ಲೋಕದರ್ಶನ ವರದಿ
ವಿಜಯಪುರ 09: ಶಿಕ್ಷಣ ಕ್ಷೇತ್ರದಲ್ಲಿ ವಿಜ್ಞಾನ, ತಂತ್ರಜ್ಞಾನ, ಗಣಕಯಂತ್ರ, ಆಂಡ್ರಾಯ್ಡ್ ಮೊಬೈಲ್ ಬೆಳೆದು ವಿದ್ಯಾಥರ್ಿಗಳಲ್ಲಿ ಬರವಣಿಗೆ ಮರೆಯುತ್ತಿದ್ದು, ಮಕ್ಕಳು ಬರೆಯುವದನ್ನು ರೂಢಿಸಿಕೊಳ್ಳಬೇಕು ಎಂದು ಖ್ಯಾತ ವೈದ್ಯ ಡಾ.ಆರ್.ಸಿ.ಬಿದರಿ ಹೇಳಿದರು.
ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಾಲೆಯಲ್ಲಿ ತಾವು ಇರಿಸಿದ 5ಲಕ್ಷ ರೂ.ಠೇವಣಿಯಲ್ಲಿ ಬಡ್ಡಿಯ ಮೊತ್ತದಿಂದ ಪ್ರಸಕ್ತ ವರ್ಷ 550 ವಿದ್ಯಾರ್ಥಿಗಳಿಗೆ 2500ನೋಟ್ಬುಕ್ಗಳನ್ನು ವಿತರಿಸಿ ಮಾತನಾಡಿದ ಅವರು, ಶಿಕ್ಷಣ ಎಲ್ಲರ ಹಕ್ಕು, ವಿಜ್ಞಾನ, ತಂತ್ರಜ್ಞಾನ ಮುಂದುವರೆದಂತೆ ಶಿಕ್ಷಣದ ಕಲಿಕೆಯ ಕ್ರಮಗಳು ಬದಲಾಗುತ್ತಿವೆ. ಇತ್ತೀಚಿನ ತಂತ್ರಜ್ಞಾನದಿಂದಾಗಿ ಮಕ್ಕಳು ಉತ್ತಮ ಬರವಣೆಗೆಯನ್ನೆ ನಿಲ್ಲಿಸುವಂತಾಗಿದೆ. ನಾವು ಬರೆಯುವ ಅಕ್ಷರಗಳು ಮತ್ತು ನಮ್ಮ ಬರವಣಿಗೆ ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಆ ಕಾರಣಕ್ಕಾಗಿ ಮಕ್ಕಳು ಹೆಚ್ಚು ಬರವಣಿಗೆಯಲ್ಲಿ ತೊಡಗಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಗಣಿತ ವಿಷಯ ಪರಿವೀಕ್ಷಕ ಎಂ.ಎಸ್.ಬ್ಯಾಹಟ್ಟಿ ಸರ್ ಸಿ.ವಿ.ರಾಮನ್ ಅವರ ಸಾಧನೆಯನ್ನು ತಿಳಿಸುತ್ತ, ಬರವಣಿಗೆಯ ಮಹತ್ವ ವಿವರಿಸಿದರು.
ಸಂಸ್ಥೆ ಅಧ್ಯಕ್ಷ ಸುರೇಶ ದೇಸಾಯಿ ಈ ಸಂದರ್ಭದಲ್ಲಿ ಮಾತನಾಡಿ ಬಿದರಿ ಕುಟುಂಬ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು. ಎಸ್.ಎಸ್.ಪಾಟೀಲ್ ಸ್ವಾಗತಿಸಿದರು. ಡಾ.ಎಚ್.ವಿ.ಕರಿಗೌಡರ ವಂದಿಸಿದರು. ಜಿ.ಎಂ.ಬಿರಾದಾರ ನಿರೂಪಿಸಿದರು.
ಚೇರಮನ್ ಎಚ್.ಆರ್.ಬಿರಾದಾರ, ಉಪಾಧ್ಯಕ್ಷ ಎಚ್.ಆರ್.ಮಾಚಪ್ಪನವರ, ಡಾ.ಎಚ್.ವಿ.ಕರಿಗೌಡರ ನಿದರ್ೆಶಕ ಡಾ.ಕಂಠಿರವ್.ಆರ್.ಕುಳ್ಳೊಳ್ಳಿ, ಖಜಾಂಚಿ ಸುರೇಶ ಹಿರೇದೇಸಾಯಿ, ಮುಖ್ಯಗುರುಗಳು ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.