ವಿಜಯಪುರ: ಆಪರೇಷನ್ ಕಮಲದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಲೋಕದರ್ಶನ ವರದಿ

ವಿಜಯಪುರ 09: ಆಪರೇಶನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು  ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ನಗರದ ಗಾಂಧೀವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರವನ್ನು ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸಕರ್ಾರವನ್ನು ಪದೇ-ಪದೇ ಅಸ್ಥಿರಗೊಳಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಆ ಮೂಲಕ ಅದು ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದೆ. ಆಪರೇಶನ ಕಮಲದ ಮುಖಾಂತರ ಶಾಸಕರಿಗೆ ಆಸೆ ಆಮಿಷಗಳನ್ನು ಒಡ್ಡಿ ಸರಕಾರವನ್ನು ಅಸ್ತಿರಗೊಳಸಲು ವಿಫಲ ಯತ್ನ ನಡೆಸುತ್ತಿದ್ದು,  ಬಿಜೆಪಿ ಪಕ್ಷದ ಈ ನಡೆ ಪ್ರಜಾ ಪ್ರಭುತ್ವದ ಕಗ್ಗೊಲೆ. ಇದನ್ನು ರಾಜ್ಯದ ಜನತೆ ಎಂದು ಸಹಿಸುವುದಿಲ್ಲ  ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದರು. 

        ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ರವಿಗೌಡ ಪಾಟೀಲ, ಉಪಾಧ್ಯಕ್ಷ ವೈಜನಾಥ ಕರ್ಪುರಮಠ  ಮುಖಂಡರಾದ ಅಬ್ದುಲಹಮೀದ ಮುಶ್ರೀಫ ಕಾಂತಾ ನಾಯಕ ಅವರು ಮಾತನಾಡಿ, ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಈ ಹಿಂದೆ ಹಲವಾರು ಬಾರಿ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಪಟ್ಟು ವಿಫಲವಾದರೂ ಬಿಜೆಪಿ ನಾಯಕರಿಗೆ ಇನ್ನೂ ಬುದ್ದಿ ಬಂದಿಲ್ಲ. ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

     ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಬ್ಬಿರ ಜಹಾಗಿರದಾರ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಭಕ್ಷಿ, ಜಲನಗರ ಬ್ಲಾಕ್ ಅಧ್ಯಕ್ಷ ಆರ್.ಪಿ. ಶಹಾಪೂರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ್ಷೆ ಮಹಾದೇವಿ ಗೋಕಾಕ, ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಹಿಂದುಳಿದ ಘಟಕದ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಇಫ್ರಾನ್ ಶೇಖ, ಆರತಿ ಶಹಾಪೂರ, ಲಕ್ಷ್ಮೀ ದೇಸಾಯಿ, ಶಾಜಾದಬಿ ಕಲಾದಗಿ, ವಸಂತ ಹೊನಮೋಡೆ, ಚನ್ನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಜಮೀರ ಅಹ್ಮದ ಬಾಂಗಿ, ಅಕ್ಬರ ನಾಯಕ, ಶರಣಪ್ಪ ಯಕ್ಕುಂಡಿ, ಬಿ.ಎಸ್. ಬ್ಯಾಳಿ, ಪೀರಪ್ಪ ನಡುವಿನಮನಿ, ಅಜಿಮ ಇನಾಮದಾರ, ಇಲಿಯಾಸ ಸಿದ್ದಕಿ, ಪ್ರಕಾಶ ಕಟ್ಟಿಮನಿ, ಫಯಾಜ ಕಲಾದಗಿ, ಬಿ.ಎಸ್. ಮುಲ್ಲಾ, ಗೌಸ ಮುಜಾವರ, ಮಲ್ಲು ತೊರವಿ, ಹೈದರ ನದಾಫ ಧನರಾಜ, ಸುನೀಲ ಪತ್ತಾರ, ಫಿರೊಜ ಜಮಾದಾರ, ಅಮೀತ ಚವ್ಹಾಣ,ಹಮೀದ ಅವಟಿ, ಸಂತೋಷ ಬಾಲಗಾಂವಿ, ಎಂ.ಎ. ಭಕ್ಷಿ, ಮಹಮ್ಮದಯಾಸೀನ ಭಕಿ, ಇಲಿಯಾಸ ನಾಗರಬಾವಡಿ, ನಾಶೀರ ನಾಗರಬಾವಡಿ, ಬಾಬು ಯಾಳವಾರ, ತಾಜುದ್ದಿನ ಖಲಿಪಾ, ನಿಂಗಪ್ಪ ಸಂಗಾಪೂರ, ಫಿರೋಜ ಶೇಖ, ಅಯುಬ ನದಾಫ, ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.