ಸಿಂದಗಿ 09: ಶೋಷಿತ ಸಮುದಾಯದಿಂದ ಬಂದ ಪ್ರಿಯಾಂಕ ಖರ್ಗೆ ಮತ್ತು ಜಿ ಪರಮೇಶ್ವರ್ ಅವರನ್ನು ಟಾರ್ಗೆಟ್ ಮಾಡಿ ಅವರನ್ನು ನಾಶ ಮಾಡಲು ಹೋದರೆ ನೀವೇ ನಾಶವಾಗಿ ಹೋಗುತ್ತೀರಿ ಎಂದು ಡಿಎಸ್‌ಎಸ್ ಮುಖಂಡ ಶರಣು ಸಿಂಧೆ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಆರೋಪಿಸಿರುವ ಅವರು ದಲಿತರನ್ನು ಸಿಎಂ ಆಗೋಕೆ ಬಿಡ್ತಾ ಇಲ್ಲ. ಪ್ರಿಯಾಂಕಾ ಖರ್ಗೆ ಮನೆ ಮುತ್ತಿಗೆ ಹಾಕ್ತೀರಿ ಮುತ್ತಿಗೆ ಹಾಕಿದ್ರೆ ನಾವು ಸುಮ್ನೆ ಇರಬೇಕಾ, ಅಂಬೇಡ್ಕರ್ ಫ್ಯಾಷನ್ ಅನ್ನೋದು ನಿಮಗೆ ಇರಬೇಕು, ಆದರೆ ನಮಗೆ ಅಂಬೇಡ್ಕರ ಅಂದ್ರೆ ಉಸಿರು.
ಪ್ರಿಯಾಂಕ ಖರ್ಗೆ ಜಿ ಪರಮೇಶ್ವರ್ ಈ ಸಮುದಾಯದ ನಾಯಕರು ಅವರ ನಾಯಕತ್ವವನ್ನು ನಾಶ ಮಾಡೋಕೆ ಹೋದರೆ ನೀವು ನಾಶ ಆಗ್ತೀರಿ. ಪ್ರಿಯಾಂಕ ಖರ್ಗೆ ಹೆಸರು ಯಾವ ಡೆತ್ ನೋಟನಲ್ಲಿದೆ. ಪ್ರಿಯಾಂಕ ಖರ್ಗೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಮೂರ್ಖತನದ ಪರಮಾವಧಿ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯವು ಆಗಿರುವುದರಿಂದ ನಾವು ಸುಮ್ಮನಿದ್ದೆವೆ. ಬಿಜೆಪಿ ಗರ ಹಗರಣಗಳನ್ನು ಪ್ರಿಯಾಂಕ ಖರ್ಗೆ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇಲ್ಲದ ಪಿತೂರಿ ಅವರ ಮೇಲೆ ಬಿಜೆಪಿಗರು ನಡೆಸುತ್ತಿದ್ದಾರೆ. ಕೂಡಲೇ ಅವರ ಮೇಲೆ ಮಾಡುತ್ತಿರುವ ಆರೋಪಗಳನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಮುಂದಿನ ಕ್ರಮಗಳನ್ನು ನಮ್ಮ ಸಮುದಾಯ ಸೇರಿದಂತೆ ಸಚಿವರ ಅಭಿಮಾನಿಗಳು ದಂಗೆ ಹೇಳುವುದು ಖಂಡಿತ ಎಂದು ಎಚ್ಚರಿಕೆ ನೀಡಿದ್ದಾರೆ.