ದರದಲ್ಲಿ ಮೆಲುಗೈ ಸಾಧಿಸಿದ ಮಾಹಾರಾಷ್ಟ್ರದ ಸಕ್ಕರೆ ಕಾರಖಾನೆಗಳು

Sugar mills in Maharashtra that prevailed in price

ಮಾಂಜರಿ 09: ರಾಜ್ಯದಲ್ಲಿ ಎತಿ ಹೆಚ್ಚು ಸಕ್ಕರೆ ಕಾರಖಾನೆಗಳನ್ನು ಹೊಂದಿದ ಎಕೈಕ ಜಿಲ್ಲೆ ಬೆಳಗಾವಿ, ಇತ್ತೀಚಿನ ವರ್ಷಗಳಲ್ಲಿ ಸಕ್ಕರೆ ಕಾರಖಾನೆಗಳ ಜೊತೆಗೆ ಕಬ್ಬು ನುರಿಸುವ ಸಾಮರ್ಥ್ಯವು ಹೆಚ್ಚಾಗಿದೆ, ನದಿ ತೀರದ ಗ್ರಾಮಗಳಲ್ಲಿ ಪ್ರವಾಹಬಂದು ಕಬ್ಬು ನಾಶವಾಗುತ್ತಿದೆ. ಇದರಿಂದಾಗಿ ಕಾರಖಾನೆಗಳಿಗೆ ಕಬ್ಬು ಕಡಿಮೆ ಬೀಳುತ್ತಿದೆ, ಇದರಿಂದಾಗಿ ಈ ಸಾಲಿನಲ್ಲಿ ಬೇಗ ಹಂಗಾಮು ಮುಗಿಯುವ ಚಿತ್ರನ ಸ್ಪಷ್ಟವಾಗಿ ಕಾಣುತ್ತಿದೆ, ಒಟ್ಟಿನಲ್ಲಿ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯ ಕಾರಖಾನೆಗಳ ನೀಡಿದ ದರವನ್ನು ತುಲನೆ ಮಾಡಿದರೆ ಮಾಹಾರಾಷ್ಟ್ರದ ಸಕ್ಕರೆ ಕಾರಖಾನೆಗಳು ಮೆಲುಗೈ ಸಾಧಿಸಿವೆ.  

ಪ್ರಸಕ್ತ ವರ್ಷದ ಭೀಕರ ಬರಗಾಲ, ಪ್ರವಾಹ ಮತ್ತು ಅತಿವೃಷ್ಟಿ, ರೈತ ಸಮುದಾಯಕ್ಕೆ ಬಿಸಿ ಮುಟ್ಟಿಸಿದೆ, ಈ ಬಾರಿ ಉತ್ಪಾದನೆಯ ಜೊತೆಗೆ ಇಳುವರಿಯೂ ಕುಂಠಿತಗೊಂಡಿದ್ದು,  

ಚಿಕ್ಕೋಡಿ ತಾಲೂಕಿನಲ್ಲಿ ಪಂಚನದಿಗಳಾದ ಕೃಷ್ಣಾ, ದೂಧಗಂಗಾ, ಪಂಚಗಂಗಾ, ವೇದಗಂಗಾ ಮತ್ತು ಚಿಕೋತ್ರಾ ನದಿಗಳ ಕೃಪಾಕಟಾಕ್ಷವಿದ್ದರೂ ಪ್ರಸಕ್ತ ಸಾಲಿನ ಭೀಕರ ಭರಗಾಲದಿಂದ ಮತ್ತು ನೀರಿನ ಅಭಾವದಿಂದ ಒಣಗಿ ಹೋಗಿದ್ದವು, ಇದರ ಬೆನ್ನಲ್ಲೆ ಪ್ರವಾಹ ಕಬ್ಬು ನಾಶವಾಗಿದೆ.  ಚಿಕ್ಕೋಡಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 45,700 ಹೆಕ್ಟರ ಕಬ್ಬು ಬೆಳೆದಿದ್ದರು. ಇದರಲ್ಲಿ ಬರಗಾಲದಿಂದ 9,500 ಹೆಕ್ಟರ ಮತ್ತು ಪ್ರವಾಹದಿಂದಾಗಿ 7,500 ಹೆಕ್ಟರ ಕಬ್ಬು ನಾಶವಾಗಿದೆ.  

ಪ್ರಸಕ್ತ ಹಂಗಾಮಿನಲ್ಲಿ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರಖಾನೆಗಳು ನೀಡಿದ ದರ: ಚಿದಾನಂದ ಕೋರೆ ಕಾರಖಾನೆ ಚಿಕ್ಕೋಡಿ-3030 ರೂ, ಹಾಲಸಿದ್ಧನಾಥ ಸಕ್ಕರೆ ಕಾರಖಾನೆಬ ನಿಪ್ಪಾನಿ-3030 ರೂ, ಅರಿಹಂತ ಶುಗರ್ಸ್ಸ ಜೈನಾಪುರ-3050 ರೂ, ವೇಕಟೇಶ್ವರ ಕಾರಖಾನೆ ಬೇಡಕಿಹಾಳ 3100 ರೂ, ಶಿವಶಕ್ತಿ ಶುಗರ್ಸ ಯಡ್ರಾಂವ-3030 ರೂ,ಥಣಿ ಶುಗರ್ಸ ಕೆಪವಾಡ-3000 ರೂ, ಬೆಳಗಾವ ಶುಗರ್ಸ ಹುದಲಿ-3000 ರೂ. ಘಟಪ್ರಭಾ ಕಾರಖಾನೆ-3000 ರೂ, ಗೋಕಾಕ ಶುಗರ್ಸ-3000 ರೂ, ಲೈಲಾ ಶುಗರ್ಸ 3000 ರೂ, ಮಲಪ್ರಭಾ ಕಾರಖಾನೆ-3000 ರೂ, ರೇಣುಕಾ ಸುಗರ್ಸ ಮೇಕಳಿ, ಬುರ್ಲಟ್ಟಿ ಮತ್ತು ಮುನ್ನೋಳಿ-3000 ರೂ, ಸತೀಶ ಶುಗರ್ಸ ಹುನಶಾಳ-3000 ರೂ, ಉಗಾರ ಶುಗರ್ಸ-3000 ರೂ, ಇಂಡಿಯನ್ ಕೇನ- ಅಳಗವಾಡಿ-3000 ರೂ ಮತ್ತು ಬಸವೇಶ್ವರ ಶುಗರ್ಸ ಬಾಳೆಗೇರಿ-3000 ರೂ.     

ಪ್ರಸಕ್ತ ಹಂಗಾಮಿನಲ್ಲಿ ಕೊಲ್ಲಾಪುರ ಜಿಲ್ಲೆಯ ಸಕ್ಕರೆ ಕಾರಖಾನೆಗಳು ನೀಡಿದ ದರ: ಜವಹಾರ ಹುಪರಿ-3150 ರೂ, ಗುರುದತ್ತ ಟಾಕಳಿ-3150 ರೂ, ಪಂಚಗಂಗಾ ಇಚಲಕರಂಜಿ-3300 ರೂ, ಶಾಹು ಕಾಗಲ- 3100 ರೂ,  ಮಂಡಲಿಕ ಹಮಿದವಾಡ-3100 ರೂ, ಅಜರಾ-3100 ರೂ, ಭೋಗಾವತಿ-3200 ರೂ, ರಾಜಾರಾಮ-3050 ರೂ, ಬಿದ್ರಿ-3200 ರೂ, ಕುಂಬಿಕಾಸಾರಿ-3300 ರೂ, ಶರದ-3150 ರೂ, ವಾರನಾ-3220 ರೂ, ಬಂಬವಡೆ-3220 ರೂ, ಡಿ.ವಾಯ್,ಕಾರಖಾನೆ-3150 ರೂ, ದಾಲ್ಮಿಯಾ-3300 ರೂ, ಇಕೊ-ಕೇನ್‌-3100 ರೂ, ಒಲಮ್ ಗ್ಲೋಬಲ್‌-3100 ರೂ, ಸಂತಾಜಿ ಘೋರೆ​‍್ಡ ಕಾಪಶಿ- 3100 ರೂ, ಓಂಕಾರ ಶುಗರ್ ಫರಾಳೆ-3200 ರೂ, ಭುದರಗಡ-3100 ರೂ, ಅಥರ್ವ ಶುಗರ್ಸ 3100 ರೂ ಪ್ರತಿಟನ್ನಿಗೆ ದರ ನೀಡಿವೆ.  

ರಾಜ್ಯದ ಗಡಿಭಾಗದ ರೈತರು ಮಹಾರಾಷ್ಟ್ರದ ಸಕ್ಕರೆ ಕಾರಖಾನೆಗಳ ಸದಸ್ಯತ್ವ ಹೊಂದಿದ್ದರಿಂದ ಕಬ್ಬು ಮಹಾರಾಷ್ಟ್ರದ ಗಡಿ ಕಾರಖಾನೆಗಳಿಗೆ ಶೇ 40 ರಷ್ಟು ಕಬ್ಬು ಸಾಗಾನೆಯಾಗುತ್ತದೆ. ಮಹಾರಾಷ್ರದ ಕೊಲ್ಲಾಪು ಜಿಲ್ಲೆ ಕಾರಖಾನೆಗಳಿಗೆ ಕಳಿಸುವ ರೈತರಿಗೆ ಮಾತ್ರ ದರದ ಲಾಭವಾಗುತ್ತಿದೆ. ಪ್ರತಿವರ್ಷ ಮಹಾರಾಷ್ಟ್ರದ ಕಾರಖಾನೆಗಳು 150 ರಿದ 200 ರೂ ಪ್ರತಿಟನ್ನಿಗೆ ಹೆಚ್ಚಿಗೆ ಬೆಲೆ ನೀಡುತ್ತಾ ಬಂದಿವೆ. ಪ್ರಸಕ್ತ ಸಾಲಿನಲ್ಲಿ ಬೆಳಗಾವಿ ಜಿಲ್ಲೇಯಲ್ಲಿ ಬೇಡಕಿಹಾಳ ಸಕ್ಕರೆ ಕಾರಖಾನೆ ಪ್ರತಿಟನ್ನಿಗೆ 3100 ರೂ ನೀಡಿ ಜಿಲ್ಲೆಯಲ್ಲೆ ಪ್ರಥಮ ಸ್ಥಾನದಲ್ಲಿದೆ.