ವಿಜಯಪುರ: ಅಂಕಪಟ್ಟಿ ತಯಾರಿಕೆ ಹೊರಗುತ್ತಿಗೆ ಸಲ್ಲ

ಲೋಕದರ್ಶನ ವರದಿ

ವಿಜಯಪುರ 09: ವಿಶ್ವವಿದ್ಯಾನಿಲಯಗಳಲ್ಲಿನ ಅಂಕಪಟ್ಟಿ ತಯಾರಿಸಲು ಹೊರಗುತ್ತಿಗೆ ನೀಡಿರುವ ರಾಜ್ಯ ಸಕರ್ಾರದ ಕ್ರಮವನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸಕರ್ಾರಕ್ಕೆ ಮನವಿ ಸಲ್ಲಿಸಿದರು. 

ಎಬಿವಿಪಿ ವಿಭಾಗ ಸಂಚಾಲಕ ಸಚಿನ ಕುಳಗೇರಿ ಮಾತನಾಡಿ, ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಷನ್ ಸಿಸ್ಟಮ್ (ಇಡಿಜಿಎಸ್)ತಂತ್ರಾಂಶ ಬಳಸುವ ನೆಪದಲ್ಲಿ ವಿದ್ಯಾಥರ್ಿಗಳ ಹಣವನ್ನು ಲೂಟಿ ಮಾಡಲು ಹೊರಟಿರುವ ರಾಜ್ಯ ಸಕರ್ಾರದ ಕ್ರಮ ಖಂಡನೀಯ. ಶಿಕ್ಷಣವು ಸರ್ವರಿಗೆ ಸಿಗಬೇಕು, ಅದು ಮಾರಾಟದ ವಸ್ತುವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಎಬಿವಿಪಿ ತಾಲೂಕು ಸಹ ಸಂಚಾಲಕ ವಿನೋದ ಮಣ್ಣೊಡ್ಡರ, ಬಸವರಾಜ ವಾಲಿಕಾರ, ಚೇತನ ಮಠ, ಮಾಳವಿಕ ಗುಗ್ಗರಿ, ಕಾವೇರಿ ಪ್ಯಾಟಿ, ಅಕ್ಷಯ ಯಾದವಾಡ, ಸಿದ್ದು ಪತ್ತಾರ, ಮಹಾಂತೇಶ ಕಂಬಾರ, ಸಂತೋಷ ದೊಡಮನಿ, ನಿತಿನ ಸೋಲಾಪುರ, ಶ್ರೀಶೈಲ ಬಿರಾದಾರ, ಸಿದ್ದು ಉಪ್ಪಾರ, ಪ್ರಮೋದ ಪಾಟೀಲ, ಸಚಿನ ಚವಾಣ್ ಇತರರು ಉಪಸ್ಥಿತರಿದ್ದರು.