ವಿಜಯಪುರ ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ಜಿಲ್ಲೆಯಾಗಲಿದೆ. ದೇಶದ ಹೆಸರಾಂತ ಕೋಚಿಂಗ್ ಕೇಂದ್ರವಾಗಲಿದೆ: ಸುನೀಲಗೌಡ ಪಾಟೀಲ

Vijayapura will become the richest district in the state. It will become a renowned coaching centre

ವಿಜಯಪುರ ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ಜಿಲ್ಲೆಯಾಗಲಿದೆ.  ದೇಶದ ಹೆಸರಾಂತ ಕೋಚಿಂಗ್ ಕೇಂದ್ರವಾಗಲಿದೆ: ಸುನೀಲಗೌಡ ಪಾಟೀಲ 

ವಿಜಯಪುರ 19: ಮುಂಬರುವ ದಿನಗಳಲ್ಲಿ ವಿಜಯಪುರ ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ಜಿಲ್ಲೆಯಾಗಲಿದೆ.  ದೇಶದ ಹೆಸರಾಂತ ಕೋಚಿಂಗ್ ಕೇಂದ್ರವಾಗಲಿದೆ ಎಂದು ಬಿ.ಎಲ್‌.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ನಗರದ ಬಿ.ಎಲ್‌.ಡಿ.ಇ ಸಂಸ್ಥೆ ಅಲೆನ್ ಕರಿಯರ್ ಅಕ್ಯಾಡೆಮಿ ಜೊತೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದು, ಇದರ ಅಂಗವಾಗಿ ಬಿ.ಎಲ್‌.ಡಿ.ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ರವಿವಾರ ನಡೆದ ಓರಿಯಂಟೆಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಈ ಮುಂಚೆ ಬರಕ್ಕೆ ಹೆಸರಾಗಿದ್ದ ವಿಜಯಪುರ ಜಿಲ್ಲೆಯ ಜನ ಶಿಕ್ಷಣಕ್ಕಾಗಿ ಧಾರವಾಡ ಮತ್ತು ಬೆಳಗಾವಿ ಹಾಗೂ ಆರೋಗ್ಯ ಸಂಬಂಧಿ ಚಿಕಿತ್ಸೆಗಳಿಗಾಗಿ ಮಹಾರಾಷ್ಟ್ರದ ಮೀರಜ ಹಾಗೂ ಸೋಲಾಪುರವನ್ನು ಅವಲಂಬಿಸಿದ್ದರು.  ಆದರೆ, ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ದಿ. ಬಿ. ಎಂ. ಪಾಟೀಲ ಅವರು ಬಿ.ಎಲ್‌.ಡಿ.ಇ ಸಂಸ್ಥೆಯಿಂದ ನಾನಾ ಎಂಜಿನಿಯರಿಂಗ್, ಮೆಡಿಕಲ್, ನರ್ಸಿಂಗ್, ಕಾನೂನು, ಶಿಕ್ಷಣ ಕಾಲೇಜುಗಳು, ಆಸ್ಪತ್ರೆ ಪ್ರಾರಂಭಿಸುವ ಮೂಲಕ ಬಸವನಾಡಿನ ಜನರಿಗೆ ಇಲ್ಲಿಯೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ ಸೇವೆ ಒದಗಿಸಲು ಅಭಿವೃದ್ಧಿಯ ಕ್ರಾಂತಿ ಮಾಡಿದರು.  ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿ ನೀರಾವರಿ ಕ್ರಾಂತಿ ಮಾಡಿದರು.   

ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೇಗಿರಿಸುವ ಮೂಲಕ ದೇಶದ 10 ಅತ್ಯುನ್ನತ ವಿವಿಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಬರಲು ಶ್ರಮಿಸಿದ್ದಾರೆ.  ಈಗ ಕೈಗಾರಿಕೆ ಸಚಿವರಾಗಿ ಕೈಗಾರಿಕೆ ಕ್ರಾಂತಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ವಿಜಯಪುರ ಜಿಲ್ಲೆಯೊಂದರಲ್ಲಿಯೇ ಸುಮಾರು 50 ಹೊಸ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಅರ್ಜಿಗಳು ಬಂದಿವೆ.  ಇದು ಈ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಜಲಕ್ರಾಂತಿಯಿಂದಾಗಿ ಆಗಿರುವ ಸಮೃದ್ಧಿಯ ಪ್ರತೀಕವಾಗಿದೆ.  ಅಲ್ಲದೇ, ಇದರಿಂದ ಜಿಲ್ಲೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಓದ್ಯೋಗಿಕವಾಗಿ ಅಭಿವೃದ್ಧಿಯಾಗಲಿದ್ದು, ಮುಂಬರುವ ದಿನಗಳಲ್ಲಿ ಬಸವನಾಡು ರಾಜ್ಯದ ಅತ್ಯಂತ ಶ್ರೀಮಂತ ಜಿಲ್ಲೆಯಾಗಲಿದೆ ಎಂದು ಅವರು ಹೇಳಿದರು.  ದೇಶದ ಹೆಸರಾಂತ ಕೋಟಾದ ಅಲೆನ್ ಕರಿಯರ್ ಇನಸ್ಟಿಟ್ಯೂಟ್ ಈಗ ಬಿ.ಎಲ್‌.ಡಿ.ಇ ಸಂಸ್ಥೆಯೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿರುವುದರಿಂದ ಮುಂಬರುವ ದಿನಗಳಲ್ಲಿ ವಿಜಯಪುರ ಹೆಸರಾಂತ ಕೋಚಿಂಗ್ ಸೆಂಟರ್ ಆಗಲಿದೆ.  ಮುಂದಿನ ವರ್ಷದಿಂದ ಬಿ.ಎಲ್‌.ಡಿ.ಇ ಸಂಸ್ಥೆಯ ವತಿಯಿಂದ ಕೋಚಿಂಗ್ ವಿದ್ಯಾರ್ಥಿಳಿಗಾಗಿ ಹಾಸ್ಟೆಲ್ ಮತ್ತು ಮೆಸ್ ವ್ಯವಸ್ಥೆ ಮಾಡಲಾಗುವುದು ಎಂದು ಸುನೀಲಗೌಡ ಪಾಟೀಲ ತಿಳಿಸಿದರು.  ಅಲೆನ್ ಕರಿಯರ್ ಅಕ್ಯಾಡೆಮಿಯ ದಕ್ಷಿಣ ವಲಯದ ಆಪರೇಶನ್ ಕೋರ್ ಟೀಮ್ ಮೆಂಬರ್ ಸೀತಾರಾಮ ನಂದೂರಿ ಮಾತನಾಡಿ, ಬಿ.ಎಲ್‌.ಡಿ.ಇ ಸಂಸ್ಥೆ ಶಿಕ್ಷಣದ ಬಗ್ಗೆ ಹೊಂದಿರುವ ಅಗಾಧ ಜ್ಞಾನ ಮತ್ತು ಕಾಳಜಿಗೆ ಮನಸೋತು ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದೇವೆ.  

 ಆಧುನಿಕ ಜಗತ್ತಿನಲ್ಲಿ ಅಗತ್ಯಕ್ಕೆ ತಕ್ಕಂತೆ ಶಿಕ್ಷಣಕ್ಕೆ ಸಕಲ ರೀತಿಯಲ್ಲಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಿರುವುದು ಸಂತಸದ ವಿಷಯವಾಗಿದೆ.  ಈ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅದೃಷ್ಠವಂತರು.  11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಎರಡು ವರ್ಷ ಅಂಕಗಳಿಗೆ ಬೆನ್ನು ಬೀಳದೇ ಜ್ಞಾನದ ನ್ನು ಹತ್ತಿದರೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್‌. ವಿ. ಕುಲಕರ್ಣಿ, ಆಡಳಿತಾಧಿಕಾರಿ ವಿಲಾಸ ಬಗಲಿ, ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜಿನ ಪ್ರಾಚಾರ್ಯ ನವೀನ್ ಎಸ್‌. ಅಲೆನ್ ಸಂಸ್ಥೆಯ ಸೆಂಟರ್ ಹೆಡ್ ಪ್ರೇಮ್ ಕಿಶೋರ, ಪಿಯು ಕಾಲೇಜುಗಳ ಪ್ರಾಚಾರ್ಯರಾದ ಗೀರೀಶ ಅಕಮಂಚಿ, ಸಿ. ಬಿ. ಪಾಟೀಲ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.ಧನ್ಯವಾದಗಳು.ಕಠಠ ಅಚಿಠಿಣಠ:1 ಂಟಿಜ 2 ಒಐಅ ಖಃಕ ಂಟಟಜಟಿ ಓಡಿಜಟಿಣಚಿಣಠ ಕಡಿಠಡಿಚಿಟಟಜ:: ವಿಜಯಪುರದಲ್ಲಿ ನಡೆದ ಅಲೆನ್ ಕರಿಯರ್ ಅಕ್ಯಾಡೆಮಿ ಓರಿಯಂಟೇಶನ್ ಕ್ರಾರ್ಯಕ್ರಮವನ್ನು ಬಿ.ಎಲ್‌.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಶತ ಶಾಸಕ ಸುನೀಲಗೌಡ ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಲೆನ್ ಕರಿಯರ್ ಅಕ್ಯಾಡೆಮಿಯ ದಕ್ಷಿಣ ವಲಯದ ಆಪರೇಶನ್ ಕೋರ್ ಟೀಮ್ ಮೆಂಬರ್ ಸೀತಾರಾಮ ನಂದೂರಿ, ಡಾ. ಆರ್‌. ವಿ. ಕುಲಕರ್ಣಿ, ಆಡಳಿತಾಧಿಕಾರಿ ವಿಲಾಸ ಬಗಲಿ,  ಬಿ. ಎಂ. ಪಾಟೀಲ ಪಿಯು ಕಾಲೇಜಿನ ಪ್ರಾಚಾರ್ಯ ನವೀನ್ ಎಸ್‌. ಅಲೆನ್ ಸಂಸ್ಥೆಯ ಸೆಂಟರ್ ಹೆಡ್ ಪ್ರೇಮ್ ಕಿಶೋರ ಉಪಸ್ಥಿತರಿದ್ದರು.3 ಒಐಅ ಖಃಕ ಂಟಟಜಟಿ ಓಡಿಜಟಿಣಚಿಣಠ ಕಡಿಠಡಿಚಿಟಟಜ ವಿಜಯಪುರದಲ್ಲಿ ನಡೆದ ಅಲೆನ್ ಕರಿಯರ್ ಅಕ್ಯಾಡೆಮಿ ಓರಿಯಂಟೇಶನ್ ಕ್ರಾರ್ಯಕ್ರಮವನ್ನು ಬಿ.ಎಲ್‌.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಶತ ಶಾಸಕ ಸುನೀಲಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿದರು.   

ಈ ಸಂದರ್ಭದಲ್ಲಿ ಅಲೆನ್ ಕರಿಯರ್ ಅಕ್ಯಾಡೆಮಿಯ ದಕ್ಷಿಣ ವಲಯದ ಆಪರೇಶನ್ ಕೋರ್ ಟೀಮ್ ಮೆಂಬರ್ ಸೀತಾರಾಮ ನಂದೂರಿ, ಡಾ. ಆರ್‌. ವಿ. ಕುಲಕರ್ಣಿ, ವಿಲಾಸ ಬಗಲಿ, ನವೀನ್ ಎಸ್‌., ಪ್ರೇಮ್ ಕಿಶೋರ ಉಪಸ್ಥಿತರಿದ್ದರು.4 ಒಐಅ ಖಃಕ ಂಟಟಜಟಿ ಓಡಿಜಟಿಣಚಿಣಠ ಕಡಿಠಡಿಚಿಟಟಜ: ವಿಜಯಪುರದಲ್ಲಿ ನಡೆದ ಅಲೆನ್ ಕರಿಯರ್ ಅಕ್ಯಾಡೆಮಿ ಓರಿಯಂಟೇಶನ್ ಕ್ರಾರ್ಯಕ್ರಮದಲ್ಲಿ ಪೋಸ್ಟರನ್ನು ಬಿ.ಎಲ್‌.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಶತ ಶಾಸಕ ಸುನೀಲಗೌಡ ಪಾಟೀಲ ಬಿಡುಗಡೆ ಮಾಡಿದರು.  ಈ ಸಂದರ್ಭದಲ್ಲಿ ಅಲೆನ್ ಕರಿಯರ್ ಅಕ್ಯಾಡೆಮಿಯ ದಕ್ಷಿಣ ವಲಯದ ಆಪರೇಶನ್ ಕೋರ್ ಟೀಮ್ ಮೆಂಬರ್ ಸೀತಾರಾಮ ನಂದೂರಿ, ಡಾ. ಆರ್‌. ವಿ. ಕುಲಕರ್ಣಿ, ವಿಲಾಸ ಬಗಲಿ, ನವೀನ ಎಸ್‌., ಪ್ರೇಮ್ ಕಿಶೋರ ಮುಂತಾದವರು ಉಪಸ್ಥಿತರಿದ್ದರು.