ವಿಜಯಪುರ: ವೈದ್ಯಕೀಯ ಶಿಕ್ಷಣ ಕಾರ್ಕಾಗಾರ ಯಶಸ್ವಿ

ಲೋಕದರ್ಶನ ವರದಿ

ವಿಜಯಪುರ 18: ಬಿಎಲ್.ಡಿ.ಇ ವಿವಿ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಔಷಧ ನ್ಯಾಯಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿರುವ 27ನೇ ರಾಜ್ಯ ಸಮ್ಮೇಳನ ನಿಮಿತ್ತ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾಯರ್ಾಗಾರ ಜರುಗಿತು. 

ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ಅಧಿಕಾರಿ ಪ್ರಕಾಶ ನಿಕ್ಕಂ ಉದ್ಘಾಟಿಸಿದರು. ಬಿ.ಎಲ್.ಡಿ.ಇ ವಿವಿ ಉಪಕುಲಪತಿ ಡಾ.ಎಂ.ಎಸ್.ಬಿರಾದಾರ, ಜಿಲ್ಲಾ ಪ್ರಧಾನ ನ್ಯಾಯಾಧೀಶ ಎಸ್.ಎನ್.ನಾಯಕ, ರಜಿಸ್ಟಾರ್ ಜೆ.ಜಿ.ಅಂಬೇಕರ್, ಪ್ರಾಚಾರ್ಯ ಡಾ.ಅರವಿಂದ ಪಾಟೀಲ್, ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ ಉಪಸ್ಥಿತರಿದ್ದರು.

ಬೆಳಗಿನ ಗೋಷ್ಠಿಯಲ್ಲಿ ಡಾ.ಕೆ.ಆರ್.ನಾಗೇಶ ಎನ್.ಎಂ.ಸಿ ಕಾಯ್ದೆ 2019ರ ಕುರಿತು ಸವಿವರ ಮಾಹಿತಿ ನೀಡಿದರು. ನಂತರ ಡಾ.ಸುಭಾಕರ ಅವರು ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಸಂಬಂಧಿಸಿದ ಇತ್ತಿಚೀನ ವ್ಯಾಖ್ಯಾನಗಳನ್ನು ತಿಳಿಸಿಕೊಟ್ಟರು. ಡಾ.ಪ್ರತೀಕ ತರವಡಿ ಸಿ.ಪಿ.ಎ ಮತ್ತು ವೈದ್ಯಕೀಯ ಸೇವೆ ಕುರಿತು ಮಾತನಾಡಿದರು. 

ಮಧ್ಯಾಹ್ನ ನಡೆದ ಗೋಷ್ಠಿಯಲ್ಲಿ ಡಾ.ಜಿ.ಎಸ್.ಪವಾರ ಔಷಧ ನ್ಯಾಯಶಾಸ್ತ್ರ ಕುರಿತ ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ತಿಳಿಸಿದರು. ಡಾ.ಮಹಾಬಳೇಶ ಶೆಟ್ಟಿ ಔಷಧ ನ್ಯಾಯಶಾಸ್ತ್ರವನ್ನು ಸಂಸ್ಥೆಗಳ ಹೊರತುಪಡಿಸಿ ಖಾಸಗಿ ಸೇವೆ ನೀಡುವ ಕುರಿತು ವಿವರಿಸಿದರು. ಡಾ.ಶಂಕರ ಬಕ್ಕನವರ ವೈಜ್ಞಾನಿಕ ಆಧಾರದಿಂದ ಡಿಎನ್.ಎ, ಬೆರಳಚ್ಚು ಕ್ಷೇತ್ರದಲ್ಲಿ ಇತ್ತಿಚೀನ ತಂತ್ರಜ್ಞಾನ ಕುರಿತು ಮಾಹಿತಿ ನೀಡಿದರು.