ಲೋಕದರ್ಶನ ವರದಿ
ವಿಜಯಪುರ 20: ವಿಜಯಪುರ ತಾಲ್ಲೂಕಿನ ಜಂಬಗಿ (ಆ) ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಚಿಕ್ಕ ನೀರಾವರಿ ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ಜಂಬಗಿ ಗ್ರಾಮಸ್ಥರ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂಗಮನಾಥ ಔರಸಂಗ ಮಾತನಾಡಿ, ಜಂಬಗಿ ಗ್ರಾಮವು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ, ಆದರೆ ಗ್ರಾಮಕ್ಕೆ 15 ದಿನಗಳಿಂದ ಕುಡಿಯುವ ನೀರು ಸರಬರಾಜು ಬಂದ್ ಆಗಿದೆ, ಗ್ರಾಮದಲ್ಲಿ ಕುಡಿಯುವ ಜಲ ಮೂಲಗಳು ಬತ್ತಿ ಹೋಗಿದ್ದು, ಟ್ಯಾಂಕರ್ ನೀರು ಪೂರೈಸಲು ಟ್ರ್ಯಾಕ್ಟರ್ ಮಾಲೀಕರು ಯಾರು ಮುಂದೆ ಬರುತ್ತಿಲ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ ಎಂದರು.
ಜಂಬಗಿ ಗ್ರಾಮದಲ್ಲಿ ಚಿಕ್ಕ ನೀರಾವರಿ ಕೆರೆಯು ಇದ್ದು. ಈ ಕೆರೆಗೆ ಕಗ್ಗೊಡ ಕುಮಟಗಿ, ಹೊನ್ನುಟಗಿ, ಕೆರೆಗಳ ಮುಖಾಂತರ ನೀರು ತುಂಬಿಸಲು ಅವಕಾಶವಿದೆ. ಕೆರೆಗಳು ಈಗಾಗಲೇ ಭರ್ತಿ ಆಗಿದ್ದು ಆ ಗ್ರಾಮಸ್ಥರ ನಾಗರಿಕರ ಮನವೊಲಿಸಿ ನಮ್ಮ ಕೆರೆಗೆ ನೀರು ತುಂಬಿಸಲು ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಶೀಘ್ರವೇ ಕೆರೆ ತುಂಬಿಸದಿದ್ದಲ್ಲಿ ಜಂಬಗಿ ಗ್ರಾಮಸ್ಥರೆಲ್ಲರೂ ಸೇರಿಕೊಂದು ಸಿಂದಗಿ-ಗುಲಬಗರ್ಾ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ನವೀನ್ ಅರಕೇರಿ, ಸಿದ್ದು ಗೇರಡೆ, ವಿಠ್ಠಲ ಪೂಜಾರಿ, ಎಂ.ಎಚ್. ಮುಲ್ಲಾ, ಎಸ್.ಎಸ್. ನಾಯಕ್ಕೋಡಿ, ಡಿ.ಆರ್. ಸಂಕದ, ಎ.ಎ. ಮುಲ್ಲಾ, ಶಿವಪ್ಪಾ ಮಸೂತಿ, ಬಿ.ಎಂ. ಮಸೂತಿ, ಬಿ.ಬಿ. ಕಂಬಾರ, ನವೀನ ಅರಕೇರಿ, ಧರ್ಮಣ್ಣ ಕಡಕೋಳ ಮತ್ತಿತರರು ಉಪಸ್ಥಿತರಿದ್ದರು.