ವಿಜಯರಾಜ ಶಿದ್ಲಿಂಗ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ
ಗದಗ 08: ಇತ್ತೀಚಿಗೆ ಜರುಗಿದ 2025 ನೆ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ನಗರದ ಎ.ಎಸ್.ಎಸ್. ಕಾಲೇಜಿನ ವಿಧ್ಯಾರ್ಥಿ ವಿಜಯರಾಜ ಎನ್ ಶಿದ್ಲಿಂಗ ಎಂಬ ವಿಧ್ಯಾರ್ಥಿಯು ಸ್ಟಾಟಿಸ್ಟಿಕ್ಸ್-100, ಎಕಾನಾಮಿಕ್-100 ಅಕೌಂಟನ್ಸಿ-100, ಹಿಂದಿ-98, ಬಿಸಿನೆಸ್ ಸ್ಟಡಿಸ್-96, ಇಂಗ್ಲೀಷ್-96 ಸೇರಿದಂತೆ 590 ಅಂಕಗಳನ್ನು (ಶೇ. 98.33) ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಾಧನೆ ಮಾಡಿದ ವಿಧ್ಯಾರ್ಥಿಗೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಪಾಲಕರು ಅಭಿನಂಧನೆ ಸಲ್ಲಿಸಿದ್ದಾರೆ.