ವಿಜಯಪುರ: ನೀರಾವರಿ-ನೀರಿನಾಸರೆಗಳ ಗಣತಿಕಾರ್ಯ ಕೈಗೊಳ್ಳಲು ಸೂಚನೆ

ಲೋಕದರ್ಶನ ವರದಿ

ವಿಜಯಪುರ 24: ಸಣ್ಣ ನೀರಾವರಿ ಹಾಗೂ ನೀರಿನಾಸರೆಗಳ ಗಣತಿ ಕಾರ್ಯವನ್ನು ಅಚ್ಚುಕಟ್ಟಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು 6 ನೇ ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿ ಕಾರ್ಯ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಭಾರತ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಶೇ 100 ರಷ್ಟು ಕೇಂದ್ರ ಪುರಸ್ಕೃತ ``ಸಣ್ಣ ನೀರಾವರಿ ಅಂಕಿ ಅಂಶಗಳ ಸಮನ್ವಯಿಕರಣ ಯೋಜನೆ'' ಅಡಿಯಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸಣ್ಣ ನೀರಾವರಿ ಗಣತಿಯನ್ನು ಕೈಗೊಳ್ಳಲಾಗುತ್ತಿದ್ದು ಜಿಲ್ಲೆಯಲ್ಲಿರುವ ಎಲ್ಲ ಸಣ್ಣ ನೀರಾವರಿ ನೀರಿನಾಸರೆಗಳ ಗಣತಿಯನ್ನು ಸಮರ್ಪಕವಾಗಿ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿರುವ 0-200 ಹೆಕ್ಟೆರ್ ಅಚ್ಚುಕಟ್ಟು ಎಲ್ಲ ನೀರಾವರಿ ಯೋಜನೆಗಳು ಸಣ್ಣ ನೀರಾವರಿ ಯೋಜನೆಗಳೆಂದು ಪರಿಗಣಿಸಿದ್ದು, ಅಂತರ್ಜಲ ಯೋಜನೆಗಳು ಹಾಗೂ ಮೇಲ್ಮಯ ಹರಿಯುವ ಜಲ ಯೋಜನೆಗಳು ಎಂದು ವಿಧಗಳಾಗಿ ವಗರ್ಿಕರಿಸಲಗಿದ್ದು ಅಂತರ್ ಜಲ ಯೋಜನೆಗಳಡಿ ಅಗೆದ ಬಾವಿ, ಕೊಳವೆ ಬಾವಿಗಳು ನಮೂನೆ 1 ರಲ್ಲಿ ಹಾಗೂ ಮೆಲ್ಮೈ ಹರಿಯುವ ಜಲ ಯೋಜನೆಗಳಡಿ ಏತ ನೀರಾವರಿ ಯೋಜನೆಗಳನ್ನು ನಮೂನೆ 2 ರಲ್ಲಿ ಭತರ್ಿ ಮಾಡಿ ಗಣತಿಕಾರ್ಯ ಕೈಗೊಂಡು ಮಾಹಿತಿ ಸಂಗ್ರಹಿಸಬೇಕು. ಗ್ರಾಮಗಳ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರರ ಮೇಲ್ವಿಚಾರಣೆಯಲ್ಲಿ ಗ್ರಾಮ ಸಹಾಯಕರಿಂದ ಮಾಹಿತಿ ಸಂಗ್ರಹಿಸಬೇಕು. 

ಅದರಂತೆ ಭಾರಿ ಮತ್ತು ಮದ್ಯಮ ನೀರಾವರಿ,ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ ರಾಜ್, ಗಣಿ ಮತ್ತು ಭೂ ವಿಜ್ಞಾನ, ಕನರ್ಾಟಕ ವಿದ್ಯುತ್ ಪ್ರಸರಣ ನಿಗಮ,  ಕೃಷಿ ತೋಟಗಾರಿಕೆ ಇಲಾಖೆ, ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ಸಮನ್ವಯತೆಯಿಮದ ಕಾರ್ಯ ನಿರ್ವಹಿಸಬೇಕು. ಗಣತಿದಾರರು ಮೋಬೈಲ್ ಸ್ನೇಹಿ ಆಫ್ ಬಳಸಿಕೊಂಡು ಅಕ್ಷಾಂಶ ಮತ್ತು ರೆಖಾಂಶ ಸಂಗ್ರಹಿಸಿ ಆನ್ಲಯನ್ ಸಾಪ್ಟವೇರ್ನಲ್ಲಿ ಆಪ್ಲೋಡ್ ಮಾಡಲು ಗಣತಿದಾರರು, ಮೇಲ್ವಿಚಾರಕರು, ಸಂಬಂಧಿಸಿದ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಿ ಗಣತಿ ಕ್ಷೇತ್ರ ಕಾರ್ಯ ಸಕಾಲದಲ್ಲಿ ಪೂರೈಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಸಭೆಯಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.