ಲೋಕದರ್ಶನ ವರದಿ
ವಿಜಯಪುರ 09: ನಾವು ಹಿರಿಯರಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಹಿರಿಯರಲ್ಲಿ ಅನುಭವಾಮೃತವೇ ತುಂಬಿರುತ್ತದೆ. ಅದನ್ನು ಕಿರಿಯರಿಗೂ ಒಂದಿಷ್ಟು ದಾನ ಮಾಡಿ, ಶಿಸ್ತು ಬದ್ದ ಜೀವನ ನಡೆಸಲು ತಿಳಿಸಬೇಕು ಎಂದು ಕೃಷಿ ಅಧಿಕಾರಿ ಬಸವರಾಜ ಬಿರಾದಾರ ಹೇಳಿದರು.
ನಗರದ ಎನ್.ಜಿ.ಓ ಹಾಲ್ನಲ್ಲಿ ನಡೆದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮಾಸಿಕ ಸಭಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಡಿದ ಅವರು, ಕಿರಿಯರಿಗೆ ಹಿರಿಯರ ಮಾರ್ಗದರ್ಶನ ತುಂಬಾ ಅವಶ್ಯಕ ಎಂದರು.
ಸಂಘದ ಅಧ್ಯಕ್ಷ ಎಸ್.ಪಿ. ಬಿರಾದಾರ (ಕಡ್ಲೇವಾಡ) ಅವರು, ಸಂಘವು ಕಾರ್ಯಚಟುವಟಿಕೆಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಸದಸ್ಯರ ತುಂಬ ಸಹಕಾರಬೇಕು. ಅಂದರೆ ಮಾತ್ರ ಸಂಘ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.
ಇದೇ ಸಂದರ್ಭಧಲ್ಲಿ ನೂತನವಾಗಿ ಆಯ್ಕೆಯಾದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ, ಖಜಾಂಚಿ ಜುಬೇರ ಕೆರೂ, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ ಹತ್ತಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ವಿ.ಆರ್. ನರಳೆ, ಬಿ.ಎಂ. ಪಾಟೀಲ, ಎಸ್.ವಾಯ್. ಇಂಗಳೇಶ್ವರ ರಂಗನಾಥ ಅಕ್ಕಲಕೋಟ, ಎಸ್.ಎಂ. ಇನಾಂದಾರ, ಎಸ್.ಎನ್. ಬಿರಾದಾರ, ವಿ.ಎಸ್. ಜಾಮಗೊಂಡ, ಎಸ್.ಎನ್. ತಡವಲ, ವಿ.ಎಸ್. ಹಿರೇಮಠ, ಎಮ.ಎನ್. ಚಪ್ಪರಬಂದ, ಎಸ್.ಎಸ್. ಸಜ್ಜನ, ಎನ್.ಐ. ಪಾಟೀಲ ಜಿ.ಬಿ. ಮುರಗುಂಡಿ, ಬಿ.ಜಿ. ಅಣಮಿ, ಎಸ್.ವಾಯ್. ನಡುವಿನಕೇರಿ, ವಿ.ಎಸ್. ಹಂದಿಗೋಳ, ಅಕ್ಕಮಹಾದೇವಿ ಹೊಸೂರ, ಎಸ್.ಬಿ. ಭಜಂತ್ರಿ, ಆರ್.ಆರ್. ಮದರಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಹಿರೇಕುರಬರ ಸ್ವಾಗತಿಸಿದರು. ವಿ.ಎಸ್. ಸಾವಳಗಿಮಠ ವಂದಿಸಿದರು. ಭರತೇಶ ಕಲಗೊಂಡ ಪ್ರಧಾನ ಕಾರ್ಯದರ್ಶಿ ನಿರೂಪಿಸಿದರು.