ಲೋಕದರ್ಶನ ವರದಿ
ವಿಜಯಪುರ 06: ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮಂಡಿಸಿದ ಬಜೆಟ್ಗೆ ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇಂದ್ರ ಬಜೆಟ್ ಕೈಗಾರಿಕಾ ವಲಯ ಹಾಗೂ ವ್ಯಾಪಾರೋದ್ಯಮದ ಪ್ರಗತಿಗೆ ಪೂರಕವಾದ ಬಜೆಟ್ ಅಲ್ಲ. ಪ್ರಸ್ತುತ ಬಜೆಟ್ನಲ್ಲಿ ವಿಧಿಸಲಾಗಿರುವ ತೆರಿಗೆ ಮಿತಿ ಮೊದಲಾದ ಅಂಶಗಳು ವ್ಯಾಪಾರೋದ್ಯಮ ಹಿನ್ನೆಡೆಗೆ ಕಾರಣವಾಗುತ್ತಿವೆ. 2 ಕೋಟಿ ರೂ. ವಾಷರ್ಿಕ ವಹಿವಾಟು ಹೊಂದಿರುವ ವ್ಯಾಪಾರೋದ್ಯಮಕ್ಕೆ ಶೇ.3 ರಷ್ಟು ಹಾಗೂ ಐದು ಕೋಟಿ ವಾಷರ್ಿಕ ವಹಿವಾಟು ಹೊಂದಿರುವ ವ್ಯಾಪಾರೋದ್ಯಮಕ್ಕೆ ಶೇ.7 ರಷ್ಟು ತೆರಿಗೆ ವಿಧಿಸಿರುವುದು ವ್ಯಾಪಾರೋದ್ಯಮ ಪ್ರಗತಿಗೆ ಹಿನ್ನೆಡೆ ಉಂಟು ಮಾಡಲಿದೆ. 60 ವರ್ಷ ಮೇಲ್ಪಟ್ಟವರಿಗೆ 3 ಸಾವಿರ ರೂ. ಮಾಸಿಕ ಪಿಂಚಣಿ, ರಕ್ಷಣಾ ಸಾಮಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ವಿನಾಯ್ತಿ, ಆದಾಯ ತೆರಿಗೆ ಮಿತಿಯನ್ನು ಐದು ಲಕ್ಷ ರೂ.ಗಳವರೆಗೆ ಏರಿಕೆ ಮಾಡಿರುವುದು ಜನಸಾಮಾನ್ಯರಿಗೆ ಪ್ರಯೋಜನವಾಗಿದೆ. ಒಟ್ಟಾರೆಯಾಗಿ ಇದೊಂದು ಜನಪರ ಹಾಗೂ ಜನಸ್ನೇಹಿಯಾದ ಬಜೆಟ್ ಆಗಿದೆ ಎಂದು ಸ್ವಾಮಿ ವಿವೇಕನಂದ ಸೇಬನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಅತ್ಯಂತ ಉತ್ತಮವಾಗಿದೆ. ಜನಸಾಮಾನ್ಯರಿಗೆ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಮೂಲಕ ಜನಸಾಮಾನ್ಯರಿಗೆ ದೊಡ್ಡ ಕೊಡುಗೆ ದೊರಕಿದಂತಾಗಿದೆ. ವೈದ್ಯಕೀಯ ಉಪಕರಣಗಳ ತೆರಿಗೆಯನ್ನು ಕಡಿತಗೊಳಿಸಿ ಆರೋಗ್ಯ ಸೇವೆಯನ್ನು ಮತಷ್ಟು ಸುಳಭವಾಗಿ ದೊರಕುವಂತೆ ಮಾಡಲಾಗಿದೆ. ಒಟ್ಟಾರೆಯಾಗಿ ಇದು ಒಂದು ಉತ್ತಮ ಬಜೆಟ್ ಎಂದು ಬಿಜೆಪಿ ಯುವ ಮುಖಂಡ ವಿಜಯ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಪ್ರಸ್ತುತ ಬಜೆಟ್ ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿದೆ. ಗ್ರಾಮೀಣ, ಮೀನುಗಾರಿಕೆ, ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಮದ್ಯಮ ವರ್ಗದ ಜನರಿಗೆ ಬಡವರಿಗೆ ರೈತರಿಗೆ ನೆಮ್ಮದಿ ನೀಡಿದಂತಾಗಿದೆ. ಘರ್ ಘರ್ ಶುದ್ಧ ಜಲ ಯೋಜನೆ ಮೂಲಕ ಶುದ್ಧ ಕುಡಿಯುವ ನೀರಿನ ಪೂರೈಕೆ, ಮೇಕ್ ಇನ್ ಇಂಡಿಯಾ ಮತ್ತು ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ ಎಂದು ಬಿಜೆಪಿ ಮುಖಂಡ ಅಶೋಕ ತಿಮಶೆಟ್ಟಿ ತಿಳಿಸಿದ್ದಾರೆ.