ವಿಜಯಪುರ: ಟೆಕ್ವ್ಯಾಂಡೋ ಚಾಂಪಿಯನ್ಶಿಪ್

ಲೋಕದರ್ಶನ ವರದಿ

ವಿಜಯಪುರ 01: ನವದೆಹಲಿಯಲ್ಲಿ ನಡೆದ 6ನೇ ರಾಷ್ಟ್ರೀಯ ಟೆಕ್ವ್ಯಾಂಡೋ ಚಾಂಪಿಯನ್ಶಿಪ್ 2019 ರ ಕರಾಟೆ ಸ್ಪಧರ್ೆಯಲ್ಲಿ ಭಾಗಿಯಾದ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರು ಜಯಭೇರಿ ಬಾರಿಸುವ ಮೂಲಕ ವಿವಿಗೆ ಕೀತರ್ಿಯನ್ನು ತಂದಿದ್ದಾರೆ.

ದೇಶದ ಹಲವಾರು ರಾಜ್ಯಗಳಿಂದ ಆಗಮಿಸಿದಂತಹ ಸ್ಪಧರ್ಾಳುಗಳು ಈ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಿದ್ದರು. ಆ ಎಲ್ಲರಲ್ಲೂ ನಾವು ಏನು ಕಮ್ಮಿ ಇಲ್ಲ ಎಂದು ಪ್ರದರ್ಶನ ತೋರಿದ ವಿವಿಯ ವಿದ್ಯಾರ್ಥಿನಿಯರು ಬಂಗಾರ, ರಜತ, ಕಂಚಿನ ಪದಕಗಳನ್ನು ತಮ್ಮ ಮುಡಿಗೇರಿಸಿಕೊಳ್ಳುವಲ್ಲಿ ಯಶಸಸ್ವಿಯಾಗಿದ್ದಾರೆ. ವಿಶ್ವವಿದ್ಯಾನಿಲಯದ ಕರಾಟೆ ತರಬೇತುದಾರ ದುರ್ಗೆಶ ಆಹೇರಿ ಅವರ ಅಡಿ ಪಳಗುತ್ತಿರುವ ಈ ಕರಾಟೆ ವಿದ್ಯಾರ್ಥಿನಿಯರು ರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾನಿಲಯದ ಹೆಸರನ್ನು ಮಿಂಚಿಸಿದ್ದಾರೆ.

ಸ್ವರ್ಣ ಸೇರಿದಂತೆ ಹಲವು ಪದಕಗಳನ್ನು ಮುಡಿಗೇರಿಸಿಕೊಂಡ ವಿದ್ಯಾರ್ಥಿನಿಯರನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ಕುಲಸಚಿವೆ ಆರ್.ಸುನಂದಮ್ಮ, ದೈಹಿಕ ಶಿಕ್ಷಣ ವಿಭಾಗದ ನಿದರ್ೇಶಕಿ ಡಾ.ಜ್ಯೋತಿ ಉಪಾಧ್ಯೆ, ಪ.ಜಾ/ಪ.ಪ ಘಟಕದ ನಿರ್ದೇಶಕ ಡಾ.ಸಕ್ಪಾಲ್ ಹೂವಣ್ಣ ಅಭಿನಂದಿಸಿದ್ದಾರೆ.