ವಿಜಯಪುರ: ಮನುಷ್ಯ ಸಮಾಜವನ್ನು ಬಿಟ್ಟು ಬದುಕಲಾರ

ಲೋಕದರ್ಶನ ವರದಿ

ವಿಜಯಪುರ 23: ಮನುಷ್ಯ ಸಂಘಜೀವಿ ಹಾಗೂ ಸಮಾಜವನ್ನು ಬಿಟ್ಟು ಬಾಳಲಾರ ಜೀವನದಲ್ಲಿ ಮನುಷ್ಯನಿಗೆ ಸಮಾಜದ ಅವಶ್ಯಕತೆ ಬಹಳಷ್ಟಿದೆ ಎಂದು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿದರ್ೇಶಕ ದಯಾನಂದ ಸಾಹುಕಾರ ಹೇಳಿದರು.

ನಗರದ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಇತಿಹಾಸ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಇತಿಹಾಸ ಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜವೇ ಮನುಷ್ಯನ ಮೊದಲ ಮನೆ. ಆತ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಿದರೆ ಸಾಕು ಆತ ತನ್ನ ಇಡೀ ಜೀವನವನ್ನು ಯಶಸ್ಸಿನಲ್ಲಿ ಕಳೆಯಬಲ್ಲ. ಸಮಾಜದ ಹೊರತಾಗಿ ಮನುಷ್ಯ ಬದುಕಲಾರ. ಇನ್ನು ಉತ್ತಮ ಮತ್ತು ಸಮೃದ್ಧ ಸಮಾಜಕ್ಕೆ ಇತಿಹಾಸವೇ ಮುಖ್ಯ ಮೈಲುಗಲ್ಲು. ಒಂದು ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿ ಇತಿಹಾಸದ ಅವಶ್ಯಕತೆ ಬಹಳಷ್ಟಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹ ಪ್ರಧ್ಯಾಪಕಿ ಡಾ.ತಹಮೀನಾ ಕೋಲಾರ ಮಾತನಾಡಿ,  ಇತಿಹಾಸವನ್ನು ಮರೆತವರು ಇತಿಹಾಸವನ್ನು  ಸೃಷ್ಟಿಸಲಾರರು. ಇತಿಹಾಸ ಪ್ರತಿಯೂಬ್ಬರ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರತಿಯೂಂದು ವಿಷಯಗಳಗೆ ಅಡಿಪಾಯವಾಗಿರುವುದು ಇತಿಹಾಸ. ಇತಿಹಾಸ ಇರದಿದ್ದರೆ ಯಾವುದೆ ವಿಷಯ ಪೂರ್ಣವಾಗಲು ಸಾಧ್ಯವಿಲ್ಲ. ಅಂತಹ ಇತಿಹಾಸ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿರುವ ನೀವೆಲ್ಲರು ಈ ವಿಭಾಗದ ಅಭಿವೃದ್ಧಿಗಾಗಿ ಕೈ ಜೋಡಿಸಿ. ಮತ್ತು ನಿಮ್ಮ ವಿಭಾಗಕ್ಕೆ ಕೀರ್ತಿ  ತರುವಂತಹ ಕಾರ್ಯಗಳನ್ನು ಮಾಡಿ ಎಂದು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಆನಂದ ಕುಲಕರ್ಣಿ, ಡಾ.ಎಂ.ಎಸ್.ಮುಜಾವರ, ಡಾ.ಚಂದ್ರಕಲಾ ಹಳ್ಳಿ, ಅಶೋಕ ಮಲಾಬಾದಿ, ನದೀಮ ಉಸ್ತಾದ, ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.