ವಿಜಯೇಂದ್ರ ಅಡಜಸ್ಟಮೆಂಟ್ ರಾಜಕಾರಣ ಮಾಡುತ್ತಿದ್ದಾರೆ: ಬಸನಗೌಡ ಪಾಟೀಲ

Vijayendra is doing adjustment politics: Basanagouda Patil

ವಿಜಯೇಂದ್ರ ಅಡಜಸ್ಟಮೆಂಟ್ ರಾಜಕಾರಣ ಮಾಡುತ್ತಿದ್ದಾರೆ: ಬಸನಗೌಡ ಪಾಟೀಲ 

ಯರಗಟ್ಟಿ, 07 : ಸಮೀಪದ ಪಟ್ಟಣಕ್ಕೆ ಭೇಟೀನೀಡುತ್ತಿರುವ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪಂಚಮಸಾಲಿ ಮುಖಂಡರ ಸಭೆ ನಡೆಸಿದರು. ರೈತ ನಾಯಕ ಎನಿಸಿಕೊಂಡವರು ವಿದೇಶದಲ್ಲಿ ಆಸ್ತಿ ಮಾಡಿದ್ದೇಕೆ. ಇಲ್ಲಿಯವರೆಗೂ ಹಾಕಿದ ಸವಾಲಿಗೆ ಉತ್ತರ ನೀಡಿಲ್ಲ. ವಿಜಯೇಂದ್ರ ಅಡಜಸ್ಟಮೆಂಟ್ ರಾಜಕಾರಣ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಹಾಳು ಮಾಡುತ್ತಿದ್ದಾರೆ.ಸಿದ್ಧರಾಮಯ್ಯನವರು ಬಯ್ಯುವ ನೀವು ಮಹಾಭ್ರಷ್ಟರು. ಜನರಲ್ಲಿ ಹೊಸ ಪಕ್ಷದ ಕೂಗಿದೆ. ಜನರು ತನುಮನಧನದಿಂದ ಹೊಸ ಪಕ್ಷಕ್ಕಾಗಿ ಸಿದ್ಧರಿದ್ದಾರೆ ಎಂದರು. 

ನನಗೆ ಶ್ರಿರಾಮ ಸೇನೆ, ಬಜರಂಗ ದಳ ಹಿಂದೂ ಕಾರ್ಯಕರ್ತರು ಸಾಥ್ ಕೊಡುತ್ತಿದ್ದಾರೆ ಬಿಜೆಪಿಯಲ್ಲಿ ಇರೋರು 99 ಅ ಹಿಂದೂ ಕಾರ್ಯಕರ್ತರು ಅಪ್ಪ ಮಗ ಸೇರಿ ನನ್ನನ್ನ ಪಕ್ಷದಿಂದ ಹೊರ ಹಾಕಿದ್ದಾರೆ.ಯಡಿಯೂರ​‍್ಪ ಮತ್ತು ವಿಜಯೇಂದ್ರ ಅವರದ್ದು ಬ್ರಷ್ಟ ಕುಟುಂಬಗಳು ಹಿಂದೂ ಪಕ್ಷ ಕಟ್ಟುವ ವಿಚಾರ ಕಾರ್ಯಕರ್ತರ ಬೆಡಿಕೆ ಇದೆ ಕರ್ನಾಟಕ ಬಿಜೆಪಿ ಪಕ್ಷ ಹೊಂದಾಣಿಕೆ ಪಕ್ಷ ಆಗಿದೆ. ಬಿಜೆಪಿ ಅದ್ಯಕ್ಷ ವಿಜಯೇಂದ್ರ ಅವರಿಗೆ ಬಹಳ ಕೆಟ್ಟ ಕಮೇಂಟ್ ಗಳು ಬರುತ್ತಿವೆ ನೀನು ಹೊಂದಾಣಿಕೆ ಗಿರಾಕಿ, ನೀನು ಮೋಸಗಾರ, ಯಡಿಯೂರ​‍್ಪ ಕುಟುಂಬ ಹಿಂದೂ ಕಾರ್ಯಕರ್ತರಿಗೆ ಸಹಾಯ ಮಾಡಿಲ್ಲ ಹಿಂದೂ ಕಾರ್ಯಕರ್ತರ ಮೆಲೆ ಕೊಲೆ ಹಲ್ಲೆ ಆದ್ರೆ ಇವರು ಕೆಯಾರೆ ಎನ್ನಲಿಲ್ಲ ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಆದಾಗ ರಕ್ಷಣೆ ಕೊಡಲಿಲ್ಲ ಇನ್ನು ಕರ್ನಾಟಕದ ಹಿಂದೂ ಕಾರ್ಯಕರ್ತನಿಗೆ ಏನೂ ರಕ್ಷಣೆ ಕೊಡ್ತಾರೆ ಹಿಂದೂ ಪಕ್ಷ ಕಟ್ಟಬೇಕೆಂದು ಕಾರ್ಯಕರ್ತರ ಬೇಡಿಕೆ ಇದೆ ಚಾಮರಾಜನಗರದಿಂದ ಬಿದರ ವರೆಗೆ ಒತ್ತಾಯ ಇದೆ ರಾಜ್ಯ ಪ್ರವಾಸ ಮಾಡಿ ಜನರ ಅಭಿಪ್ರಾಯ ತೆಗೆದುಕ್ಕೊಳ್ಳುತ್ತೆನೆ ಎಂದು ಹೇಳಿದರು. 

ಬಿಜೆಪಿ ಅಹೋರಾತ್ರಿ ಧರಣಿಯಲ್ಲಿ ಶಾಸಕರೆ ಸಾಥ್ ಕೊಡಲಿಲ್ಲ ಲಿಂಗಾಯತರಿಗೆ ಅನ್ಯಾಯ ಆಗಿದ್ರೆ ಯಡಿಯೂರ​‍್ಪ ಅವರಿಂದಲೆ ಅನ್ಯಾಯ ಆಗಿದೆ ಮೀಸಲಾತಿಯಲ್ಲಿ ಅನ್ಯಾಯ ಮಾಡಿದ್ದಾರೆ. ಯಡಿಯೂರ​‍್ಪ ಅವರು ಲಿಂಗಾಯತರ ವಿಶ್ವಾಸ ಕಳೆದುಕ್ಕೊಂಡಿದ್ದಾರೆ ಎಲ್ಲ ಸಮುದಾಯದವರು ನನಗೆ ಸಾಥ್ ಕೊಟ್ಟಿದ್ದಾರೆಮುಂದಿನ ದಿನಗಳಲ್ಲಿ ಉತ್ತರ ಕರ್ನಾಕಟ ಅಭಿವೃದ್ಧಿ ಮಾಡಬೇಕು ಅನ್ನೋದೆ ನನ್ನ ಗುರಿ ಹಾಗೂ 17 ಲಕ್ಷ ಹೆಕ್ಟರ್ ನೀರಾವರಿ ಯೋಜನೆಯನ್ನ ಜಾರಿಗೆ ತರಬೇಕು ಯಾವ ಸಿಎಂ ನೂ ಅಭಿವೃದ್ಧಿ ಮಾಡಲಿಲ್ಲವಿಜಯಾನಂದ ಕಾಶಪ್ಪನ್ನವರ ಹೇಳಿಕೆಗೆ ಟಾಂಗ್ ಕೊಟ್ಟ ಯತ್ನಾಳವಿಜಯಾನಂದ ಕಾಶಪ್ಪನವರ ಹಂದಿ ಇದ್ದಾಗೆ ಹಂದಿಗಳಿಗೆ ಪ್ರತಿಕ್ರಿಯೇ ಕೊಡಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು. 

ನಿಂತರ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳಿದರು. ಈ ವೇಳೆ ಪಂಚಮಸಾಲಿ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ, ಪಂಚನಗೌಡ ದ್ಯಾಮನಗೌಡ್ರ, ಶೇಖರ ಗೋಕಾಂವಿ, ಶ್ರೀಕಾಂತ ಮಲ್ಲಗೌಡ್ರ, ಸುಭಾಸ್ ಗೀರೀಗೌಡ್ರ, ಗುರುಶಾಂತ ಚಂದರಗಿ, ಈರಣ್ಣಾ ಹುದ್ದಾರ, ಶಂಕರಗೌಡ ಪಾಟೀಲ, ರವಿಕುಮಾರ ಅಣ್ಣಿಗೇರಿ, ಈರಣ್ಣಾ ಹೂಲ್ಲೂರ, ರಾಜು ಬಾರ್ಕಿ ಸೇರಿದಂತೆ ಅನೇಕ ಪಂಚಮಸಾಲಿ ಮುಖಂಡರು ಮತ್ತು ಹಿಂದೂ ಕಾರ್ಯಕರ್ತರು ಇದ್ದರು.