ವಿಜಯಪುರ: ಸಿಂಡಿಕೇಟ್ ಬ್ಯಾಂಕ್ ಕಳವು

ವಿಜಯಪುರ 20: ದುಷ್ಕರ್ಮಿಗಳ ಗಿಂಪೊಂದು ತಡರಾತ್ರಿ ಇಲ್ಲಿನ ಸಿಂಡಿಕೇಟ್ ಬ್ಯಾಂಕ್ನ ಗೋಡೆಯನ್ನು ಕೊರೆದು ರೂ13,460 ನಗದು ಕಳವು ಮಾಡಿದೆ 

ಬ್ಯಾಂಕಿನ ಎಡ ಭಾಗದ ಗೋಡೆಯನ್ನು ತಳ ಸಮೇತ ಕೊರೆದು ಒಳ ನುಗ್ಗಿದ ಕಳ್ಳರು, ಮೊದಲು ಸೇಫ್ ಲಾಕರ್ ಕೊಠಡಿ ಪ್ರವೇಶಿಸಿದ್ದಾರೆ ಆದರೆ ಸೈರನ್ ಭೀತಿಯಿಂದ ಹಿಂದೆ ಸರಿದು ಗೋಡೆಗೆ ಕೊರೆದಿದ್ದ ಕಿಂಡಿಯಿಂದ ಪ್ರಮುಖ ದಾಖಲೆಗಳನ್ನು ಹೊರಕ್ಕೆ ಎಸೆದಿದ್ದಾರೆ ಎಂದು ತಿಳಿದು ಬಂದಿದೆ 

ವಿಷಯ ತಿಳಿದ ಬ್ಯಾಂಕ್ ವ್ಯವಸ್ಥಾಪಕ ಶಿವಶಂಕರ ತಾಳಿಕೋಟ ಹಾಗೂ ಸಿಬ್ಬಂದಿ ಪೋಲೀಸರಿಗೆ ಮಾಹಿತಿ ನೀಡಿದರು 

ಸಿಪಿಐ ಭೇಟಿ; ಸ್ಥಳಕ್ಕೆ ಭೇಟಿ ನೀಡಿದ ಮುದ್ದೇಬಿಹಾಳ ಪೋಲೀಸ್ ಇನ್ಸ್ಪೆಕ್ಟರ್ ಆನಂದ ವಾಘ್ಮೋರೆ, ಕಳ್ಳರು ಕೊರೆದ ಕಿಂಡಿ ಹಾಗೂ ಲಾಕರ್ ಕೊಠಡಿಯಲ್ಲಿದ್ದ ಹಣವನ್ನು ಪರಿಶೀಲಿಸಿದರು.

ಭಾರಿ ಪ್ರಮಾಣದ ಹಣ ಕಳುವಾಗಿಲ್ಲ ಆದರೆ ರೂ13,460 ನಗದು ದೋಚಿದ್ದಾರೆ ಎಂದು ಪೋಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ 

ಎಎಸ್ಐ ಎಸ್.ಬಿ.ನ್ಯಾಮಣ್ಣನವರ, ಪಿ.ಎಸ್.ಪಾಟೀಲ, ಎ.ವೈ.ಸಾಲಿ, ರವಿ ಜಾಧವ್ ಹಾಗೂ ಆರ್.ಎಸ್.ಪಾಟೀಲ ಇದ್ದರು.