ವಿಜಯಪುರ: ನೀತಿ ಸೂತ್ರ ಪಾಲಿಸಿದರೆ ಬದುಕು ಸುಖಮಯ

ಲೋಕದರ್ಶನ ವರದಿ

ವಿಜಯಪುರ 19: ಮನುಷ್ಯ ತನ್ನ ವ್ಯವಹಾರಿಕ ಜೀವನದಲ್ಲಿ ನೀತಿ ಸೂತ್ರಗಳನ್ನು ಪಾಲಿಸಿದರೆ ಅವನ ಬದುಕು ಸುಖಮ0ುವಾಗುತ್ತದೆ. ನೀತಿ ಬಾಳಿನ ಜ್ಯೋತಿ0ಾಗಿರುವುದರಿಂದ ಅವನನ್ನು ಆಧ್ಯಾತ್ಮ ಚಿಂತನೆಗೆ ಹಚ್ಚುತ್ತದೆ. ಆಗ ಮಾನವ ದೇವಮಾನವನಾಗುತ್ತಾನೆ ಎಂದು ಸಾಹಿತಿ ಜಂಬುನಾಥ ಕಂಚ್ಯಾಣಿ ಹೇಳಿದರು. 

    ಕೆ.ಇ.ಬಿ. ಸಮುದಾ0ು ಭವನದಲ್ಲಿ ಹಮ್ಮಿಕೊಡಿದ್ದ 140ನೆ0ು ಮಾಸಿಕ ಸಂಚಾರಿ ಶಿವಾನುಭವ ಗೋಷ್ಠಿ0ುಲ್ಲಿ 'ವಚನ ಸಾಹಿತ್ಯದಲ್ಲಿ ನೀತಿ' ವಿಷ0ು ಕುರಿತು ಮಾತನಾಡಿದರು.

  ಹೆಸ್ಕಾಂ ಅಧಿಕಾರಿ ಎಸ್.ಡಿ.ಕೃಷ್ಣಮೂರ್ತಿ  ಅವರು ಕಾ0ರ್ುಕ್ರಮವನ್ನು ಉದ್ಘಾಟಿಸಿದರು. ಸಾಹಿತಿ ರಂಗನಾಥ ಅಕ್ಕಲಕೋಟ, ಎಂ.ಸಿ.ಪಾಟೀಲ ಅತಿಥಿಗಳಾಗಿ ಭಾಗವಹಿಸಿದ್ದರು. 

ದಾನಮ್ಮದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ಪ್ರಕಾಶ ಗಣಿ, ಸಿದ್ದಪ್ಪ ಮಹಾಜನಶೆಟ್ಟಿ ಹಾಗೂ ಭೌವರಮ್ಮ ಶಿವಾನಂದ ಶಿರಗೂರ ದಂಪತಿಗಳನ್ನು ಸನ್ಮಾನಿಸಲಾಯಿತು. ನಾಗಪ್ಪ ನಾ0ುಕೋಡಿ ಬಳಗದವರು ಭಕ್ತಿ ಸೇವೆ ಮಾಡಿದರು.

ಸಭೆ0ುಲ್ಲಿ ಎಚ್.ಟಿ.ಬಿರಾದಾರ, ಎಡಿ0ುೂರಪ್ಪ ಪಡಶೆಟ್ಟಿ, ಸಿದ್ದಪ್ಪ ಕುಮಾರಗೊಮ್ಡ, ಈರಪ್ಪ ಗೊಳಸಂಗಿ, ಎಚ್.ಎಸ್.ಮಣೂರ, ರಾಣಾಗೋಳ, ಮಹಾದೇವ ಕೌಲಗಿ, ರಾಚಮ್ಮ ಹಡಪದ ಉಪಸ್ಥಿತರಿದ್ದರು.