ವಿಜಯಪುರ: ಫೆ28, 29 ರಂದು ನಗರದಲ್ಲಿ ಜಿಲ್ಲಾ ಮಟ್ಟದ ಬೃಹತ ಉದ್ಯೋಗಮೇಳ

ಲೋಕದರ್ಶನ ವರದಿ

ವಿಜಯಪುರ 29: ಜಿಲ್ಲಾಡಳಿತ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಇದೇ ಫೆಬ್ರ್ರವರಿ 28 ಹಾಗೂ 29ರಂದು ವಿಜಯಪುರ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ನಗರದಲ್ಲಿ ಆಯೋಜಿಸಲಾಗಿದ್ದು, ಉದ್ಯೋಗಮೇಳದ ಅಂತಜರ್ಾಲ ತಾಣ ಜಿಲ್ಲಾಧಿಕಾರಿಗಳಾದ ವೈ.ಎಸ್ ಪಾಟೀಲ ಇಂದು ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಉದ್ಘಾಟಿಸಿದರು.

ಜಿಲ್ಲಾ ಮಟ್ಟದ ಈ ಬೃಹತ್ ಉದ್ಯೋಗಮೇಳವನ್ನು ನಗರದ ಸೋಲಾಪೂರ ರಸ್ತೆಯಲ್ಲಿರುವ, ಸರ್ಕಾರಿ ಐ.ಟಿ.ಐ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದು, ಈ ಮೇಳ ಯಶಸ್ವಿಯಾಗಿ ನಿರ್ವಹಿಸಲು ಈಗಾಗಲೇ ವ್ಯವಸ್ಥಾಪಕ ಸಮಿತಿ ಹಾಗೂ 11 ಉಪಸಮಿತಿಗಳನ್ನು ಜಿಲ್ಲಾಧಿಕಾರಿಗಳ ನಿದರ್ೇಶನದ ಅನ್ವಯ ರಚಿಸಲಾಗಿದೆ.

ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕೊರತೆ ಇರುವ ಹಿನ್ನಲೆಯಲ್ಲಿ ಉದ್ಯೋಗದಾತರನ್ನು ಹುಡುಕಿ ಉದ್ಯೋಗ ಪಡೆದುಕೊಳ್ಳುವುದು ಕಷ್ಟವಾಗಿದೆ. ಅಲ್ಲದೆ ಸಂಪರ್ಕ ಸಂವಹನ ಕೊರತೆ ಕೂಡಾ ಇರುವುದರಿಂದ, ಈ ಉದ್ಯೋಗಮೇಳದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಂಪರ್ಕ ಸಂವಹನ, ಸಂದರ್ಶನ ಎದುರಿಸುವುದಕ್ಕೆ, ನಾಯಕತ್ವ ಗುಣಗಳ ಕುರಿತು ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ. ಈ ಉದ್ಯೋಗಮೇಳದಲ್ಲಿ 60ಕ್ಕೂ ಹೆಚ್ಚು ಕಂಪನಿಗಳು (ಉದ್ಯೋಗದಾತರು) ಭಾಗವಹಿಸಲಿದ್ದು, 4000 ಕ್ಕೂ ಹೆಚ್ಚಿನ ಹುದ್ದೆಗಳನ್ನು ತುಂಬಲಿದ್ದಾರೆ. ಉದ್ಯೋಗದಾತರು ಹಾಗೂ ಜಿಲ್ಲೆಯ ಉದ್ಯೋಗ ಆಕಾಂಕ್ಷಿಗಳು ವಿಜಯಪುರ ಜಿಲ್ಲೆ ದಿ.25-2-2020ರ ಒಳಗಾಗಿ ನೊಂದಾಯಿಸಿಕೊಳ್ಳಬೇಕು. 

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08352-250383, 297019, 260360 ಸಂಪರ್ಕಿಸಬಹುದು. ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಅಭ್ಯಥರ್ಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಮನವಿ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಗೋವಿಂದ ರೆಡ್ಡಿಯವರು ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿದರು. ಅಪರ ಜಿಲ್ಲಾಧಿಕಾರಿ ಔದ್ರಾಮ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ, ಎನ್.ಐ.ಸಿ ಅಧಿಕಾರಿ ಗುಗವಾಡ ಹಾಗೂ ಇತರರು ಉಪಸ್ಥಿತರಿದ್ದರು.