ವಿಜಯಪುರ: ಪಟೇಲರು ಆಧುನಿಕ ಭಾರತದ ಪ್ರವರ್ತಕ

ಲೋಕದರ್ಶನ ವರದಿ

ವಿಜಯಪುರ 31: ಭಾರತ ದೇಶ ಇಂದು ಬವ್ಯತೆಯಿಂದ ಮೆರೆಯುತ್ತಿರುವುದಕ್ಕೆ ಕಾರಣ ಎಂದರೆ ಅದು ಸರ್ಧಾರ ವಲ್ಲಭ್ಭಾಯ್ ಪಟೇಲ್ ಅವರು. ಹರಿದು ಹಂಚಿ ಹೋಗಿದ್ದ ಸಂಸ್ಥಾನಗಳನ್ನು ಒಟ್ಟುಗೂಡಿಸುವ ಮೂಲಕ ಒಕ್ಕೂಟ ಮಾಡುವುದರೊಂದಿಗೆ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಿದರು ಎಂದು ಉಪನ್ಯಾಸಕ ಬಿ.ಬಿ.ಪಾಟೀಲ್ ಹೇಳಿದರು.

ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮವನ್ನುದ್ಘಾಟಿಸಿ ಮಾತನಾಡಿದರು, 

ಪ್ರಾಚಾರ್ಯರಾದ ಜಿ.ಹೆಚ್.ಮಣ್ಣೂರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಯಾದವ ಮಾತನಾಡಿದರು. ಸೀಮಾ ಪಾಟೀಲ  ಆಯ್ ಬಿ ಜಾಬಾ, ಯು ಎಸ್ ಹಿರೇಮಠ, ಮುಲ್ಲಾ, ಚೈತನ್ಯ ಮುತ್ತಗೀಕರ, ಬಾಸ್ಕರ ಮರಕಲ್, ಮೇಘಾ ಕುಲಕಣರ್ೀ, ಆರತಿ ಬಿಸ್ಟಗೊಂಡ, ಸ್ಮೀತಾ ಬಗಲಿ ಉಪಸ್ಥಿತರಿದ್ದರು. ಉಪನ್ಯಾಸಕ ರಾಜು ಕಪಾಳಿ ಸ್ವಾಗತಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಮಂಜುನಾಥ ಜುನಗೊಂಡ ನಿರೂಪಿಸಿದರು.