ಮಾಂಜರಿ 09: ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಹುತಾತ್ಮ ಯೋಧ ಯೋಗೇಶ ದತ್ತವಾಡೆ ಅವರ ಸ್ಮರಣಾರ್ಥವಾಗಿ ತಾಯಿ ಕಾಂಚನ ದತ್ತವಾಡೆ ಅವರು ಯೋಧ ಯೋಗೆಶ ಕಲಿತ ಸರಕಾರಿ ಪ್ರಾಥಮಿಕ ಶಾಲೆಯಲ್ಲಿನ ವಿದ್ಯಾರ್ಥಿಗಳ ಸವಾಂರ್ಗೀಣ ಅಭಿವೃದ್ಧಿಗೆ 4.51 ಲಕ್ಷರೂ ದೇಣಿಗೆ ನೀಡಿ ಮಾನವಿಯತೆ ಮೆರೆದಿದ್ದಾರೆ.
ದೇಣಗಿಯ ಚೆಕ್ನ್ನು ಸ್ವಿಕರಿಸಿ ಶಿಕ್ಷಕ ಡಾ. ವಿಶ್ವನಾಥ ಧುಮಾಳ ಮಾತನಾಡಿ ಇಂದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ದತವಾಡೆ ಕುಟುಂಬದವರಂತೆ ನಡೆದುಕೊಂಡರೆ ಭವಿಷ್ಯದಲ್ಲಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಕಮ್ಮಿಯಾಗಲಾರರು ಎಂದು ವ್ಯಕ್ತಪಡಿಸಿದರು. ಕಳೆದ ವರ್ಷ ಯೋಗೇಶ್ ದತ್ತವಾಡ ಆಕಸ್ಮಿಕವಾಗಿ ಸಾವನ್ನಪ್ಪಿದ್ದರು. ಅವರ
ಸ್ಮರಣಾರ್ಥ ದತ್ತವಾಡೆ ಕುಟುಂಬದಿಂದ ಶಾಲೆಗೆ 4.51 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದರು. ಅದರಂತೆ ದೇಣಿಗೆಯನ್ನು ನೀಡಿದ್ದು, ವಿದ್ಯಾರ್ಥಿಗಳ ಸವಾಂರ್ಗೀಣ ಅಭಿವೃದ್ಧಿಗೆ ಬಳಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಬೀರ್ಪ ನಸಲಾಪುರ ಅವರು ಉಪ ನೀರೀಕ್ಷಕರಾಗಿ ಆಯ್ಕೆಯಾದ ಪ್ರಯಕ್ತ ಹಾಗೂ ತಾತ್ಯಾಸಾಹೇಬ ಖಡ್ಡ ಅವರನ್ನು ಸನ್ಮಾನಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿ. ಎ. ಮೆಕನಮರಡಿ ಬಿ ಆರ್‌ಸಿ.ಬಿ. ಆರ್ ಬನಸೋಡೆ , ಪಿಕೆಪಿಎಸ್ ನಿರ್ದೇಶಕ ಕಾಕಾಸಾಹೇಬ ಖಡ್ಡ, ಅದರ್ಶ ಕಡಗಾವೆ, ಮಾಯಪ್ಪ ನಸಲಾಪುರೆ, ಸಂಜಯ ಚನ್ನಪಟ್ಟಣ, ಸಂಜಯ ಲಟ್ಟೆ , ಕಿಸಾನ್ ಮಗದುಮ್ , ಸಚಿನ್ ಕಾಮತೆ , ಶ್ರೀಕಾಂತ್ ಚೌಗುಲೆ, ಪರಶುರಾಮ ಹೆಗಡೆ, ದೇವು ವಾಘೆ ,ಮಾರುತಿ ಕೌಲಾಪುರೆ ಮುಂತಾದವರು ಉಪಸ್ಥಿತರಿದ್ದರು.