ರಸ್ತೆಗಾಗಿ ಕಾಯುತ್ತಿರುವ ಗ್ರಾಮಸ್ಥರು

Villagers waiting for the road

ರಸ್ತೆಗಾಗಿ ಕಾಯುತ್ತಿರುವ ಗ್ರಾಮಸ್ಥರು  

ಯಮಕನಮರಡಿ 11: ಸ್ವಾತಂತ್ರ್ಯ ಸಿಕ್ಕು ಇಂದು ನಾವು ಶತಮಾನದತ್ತ ಸಾಗುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಾದ ಅಭ್ಯರ್ಥಿಗಳನ್ನು ಆರಿಸಿ ಕಳಿಸುತ್ತಿದ್ದೇವೆ. ಆದರೆ ಇಂದಿಗೂ ಕೆಲ ಗ್ರಾಮಗಳು ಮೂಲಭೂತ ಸೌಕರ್ಯಗಳಿಗಾಗಿ ಕಾಯುತ್ತ ಕುಳಿತಿವೆ. ಅದರಲ್ಲಿ ಹತ್ತರಗಿ ಗ್ರಾ ಪಂ ವ್ಯಾಪ್ತಿಗೆ ಬರುವ ದಾದಬಾನಹಟ್ಟಿ ಕೂಡ ಒಂದಾಗಿದೆ. ಗ್ರಾಮದಲ್ಲಿ  ಅನಾಥವಾಗಿ ಉಳಿದಿರುವ ಮೂಲ ಸೌಕರ್ಯಗಳಿಲ್ಲದ ಬೀದಿಗಳು ರಸ್ತೆಗಾಗಿ ಕಾಯುತ್ತಿವೆ.  ಈ ರಸ್ತೆ ರೀಪೇರಿ ಯಾವಾಗ ಎಂದು ಜನರು ಮಾತನಾಡುತ್ತಿದ್ದಾರೆ.