ಲೋಕದರ್ಶನ ವರದಿ
ವಿಜಯಪುರ 05: ವಿಜಯಪುರ ಶಾಸ್ತ್ರೀನಗರದ ಜನ್ನತ್ ಮ್ಯಾರೇಜ್ ಹಾಲ್ ಹತ್ತಿರವಿರುವ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ವೃದ್ಧ ಮಹಿಳೆ ರೇಖಾ ಶಿವಾನಂದ ದೇಶಮಾನೆ (ನಿವೃತ್ತ ನರ್ಸ) ಅವರನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಅಥಣಿಯ ಕೇದಾರಿ ಉರ್ಫ್ ಜ್ಯೊತಿಬಾ ಪರಶುರಾಮ ಪೋಳ (37) ಎಂಬಾತನೇ ಬಂಧಿತ ಆರೋಪಿ. ಕಳೆದ ಅಕ್ಟೋಬರ್ 13 ರಂದು ರಾತ್ರಿ ಜನ್ನತ್ ಮ್ಯಾರೇಜ್ ಹಾಲ್ ಬಳಿ ಇರುವ ತನ್ನ ಮನೆಯಲ್ಲಿ ವಾಸವಿದ್ದ ರೇಖಾ ದೇಶಮಾನೆ ಅವರನ್ನು ಯಾರೋ ಆರೋಪಿತರು ಅವರ ಸೀರೆಯಿಂದ ಕುತ್ತಿಗೆಗೆ ಬಿಗಿದು ಬರ್ಬರವಾಗಿ ಹತ್ಯೆ ಮಾಡಿದ ಬಗ್ಗೆ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಕೈಕೊಂಡ ಪೊಲೀಸರು ಕೊಲೆ ಆರೋಪಿ ಕೇದಾರಿ ಯನ್ನು ಬಂಧಿಸಿದ್ದಾರೆ. ಮೃತ ರೇಖಾ ದೇಶಮಾನೆ ಅವರ ಮನೆಯಲ್ಲಿ ಬಾಡಿಗೆದಾರನಾಗಿದ್ದ ಆರೋಪಿತನು ಕೊಲೆ ನಡೆದ ದಿನದಿಂದ ನಾಪತ್ತೆಯಾಗಿದ್ದ. ದಿ. 4 ರಂದು ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಪೊಲೀಸರು ಬಂದಿಸಿದ್ದು, ನಂತರ ವಿಚಾರಣೆಗೊಳಪಡಿಸಿದಾಗ ಆರೋಪಿತನು ರೇಖಾ ದೇಶಮಾನೆ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾನೆ ಎಂದು ಎಸ್ಪಿ ನಿಕ್ಕಂ ಹೇಳಿದರು.
ಕೊಲೆ ಪ್ರಕರಣ ಪತ್ತೆ ಹಚ್ಚಲು ಎಎಸ್ಪಿ ಬಿ.ಎಸ್. ನೇಮಿಗೌಡ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಲಕ್ಷ್ಮೀನಾರಾಯಣ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ಐ ಶರಣಗೌಡ ಗೌಡರ, ಪಿಎಸ್ಐ ಸತೀಶ ಕಣಮೇಶ್ವರ, ಸಿಬ್ಬಂದಿಗಳಾದ ಎಸ್.ಬಿ. ಚನಶೆಟಿಟ, ಬಾಬು ಗುಡಿಮನಿ, ಎಚ್.ಎಚ್. ಜಮಾದಾರ, ಜಿ.ವೈ. ದಾಸರ, ಎನ್.ಕೆ. ಮುಲ್ಲಾ, ಎಂ.ಬಿ. ಢವಳಗಿ, ಸಿದ್ದು ಬಿರಾದಾರ, ತಾಂತ್ರಿಕ ನೆರವು ನೀಡಿದ ಸುನೀಲ ಗೌಳಿ, ಗುಂಡು ಗಿರಣಿವಡ್ಡರ ಮೊದಲಾದವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಎಸಿ ಆರೋಪಿಯನ್ನು ಬಂಧಿಸಿದೆ. ಈ ತಂಡದ ಕಾರ್ಯವನ್ನು ಶ್ಲ್ಯಾಘಿಸಿ ಬಹುಮಾನ ಘೋಷಿಸಲಾಗಿದೆ