ವಿಜಯಪುರ: ನಿಯಮಬದ್ಧ-ಪಾರದರ್ಶಕ ರೀತಿಯಲ್ಲಿ ಪರೀಕ್ಷೆ ನಡೆಯುವಂತೆ ನೋಡಿಕೊಳ್ಳಲು ಸೂಚನೆ

ಲೋಕದರ್ಶನ ವರದಿ

ವಿಜಯಪುರ 31: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಫೆಬ್ರವರಿ 2 ರಂದು ನಗರದ 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ತಾಂತ್ರಿಕ ಸಹಾಯಕರು ಮತ್ತು ಭದ್ರತಾ ಸಹಾಯಕ ದರ್ಜೆ-3 ರ ಪರೀಕ್ಷೆಗಳನ್ನು ಪಾರದರ್ಶಕ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಸಾಮಾನ್ಯ ಸಾಮಥ್ರ್ಯ ಸ್ಪಧರ್ಾತ್ಮಕ ಪರೀಕ್ಷೆ ನಡೆಸುವ ಕುರಿತಂತೆ ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಇದೇ ಫೆಬ್ರವರಿ 2 ರಂದು ಬೆಳಿಗ್ಗೆ 10-30 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯವರೆಗೆ ತಾಂತ್ರಿಕ ಸಹಾಯಕರ ಮತ್ತು ಮದ್ಯಾಹ್ನ 2-30 ರಿಂದ ಸಂಜೆ 4-30 ರ ವರೆಗೆ ಭದ್ರತಾ ಸಹಾಯಕ ದರ್ಜೆ-3ರ ಪರೀಕ್ಷೆಗಳು ನಕಲುಮುಕ್ತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕನರ್ಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಆಯೋಜಿಸಲಾದ ಈ ಪರೀಕ್ಷೆ ಅಭ್ಯಥರ್ಿಗಳ ಭವಿಷ್ಯದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ವಿವಿಧ ಪರೀಕ್ಷೆಗಳನ್ನು ವಿವಿಧ ರೀತಿಯಲ್ಲಿ ನಿರ್ವಹಣೆ ಆಧಾರದ ಮೇಲೆ ಇಲ್ಲಿಯ ಹೆಸರಾಂತ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿ ಪರೀಕ್ಷೆಗೆ ಅವಕಾಶ ಕಲ್ಪಿಸಿದೆ. ತಾಂತ್ರಿಕ ಸಹಾಯಕರ ಹುದ್ದೆಗೆ 4380 ಹಾಗೂ ಭದ್ರತಾ ಸಹಾಯಕರ ಹುದ್ದೆಗೆ 2780 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಮಕ್ಕಳ ಭವಿಷ್ಯ,ಸಮಾಜದ ಹಿತದೃಷ್ಟಿಯಿಂದ ಪರೀಕ್ಷೆಗಳು ಪಾರದರ್ಶಕ, ನಕಲುಮುಕ್ತ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಗೊಂದಲ,ತಕರಾರುಗಳಿಗೆ ಅವಕಾಶ ನೀಡದೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಯುವಂತೆ ನೋಡಿಕೊಳ್ಳಲು ಅವರು ಸೂಚಿಸಿದರು.

ವಿಜಯಪುರದ ಬಾಲಕರ ಸರ್ಕಾರಿ ಪದವಿಪುರ್ವ ಕಾಲೇಜ,ಪಿಡಿಜೆ ಪದವಿಪೂರ್ವ ಕಾಲೇಜ,ಎಸ್.ಬಿ.ಕಲಾ ಮತ್ತು ಕೆಸಿಪಿ ವಿಜ್ಞಾನ ಪದವಿಪೂರ್ವ ಕಾಲೇಜ, ಎಸ್.ಎಸ್.ಪದವಿಪೂರ್ವ ಕಾಲೇಜ, ವಿ.ಬಿ.ದರ್ಜೆರ ಪದವಿಪೂರ್ವ ಕಾಲೇಜ,ಬಾಲಕಿಯರ ಸಕರ್ಾರಿ ಪದವಿಪೂರ್ವ ಕಾಲೇಜ, ಬಿ.ಡಿ.ಇ ಬಾಲಕಿಯರ ಪದವಿಪೂರ್ವ ಕಾಲೇಜ, ಸಿಕ್ಯಾಬ್ ಬಾಲಕಿಯರ ಪದವಿಪೂರ್ವ ಕಾಲೇಜ, ಎಸ್ ಕೆ ವಿ ಎಂ ಎಸ್  ಪದವಿಪೂರ್ವ ಕಾಲೇಜ, ಬಂಜಾರಾ ಪದವಿಪೂರ್ವ ಕಾಲೇಜ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು ಉಪಮುಖ್ಯ ಅಧಿಕ್ಷಕರು, ಕಸ್ಟೋಡಿಯನ್, ಪರಿವೀಕ್ಷಕರು ವಿಶೇಷ ಜಾಗೃತ ದಳದ ಸದಸ್ಯರು ಮತ್ತು ರೂಟ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು  ಹೇಳಿದರು. ಸಭೆಯಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.