ಲೋಕದರ್ಶನ ವರದಿ
ವಿಜಯಪುರ 31: ಭಾರತ ದೇಶವು ಹಲವಾರು ಪ್ರಾತ್ಯಗಳನ್ನು ಹೊಂದಿದ್ದು, ಹಲವಾರು ಭಾಷೆಗಳನ್ನಾಡುವ ಜನರಿಂದ ಕೂಡಿದ್ದಾಗಿದೆ. ವಿವಿಧತೆಯಲ್ಲಿ ಏಕತೆ ಎನ್ನುವುದು ಕೂಡಾ ಅಷ್ಟೆ ಮಹತ್ವದ್ದಾಗಿದೆ ಎಂದು ಕನರ್ಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣು ಶಿಂದೆ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ ಹಾಗೂ ರಾಷ್ರ್ಟೀಯ ಸೇವಾ ಯೋಜನಾ ಕೋಶದ ವತಿಯಿಂದ ವಿವಿಯ ಶಿಕ್ಷಣ ವಿಭಾಗದಲ್ಲಿ ಹಮ್ಮಿಕೊಂಡಿದ್ದ ರಾಷ್ತ್ರೀಯ ಐಕ್ಯತಾ ದಿನಾಚರಣೆ ಪ್ರಯುಕ್ತ ಅವರು ಮಾತನಾಡಿದರು.
ಪ್ರಾದೇಶಿಕವಾಗಿ ಸಾಕಷ್ಟು ವ್ಯತ್ಯಾಸಗಳು, ಅನೇಕ ಭಿನ್ನಾಭಿಪ್ರಾಯಗಳನ್ನು ನಮ್ಮ ದೇಶದಲ್ಲಿ ಕಾಣುತ್ತೇವೆ. ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬ ಧೀರ ಪುರುಷ, ಉಕ್ಕಿನ ಮನುಷ್ಯ ಎಂದು ಕರೆಯಿಸಿಕೊಳ್ಳುವ ಸರದಾರ ವಲ್ಲಭಾಯಿ ಪಟೇಲ ಎಂದರು.
ರಾಷ್ರ್ಟೀಯ ಸೇವಾ ಯೋಜನಾ ಕೋಶದ ಸಂಯೋಜಕ ಪ್ರೊ. ಬಸವರಾಜ ಲಕ್ಕಣ್ಣವರ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಕಾಶ ಬಡಿಗೇರ, ಪ್ರಕಾಶ ಸಣ್ಣಕ್ಕನವರ, ಡಾ. ಕಲಾವತಿ ಕಾಂಬಳೆ, ಮತ್ತು ಶಿಕ್ಷಣ ವಿಭಾಗ, ಹಾಗೂ ಬಿಎಡ್ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.