ವಿಜಯಪುರ 15: ಉತ್ಸವದ ಸಂಭ್ರಮವನ್ನು ವಿಸ್ತರಿಸುತ್ತ ಟಾಟಾ ಮೋಟರ್ಸ, ತನ್ನ ಎಸ್ಸಿವಿ ಶ್ರೇಣಿಯ ಯಶಸ್ಸನ್ನು ಆಚರಿಸಲು ತನ್ನ ಹೊಸ ಪ್ರಚಾರಾಂದೋಲನ "ಭಾರತದ ಎರಡನೆ ದೀಪಾವಳಿ"ಯನ್ನು ಪ್ರಕಟಿಸಿದೆ.
ಈ ಕೊಡುಗೆಯಡಿ ಈ ತಿಂಗಳಲ್ಲಿ ಖರೀದಿಸಿದ ಪ್ರತಿ ಟಾಟಾ ಮೋಟಸರ್್ ಎಸ್ಸಿವಿ ಹಾಗೂ ಪಿಕ್ಅಪ್ ವಾಹನಕ್ಕೆ ಖರೀದಿದಾರರು ಸ್ಕ್ರಾಚ್ ಕಾಡರ್್ ವ್ಯವಸ್ಥೆ ಮೂಲಕ ಖಚಿತ ಉಡುಗೊರೆ ಪಡೆಯಲಿದ್ದಾರೆ.
ಈ ಉಡುಗೊರೆಗಳು, 5 ಲಕ್ಷ, 3 ಲಕ್ಷ ಹಾಗೂ 1 ಲಕ್ಷ ರೂಪಾಯಿ ಮೌಲ್ಯಗಳ ಚಿನ್ನದ ವೌಚರ್ ಆಗಿರಬಹುದು ಅಥವಾ ಎಲ್ಇಡಿ ಟಿವ್, ವಾಷಿಂಗ್ ಮಷೀನ್, ಮೊಬೈಲ್ ಫೋನ್, ಜೂಸರ್ ಮಿಕ್ಸರ್ ಮತ್ತು ಇಂಧನ ಕೂಪನ್ಗಳಾಗಿರಬಹುದು. ಇಡೀ ಎಸ್ಸಿವಿ ಕಾರ್ಗೋ ಹಾಗೂ ಪಿಕ್ ಅಪ್ ಶ್ರೇಣಿಗಳಿಗೆ ಈಗಾಗಲೇ ಗ್ರಾಹಕರು ಪಡೆಯುತ್ತಿರುವ ಆಕರ್ಷಕ ಕೊಡುಗೆಗಳ ಜೊತೆಗೆ ನವ್ಹಂಬರ 30 ವರೆಗೆ ಈ ಕೊಡುಗೆ ನೀಡಲಾಗುತ್ತಿದೆ.
22 ಲಕ್ಷಕ್ಕ್ಕೂ ಅಧಿಕ ಯೂನಿಟ್ಗಳು ಮಾರಾಟವಾಗಿರುವ ಹಾಗೂ ನಂ. 1 ವಾಣಿಜ್ಯ ವಾಹನವಾಗಿರುವ ಟಾಟಾ ಏಸ್ನ ಯಶಸ್ಸು ಆಚರಿಸಲು ಈ ವಿಶೇಷ ಕೊಡುಗೆ ನೀಡಲಾಗುತ್ತಿದ್ದು, ಕಂಪನಿಯು ಎಸ್ಸಿವಿ, ಪಿಕ್ ಅಪ್ ಹಾಗೂ ಕಾಗ್ರೋ ವಾಹನ ಗ್ರಾಹಕರಿಗೆ ಈ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.
ಈ ಬಗ್ಗೆ ಮಾತನಾಡಿದ ಟಾಟಾ ಮೋಟಸರ್್ನ ರಾಜೇಶ್ ಕೌಲ್, ಟಾಟಾ ಮೋಟಸರ್್ ಸದಾ ಗ್ರಾಹಕ ಕೇಂದ್ರಿತ ಕೊಡುಗೆ ನೀಡುವ ಹಾಗೂ ಗ್ರಾಹಕರ ಗಳಿಕೆ ಗರಿಷ್ಟವಾಗುವಂಥ ಗುರಿ ಹೊಂದಿದೆ. ನಮ್ಮ ಎಸ್ಸಿವಿ ಶ್ರೇಣಿಯು ವಿವಿಧ ಸ್ಥಿತಿಗಳಲ್ಲಿ ಉತ್ಕೃಷ್ಟ ಸುರಕ್ಷತೆ, ಬಹುಮುಖ ಕಾರ್ಯಕ್ಷಮತೆ, ಆರಾಮದಾಯಕತೆ ಮತ್ತು ದುಬಾರಿಯಲ್ಲದ ಬೆಲೆಗಳಲ್ಲಿ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಜನರು ತಮ್ಮದೇ ಸ್ವಂತ ವ್ಯಾಪಾರ ಆರಂಭಿಸಿ ಬೆಳೆಯಲು ಸಹಾಯ ಮಾಡುವ ಮೂಲಕ ಅವರ ಜೀವನವನ್ನು ಧನಾತ್ಮಕವಾಗಿ ಪರಿವತರ್ಿಸುವಂಥ ಉತ್ಪನ್ನಗಳನ್ನು ನೀಡಲು ಸಂತೋಷವಾಗುತ್ತದೆ.
ಮುದ್ರಣ, ರೇಡಿಯೋ , ಡಿಜಿಟಲ್ ಮಾಧ್ಯಮಗಳಲ್ಲಿ ಮಾಕರ್ೆಟಿಂಗ್ ಪ್ರಚಾರ ಯೋಜಿಸಿರುವ ಟಾಟಾ ಮೋಟರ್ಸ, ಈ ಪ್ರಚಾರಾಂದೋಲನದ ಮೂಲಕ ಗ್ರಾಹಕರಿಗೆ ತನ್ನ ವಿಶೇಷ ಕೊಡುಗೆ ಬಗ್ಗೆ ತಿಳಿಸುತ್ತಿದೆ. ವರ್ಗದಲ್ಲೇ ಅತ್ಯುತ್ತಮ ಉತ್ಪನ್ನ ಹಾಗೂ ಸೇವಾ ಅನುಭವ ಒದಗಿಸುವ ತನ್ನ ಭರವಸೆಯನ್ನು ಕಂಪನಿ ಮುಂದುವರಿಸಿದೆ ಎಂದರು.