ಲೋಕದರ್ಶನ ವರದಿ
ವಿಜಯಪುರ 01: ನಗರದ ಡಾ. ಬಿ.ಆರ್.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಕಲೆ, ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ 20 ಜನ ಸಾಧಕರಿಗೆ 'ಜಿಲ್ಲಾ ರಾಜ್ಯೋತ್ಸವ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಎಲ್ಲ ಸಾಧಕರಿಗೂ ಪ್ರಶಸ್ತಿ ಪತ್ರದೊಂದಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ವಿಶೇಷ ಸ್ಮರಣಿಕೆ ಹಾಗೂ ಫಲಪುಷ್ಪ ನೀಡಿ ಆತ್ಮೀಯವಾಗಿ ಸನ್ಮಾನಿಸಸಿದ್ದು, ಈ ಬಾರಿಯ ರಾಜ್ಯೋತ್ಸವ ಸಮರಂಭದ ವಿಶೇಷವಾಗಿತ್ತು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ 'ಲೋಕದರ್ಶನ' ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರ ದೇವೇಂದ್ರ ಕೆ. ಹೆಳವರ, 'ವಿಜಯ ಕರ್ನಾಟಕ' ಪತ್ರಿಕೆ ಜಿಲ್ಲಾ ವರದಿಗಾರ ಮಂಜುನಾಥ ಕೊಣಸೂರ, 'ದಿಗ್ವಿಜಯ ನ್ಯೂಸ್ ಜಿಲ್ಲಾ ವರದಿಗಾರ ಶಶಿಕಾಂತ ಮೆಂಡೇಗಾರ, ಶಿಕ್ಷಣ ಕ್ಷೇತ್ರದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಸಾಹಿತ್ಯ ಕ್ಷೇತ್ರದಲ್ಲಿ ಶೇಷರಾವ ಮಾನೆ, ಡಾ.ದೊಡ್ಡಣ್ಣ ಭಜಂತ್ರಿ, ಡಾ.ರೇಖಾ ಪಾಟೀಲ, ಸಂಗೀತ ಕ್ಷೇತ್ರದಲ್ಲಿ ನಿಜಗುಣೇಶ ಹೂಗಾರ, ಭರತನಾಟ್ಯ ಕಲಾವಿದೆ ಶ್ರೇಯಾ ಪಾಟೀಲ, ರಂಗಭೂಮಿ ಕಲಾವಿದ ಪ್ರಭು ಗುಡ್ಡದ, ರಂಗಭೂಮಿ ಕಲಾವಿದ ಸೋಮಶೇಖರ ಚಾಂದಕವಠೆ, ಚೌಡಕಿ ಪದಗಳ ಗಾಯಕಿ ಕಮಲವ್ವ ಸಿದ್ಧರೆಡ್ಡಿ, ಶಿಲ್ಪಕಲಾವಿದ ಬ್ರಹ್ಮಾನಂದ ಕೃಷ್ಣಪ್ಪ ಮಾಯಚಾರಿ, ಚಿತ್ರಕಲಾವಿದ ವಿ.ವಿ. ಹಿರೇಮಠ, ಕ್ರೀಡಾ ಕೇತ್ರದಲ್ಲಿ ಬಸವರಾಜ ಬಾಗೇವಾಡಿ, ಕನ್ನಡ ಸೇವೆಯಲ್ಲಿ ಪ್ರಕಾಶ ಕುಂಬಾರ, ಕೃಷಿ ಕ್ಷೇತ್ರದಲ್ಲಿ ಸಿದ್ಧಪ್ಪ ಸಗಾಯಿ, ಸಂಕೀರ್ಣ ವಿಭಾಗದಲ್ಲಿ ಗಾಯಕ, ಸಾಹಿತಿ ಮೌಲಾಲಿ ಬೋರಗಿ ಅವರಿಗೆ ಹಾಗೂ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ), ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ಮಹೇಶ ಪೋತದಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾಝರ್ುನ ಯಂಡಿಗೇರಿ ಪ್ರಶಸ್ತಿ ಪ್ರದಾನ ಮಾಡಿದರು.