ನವದೆಹಲಿ, ಸೆಪ್ಟೆಂಬರ್ 10 ಆರ್ಬ್ಟರ್ ಮೂಲಕ ಚಂದ್ರನ ಅಂಗಳದಲ್ಲಿ ವಿಕ್ರಮ್ ಲಾಂಡರ್ ಪತ್ತೆ ಮಾಡಲಾಗಿದೆ,ಮೇಲಾಗಿ ಅದು ಸುಸ್ಥಿತಿಯಲ್ಲಿದ್ದು ಸಂಪರ್ಕಕ್ಕೆ ನಿರಂತರ ಯತ್ನ ಸಾಗಿದೆ ಎಂದು ಮೂಲಕ ಇಸ್ರೋ ಮಂಗಳವಾರ ಸ್ಪಷ್ಪಡಿಸಿದೆ.
ಟ್ವೀಟ್ನಲ್ಲಿ, ಈ ವಿಷಯ ತಿಳಿಸಿದ್ದು ಆದರೆ ಲ್ಯಾಂಡರ್ ಜೊತೆ ವಿಜ್ಞಾನಿಗಳು ಯಾವುದೇ ಸಂಪರ್ಕ ಸಾಧಿಸಲು ಇನ್ನು ಸಾಧ್ಯವಾಗಿಲ್ಲ ಎಂದೂ ಹೇಳಿದೆ.
ಲ್ಯಾಂಡರ್ ನೊಂದಿಗೆ ಸಂವಹನ ಮರಳಿ ಸ್ಥಾಪಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಒಟ್ಟಾರೆ
ಚಂದ್ರಯಾನ ಎರಡು ಮತ್ತು ಇದರ ಕಾರ್ಯಚರಣೆಗಾಗಿ ನಡೆಸಿದ ಎಲ್ಲ ವೈಜ್ಞಾನಿಕ ಪ್ರಯತ್ನಗಳು ಶೇ .95 ರಷ್ಟು ಯಶಸ್ಸುಗಳಿಸಿದ್ದು ಅಮೆರಿಕದ ನಾಸಾ ಕೂಡ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದೆ.