ವಿಜಯಪುರ: ನಕಲಿ ಪ್ರೆಸ್ ಕಾರ್ಡ್ ಹಾವಳಿ: ಕಾನೂನು ಕ್ರಮಕ್ಕೆ ಆಗ್ರಹ

ಲೋಕದರ್ಶನ ವರದಿ

ವಿಜಯಪುರ 03: ನಕಲಿ ಪ್ರೆಸ್ ಕಾರ್ಡ ಮಾಡಿಕೊಂಡು ಸರಕಾರಿ ನೌಕರರಿಗೆ, ಸಾರ್ವಜನಿಕರಿಗೆ, ಸಾಮಾಜಿಕ ಹೋರಾಟಗಾರರಿಗೆ ಮೋಸ ಮಾಡುತ್ತಿರುವವರ ಮೇಲೆ ಯೋಗ್ಯ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಭೀಮ್ ಆಮರ್ಿ, ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಖಾಲೀದ ಹುಸೇನ ಮಾತನಾಡಿ, ವಿಜಯಪುರದಲ್ಲಿ ಕೆಲವರು ನಕಲಿ ಪ್ರೇಸ್ ಕಾರ್ಡ ಮಾಡಿಕೊಂಡು ವಿಡಿಯೋ ರೇಕರ್ಾಡಿಂಗ್, ಹನಿ ಟ್ರ್ಯಾಪ ರಿರ್ಕಾಡಿಂಗ್ ಮಾಡುವ ಮೂಲಕ ಸರಕಾರಿ ನೌಕರರಿಗೆ, ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರಲ್ಲದೆ, ವಾಹನಗಳ ಮೇಲೆಯೂ ಪ್ರೇಸ್ ಲೇಬಲ್ ಹಾಕಿಕೊಂಡು ಮಾಧ್ಯಮದ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.

ಸರಕಾರಿ ನೌಕರರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಯಾರಾದರು ನಕಲಿ ಪ್ರೆಸ್ ಐಡಿ ತೋರಿಸಿದರೆ ಆ ಪ್ರೇಸ್ ಕಾರ್ಡನ್ನು ಚೆಕ್ ಮಾಡಿ ಅವರ ಮೇಲೆ ಯೋಗ್ಯ ಕಾನೂನು ರೀತಿಯಿಂದ ಕ್ರಮ ಕೈಗೊಳ್ಳಬೇಕು. 

ಇತ್ತೀಚಿಗೆ ಹನಿ ಟ್ರ್ಯಾಪ್ಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದರಿಂದ ಸರಕಾರಿ ನೌಕರರು ಇಂತಹವರಿಂದ ಎಚ್ಚರ ವಹಿಸಬೇಕು. ನಕಲಿ ಕಾರ್ಡ ಮಾಡಿಕೊಂಡು ಸಾರ್ವಜನಿಕರಿಗೆ ಕಿರುಕುಳ ಕೊಡುವುದು, ಹಪ್ತಾ ವಸೂಲಿ ಹಾಗೂ ದಬ್ಬಾಳಿಕೆ ಮಾಡುವಂಥ ಪ್ರಕರಣಗಳು ನಡೆಯುತ್ತಿದ್ದು, ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸದಸ್ಯ ಮತೀನಕುಮಾರ ದೇವಧರ, ರಾಜ್ಯಾಧ್ಯಕ್ಷ ಯಶಪಾಲ್ ಬೋರೆ, ಹೈದ್ರಾಬಾದ್ ಕರ್ನಾಟಕ ಅಧ್ಯಕ್ಷರಾದ ಪ್ರಮೋದಕುಮಾರ ಸಿಂಧೆ, ಬೀದರ ಜಿಲ್ಲಾಧ್ಯಕ್ಷ ಅಮರೇಶ ಕುದ್ರೆ, ವಿಜಯಪುರ ಜಿಲ್ಲಾ ಉಪಾದ್ಯಕ್ಷ ರಿಜವಾನಅಹ್ಮದ ಮುಲ್ಲಾ, ನಗರ ಉಪಾಧ್ಯಕ್ಷರಾದ ಮಹ್ಮದಖಾಲೀಕ ಜಾಗೀರದಾರ, ತಾಲೂಕ ಉಪಾಧ್ಯಕ್ಷರಾದ ಅಸ್ಲಂ ಎಂ.ಇನಾಮದಾರ, ಮಹೇಶ ದೊಡಮನಿ, ನಾಗೇಶ ಬಾಂಗೆ ಇದ್ದರು