ಯಡುಯೂರಪ್ಪ ಸರಕಾರ ಅಧಿಕಾರಕ್ಕೆ ಬಂದು ನಾನು ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾನೆ.  ನಾನು ಮುಂದುವರೆಯಬೇಕು ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಠಳ್ಳಿ ಸಚಿವ ಸ್ಥಾನ ಪಡೆಯಬೇಕಾದರೆ ಇನ್ನೂ 3 ವರ್ಷ 6 ತಿಂಗಳು ಸರಕಾರ ಮುಂದುವರೆಯಲು ನಮ್ಮ ಪಕ್ಷದ ಅಭ್ಯಥರ್ಿಗಳನ್ನು ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸಬೇಕು ಬಹುದೊಡ್ಡ ಜವಬ್ದಾರಿ ನಮ್ಮೆಲ್ಲರಿಗೀದೆ ಡಿಸೆಂಬರ್ 5 ರಂದು ನಡೆಯುತ್ತಿರುವ ಉಪ ಚುನಾವಣೆಗೆ ಎಲ್ಲರು ಮತ ನೀಡಿ ಶ್ರೀಮಂತ ಪಾಟೀಲರನ್ನು ಗೆಲ್ಲಿಸಬೇಕೆಂದು ಅವರು ವಿನಂತಿಸಿದರು.

ಈ ವೇಳೆ ಸಚಿವ ಶಶಿಕಾಂತ ಜೊಲ್ಲೆ ಮಾತನಾಡಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿ.ಜೆ.ಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ದಿ ಹೆಚ್ಚಾಗುವುದು ಎಲ್ಲರ ಒಕ್ಕೂಟದಿಂದ ಅತೀ ಹೆಚ್ಚು ಮತ ನೀಡಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಬೇಕೆಂದು ತಮ್ಮಲ್ಲೇರ ದೊಡ್ಡ ಜವಾಬ್ದಾರಿ ಎಂದು ಹೇಳಿದರು.

 ಈ ವೇಳೆ ಶ್ರೀಮಂತ ಪಾಟೀಲ ಮಾತನಾಡಿ 1 ವರ್ಷ 6 ತಿಂಗಳ ಅವಧಿಯಲ್ಲಿ ಯಾವುದೇ ಅಭಿವೃದ್ದಿ ಆಗಿಲ್ಲ ಜೆ.ಡಿ.ಎಸ್ ಮೈತ್ರಿ ಸರಕಾರ ಬೇಸತ್ತು ಬಿ.ಜೆ.ಪಿ ಪಕ್ಷ ಸೇರ್ಪಡೆಯಾಗಿ ಚುನಾವಣೆ ಕಣದಲ್ಲಿ ಇಳಿದಿದ್ದೇವೆ. ಕ್ಷೇತ್ರದ ಅಭಿವೃದ್ದಿಗಾಗಿ ನಮಗೆ ಮತ ನೀಡಿ.

ಈ ವೇಳೆ ಮಹಾದೇವ ಕೊರೆ, ಆರ್ ಎಂ ಪಾಟೀಲ, ವಿನಾಯಕ ಬಾಗಡಿ, ಆನಂದ ಪಾಟೀಲ, ಗೊವಿಂದ ಪಾಟೀಲ, ಅಣ್ಣಾಸಾಬ ಮಿಸಾಲ, ಅಬ್ದುಲ ಮುಲ್ಲಾ, ಸಂಜು ಮಾಳಿ, ಶಂಕರ ಕೆಂಪವಾಡೆ, ಭಾರತ ಪಾಟೀಲ, ಮಾನಿಕ ಸೂರ್ಯವಂಶಿ, ವಿಶ್ವನಾತ ದೇವಮಾನೆ, ರಘು ವೇಲಾಪುರ ಸೇರಿದ ಅನೇಕ ಕಾರ್ಯ ಕರ್ತರು ಹಾಜರಿದ್ದರು.