ಲೋಕದರ್ಶನ ವರದಿ
ವಿಜಯಪುರ 19; ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ವಿಜಯಪುರ ಹಾಗೂ ನವಬಾಗ ನಗರ ಆರೋಗ್ಯ ಕೇಂದ್ರ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ, ನಿರಾಶ್ರೀತರ ಪರಿಹಾರ ಕೇಂದ್ರ ಅಫಜಲಪೂರ ಟಕ್ಕೆ ವಿಜಯಪುರ ಇವರ ಸಹಯೋಗದಲ್ಲಿ ತಾಲೂಕಾ ಮಟ್ಟದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜಯುರ ತಹಶೀಲ್ದಾರ ಮೋಹನಕುಮಾರಿ ಅವರು ಮಾತನಾಡಿ, ಕುಟುಂಬಗಳಲ್ಲಿ ಕಲಹ ಉಂಟಾಗಿರುತ್ತೀರುವದರಿಂದ, ವಿಬಕ್ತ ಕುಟುಂಬಗಳಲ್ಲಿ ಅಡೆತಡೆಗಳು ಬಂದನಂತರ ಮಾನಸಿಕ ಒತ್ತಡಗಳಿಗೆ ಒಳಗಾಗಿ ಕ್ಷಿಣಿಸುತ್ತಿದ್ದಾರೆ. ಕುಟುಂಬದಲ್ಲಿ ನಿರಾಸಕ್ತಿ ನಡುವಳಿಕೆಯಲ್ಲಿ ಬದಲಾವಣೆ ಮಾನಸಿಕ ಕಾಯಿಲೆ ಜೀವನದಲ್ಲಿ ನಿರಾಶೆ ಕಂಡು ಬರುವದಾಗಿ ಹೇಳಿದರು ಎಲ್ಲ ಒತ್ತಡಗಳಿಗೆ ಒಳಗಾಗದೆ ಮಾನಸಿಕವಾಗಿ ಸದೃಡವಾಗಿ ಮುನ್ನುಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಾಜಿ ಪಾಟೀಲ ಅವರು ವಹಿಸಿದ್ದರು. ಜಿಲ್ಲಾ ಕುಷ್ಠ ರೋಗ ಅಧಿಕಾರಿ ಡಾ.ಸಂಪತ್ ಗುಣಾರಿ, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಜಿನ್ನತ-ಉನ್-ನಿಸ್ಸಾ, ಮಂಜುನಾಥ ಗಲಗಲಿ, ಜಾವೀದ ಬಾಗಾಯತ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕತರ್ೆಯರು, ನಿರಾಶ್ರಿತರ ಕೇಂದ್ರದ ಸಿಬ್ಬಂದಿಗಳು, ಪೋಲಿಸ್ ಇಲಾಖೆ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್.ಬಾಗವಾನ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಎಸ್.ಎಸ್.ಚಟ್ಟೆರ ವಂದಿಸಿದರ