ವಿಜಯಪುರ: ಸ್ವಚ್ಚಭಾರತ ಮಿಷನ್ ಯೋಜನೆ ಅನುಷ್ಠಾನಕ್ಕೆ ಸೂಚನೆ

ಲೋಕದರ್ಶನ ವರದಿ

ವಿಜಯಪುರ 05; ಜನರ ಆರೋಗ್ಯದ ಹಾಗೂ ಪರಿಸರ ಶುಚಿತ್ವದ ಹಿತದೃಷ್ಟಿಯಿಂದ ಜಾರಿಗೊಂಡಿರುವ ಸ್ವಚ್ಚಭಾರತ ಮಿಷನ್ ಅಡಿಯಲ್ಲಿ ನಿಗದಿತ ಗುರಿಯನ್ನು ಸಾಧಿಸುವಂತೆ ಈ ಮಾಸಾಂತ್ಯಂಕ್ಕೆ ಬಾಕಿ ಉಳಿದಿರುವ ಶೌಚಾಲಯ ನಿಮರ್ಾಣಕ್ಕೂ ವಿಶೇಷ ಅದ್ಯತೆ ನೀಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರಾದ ಡಾ.ವಿಶಾಲ ಆರ್. ಅವರು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಯೋಜನೆಗಳಡಿ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಸಮರ್ಪಕ ಸಾಧನೆ ಮಾಡದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಅರ್ಹ ಫಲಾನುಭವಿಗಳಿಗೆ ಈ ಯೋಜನೆಯಡಿ ಸೌಲಭ್ಯ ದೊರೆಯುತ್ತಿದೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು. ಅದರಂತೆ ನಿಗದಿಪಡಿಸಿದ ಗುರಿಯನ್ನು ಸಾಧಿಸುವ ಜೊತೆಗೆ ಬಾಕಿ ಉಳಿದಿರುವ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಸಕಾಲಕ್ಕೆ ವೇತನ ಸಂದಾಯವಾಗುವಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಪರಿಶೀಲನೆ: 

ಗ್ರಾಮೀಣ ಕುಡಿಯುವ ನೀರು  ಸರಬರಾಜು ಇಲಾಖೆ ಹಾಗೂ ಹೆಸ್ಕಾಂ  ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಯುಕ್ತರು ಶುದ್ಧ ಕುಡಿಯುವ ನೀರಿನ ಘಟಕಗಳ  ನೀರನ್ನು ಲ್ಯಾಬ್ ರೀಪೊರ್ಟ  ಮತ್ತು ಇತರೆ ಮಾನದಂಡಗಳ ಆಧಾರದ ಮೇಲೆ ಶುದ್ಧ ನೀರಿನ ಘಟಕ ಸ್ಥಾಪನೆಗೆ ಅನುಮೋದನೆ ನೀಡಲಾಗುವುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಜನರಿಗೆ ಸುರಕ್ಷಿತ ನೀರು ಆಧಾರದ ಮೇಲೆ ನೀರು ಪೂರೈಸಬೇಕು. ಮುಂಬರುವ ವರ್ಷದಲ್ಲಿ ಗ್ರಾಮಗಳ ಮನೆ ಮನೆಗೆ ನೀರು ಪೂರೈಕೆ ಮಾಡುವ ಕುರಿತಂತೆ ಅಧಿಕಾರಿಗಳು ಗಮನ ನಿಡುವಂತೆ ತಿಳಿಸಿದ ಅವರು ಹೆಸ್ಕಾಂ ಅಧಿಕಾರಿಗಳು ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ ಸೌಲಭ್ಯ ಕಲ್ಪಿಸಲು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈಎಸ್ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಗೋವಿಂದ ರೆಡ್ಡಿ ಹಾಗೂ ಜಿಲ್ಲಾಮಟ್ಟದ ಅಧೀಕಾರಿಗಳು ಉಪಸ್ಥಿತರಿದ್ದರು.