ವಿಜಯಪುರ 22: ರೇಡಿಯೋದಲ್ಲಿ ನಾವು ಕಾರ್ಯನಿರ್ವಹಿಸುವ ಮೂಲಕ ನಾವು ಕೇಳುಗರ ಹೃದಯವನ್ನು ಮುಟ್ಟಬೇಕಾದರೆ ನಮ್ಮಲ್ಲಿ ಉತ್ತಮ ಭಾಷಾ ಶೈಲಿ, ಶಬ್ಧ ಬಂಡಾರವನ್ನು ಹೆಚ್ಚಿಸಿಕೊಳ್ಳಬೇಕಾಗಿದ್ದು ಅವಶ್ಯ ಎಂದು ಧಾರವಾಡ ಆಕಾಶವಾಣಿ ಕೇಂದ್ರದ ಡಾ.ಶಶಿಧರ ನರೇಂದ್ರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಬೆಂಗಳೂರು ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೂರು ದಿನದ ರೇಡಿಯೋ ಜಾಕಿ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲಾರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ ಪ್ರಾಸ್ತಾವಿಕ ಮಾತನಾಡಿದರು. ಸಂಶೋಧನಾ ಸಂಯೋಜಕಿ ದೀಪಾ ತಟ್ಟಿಮನಿ ಹಾಗೂ ಸಹ ಸಂಶೋಧಕಿ ಸೃಷ್ಟಿ ಜವಳೆಕರ ಅತಿಥಿಗಳ ಪರಿಚವಿಸಿದರು, ಸಂಶೋಧನಾ ವಿದ್ಯಾರ್ಥಿನಿ ಜ್ಞಾನಜ್ಯೋತಿ.ಅ.ಚಾಂದಕವಠೆ ನಿರೂಪಿಸಿದರು, ಸಂಶೋಧನಾ ವಿದ್ಯಾರ್ಥಿನಿ ಸುವರ್ಣ ಕಂಬಿ ವಂದಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಜಿಲ್ಲೆಗಳ ಕಾಲೇಜುಗಳಿಂದ ಬಂದಂತಹ ವಿದ್ಯಾರ್ಥಿನಿಯರು, ವಿಭಾಗದ ವಿದ್ಯಾರ್ಥಿನಿಯರು ಮತ್ತು ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.