ಲೋಕದರ್ಶನ ವರದಿ
ವಿಜಯಪುರ 22: ರಾಷ್ಟ್ರೀಯ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಇತ್ತೀಚೆಗೆ ತಿಕೋಟಾಕ್ಕೆ ಭೇಟಿ ನೀಡಿದರು.
ನೆರೆಯ ಮಹಾರಾಷ್ಟ್ರದ ಸುಕ್ಷೇತ್ರ ಗುಡ್ಡಾಪುರದ ದಾನಮ್ಮದೇವಿ ದರ್ಶನ ಪಡೆದು ಮರಳುವ ವೇಳೆ ತಿಕೋಟಾದ ಬಸವೇಶ್ವರ ವೃತ್ತದ ಹತ್ತಿರ ಕೆಲಕಾಲ ಸ್ಥಳೀಯ ಮುಖಂಡರ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ತಿಕೋಟಾ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಸೋಮಶೇಖರ ದಾ. ಜತ್ತಿ ಬಸವ ಸಮಿತಿ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.
ಉದ್ಯಮಿ ಮಹೇಶ ಗಣಿ, ಪಿಕೆಪಿಎಸ್ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಮಂಗಸೂಳಿ, ಹೊನವಾಡದ ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.