ಲೋಕದರ್ಶನ ವರದಿ
ವಿಜಯಪುರ 03: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮಾಜಿ ಶಾಸಕ ಪ್ರೊ. ರಾಜು ಆಲಗೂರ ನಗರದ ಹಜರತ್ ಹಾಸಿಂಪೀರ ದಗರ್ಾಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಜರತ್ ಹಾಸಿಂಪೀರ ದರ್ಗಾದ ಪೀಠಾಧ್ಯಕ್ಷ ಸೈಯದ ಮುತರ್ುಜಾ ಹುಸೇನಿ ಸಜ್ಜಾದೆ ನಸೀನ 13ನೇ ಪೀಠಾಧ್ಯಕ್ಷರು ಮಾತನಾಡಿ, ರಾಜು ಆಲಗೂರ ಅವರು ಓರ್ವ ಪ್ರಜ್ಞಾವಂತ ರಾಜಕಾರಣಿಯಾಗಿದ್ದಾರೆ. ಪಕ್ಷ ಅವರ ಅರ್ಹತೆಯನ್ನು ಗಮನಿಸಿ ಸಾಮಾಜಿಕ ನ್ಯಾಯದ ಅಡಿ ಅವರಿಗೆ ಮಹತ್ತರವಾದ ಜವಾಬ್ದಾರಿ ಕಾಂಗ್ರೆಸ್ ಪಕ್ಷ ನೀಡಿದೆ. ಜಿಲ್ಲೆಯ ಎಲ್ಲ ಮುಖಂಡರೊಂದಿಗೆ ಸೌಹಾರ್ದಯುತವಾದ ಬಾಂಧವ್ಯವನ್ನು ಬೆಳೆಸಿಕೊಂಡು ನ್ಯಾಯಯುತವಾದ ರಾಜಕಾರಣಕ್ಕೆ ಮಹತ್ವ ನೀಡಬೇಕೆಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರೊ. ರಾಜು ಆಲಗೂರ ಅವರು, ಜಿಲ್ಲೆಯ 8 ಮತಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ದುಡಿಯುತ್ತೇನೆ. ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಜೊತೆಗೆ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮಾಡುತ್ತೇನೆ. ಎ ಕಾಂಗ್ರೆಸ್ ಪಕ್ಷದ ನೀತಿ ಮತ್ತು ಸಿದ್ಧಾಂತಗಳನ್ನು ಜಿಲ್ಲೆಯ ಮತದಾರರಿಗೆ ಅರಿವು ಮೂಡಿಸುತ್ತೇನೆ. ದುಡಿದಿರುವ ಪಕ್ಷದ ಕಾರ್ಯಕರ್ತರಿಗೆ ಮತ್ತು ಪದಾಧಿಕಾರಿಗಳಿಗೆ ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸಲು ಅನುಕೂಲ ಮಾಡುತ್ತೇನೆ ಎಂದರು.
ಕೆಪಿಸಿಸಿ ರಾಜ್ಯಕಾರ್ಯದಶರ್ಿ ಹಾಸಿಂಪೀರ ವಾಲಿಕಾರ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಸಿದ್ಧರಾಮಯ್ಯ ಸರಕಾರ ಮಾಡಿದ ಜನಪರ ಕಾರ್ಯಗಳನ್ನು ತಿಳಿಸಬೇಕು. ಮೇಲಿಂದ ಮೇಲೆ ಜಿಲ್ಲೆಗಳಲ್ಲಿ ಪಕ್ಷದ ಸಮಾವೇಶಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಬೇಕು ಎಂದರು.
ಶಾರುಖಾನ್ ಸಿದ್ದೀಕಿ, ಗೋರೆಪೀರಾ ಇನಾಮದಾರ, ಸಲಿಂ ಪಿರಜಾದೆ, ತಮ್ಮಣ್ಣ ಮೇಲಿನಕೇರಿ, ಬಸವರಾಜ ಆಲಗೂರ, ರಾಜು ಅಂಗಡಿ ಮುಂತಾದವರು ಉಪಸ್ಥಿತರಿದ್ದರು.