ವಿಜಯಪುರ: ಭೀಮರಾವ ಅಂಬೇಡ್ಕರಗೆ ಸನ್ಮಾನ

ಲೋಕದರ್ಶನ ವರದಿ

ವಿಜಯಪುರ 22: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ ಮೊಮ್ಮಗ ಹಾಗೂ ಭಾರತೀಯ ಭೌದ್ಧ ಮಹಾಸಭಾದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಭೀಮರಾವ ಅಂಬೇಡ್ಕರ ಶುಕ್ರವಾರ ವಿಜಯಪುರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ವಿಜಯಪುರ ಜಿಲ್ಲಾ ಎಸ್.ಸಿ./ಎಸ್.ಟಿ. ನೌಕರರ ಸಮನ್ವಯ ಸಮಿತಿಯಿಂದ ಆತ್ಮಿಯವಾಗಿ ಸನ್ಮಾನಿಸಲಾಯಿತು. 

     ಸನ್ಮಾನ ಸ್ವೀಕರಿಸಿ ಮಾತನಾಡಿದ ಭೀಮರಾವ ಅಂಬೇಡ್ಕರ ಅವರು, ಸಂವಿಧಾನ ಬಗ್ಗೆ ಈ ರಾಜ್ಯದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಸಂವಿಧಾನದ ರಕ್ಷಣೆ ಮಾಡುವುದು ಎಲ್ಲರ ಹೊಣೆಗಾರಿಕೆ ಆಗಿದೆ. ವಿಶೆಷವಾಗಿ ನೌಕರರು ಒಗ್ಗಟ್ಟಿನಿಂದ ಇರಬೇಕು. ಸಮಾಜದ ಉನ್ನತಿಗಾಗಿ ದುಡಿಯಬೇಕು ಎಂದು ಹೇಳಿದರು.

ಸಮಿತಿ ಅಧ್ಯಕ್ಷ ಬಿ.ಎಚ್. ನಾಡಗೀರಿ, ಗೌರವಾಧ್ಯಕ್ಷ ಬಸಪ್ಪ ಗುಣದಾಳ, ಉಪಾಧ್ಯಕ್ಷ ಅಮರಪ್ಪ ಚಲವಾದಿ, ರವಿ ಯಲ್ಲಡಗಿ, ಪಿ.ಕೆ. ಗುಂದಬಾನ, ಆರ್.ಎಚ್.ಬನಸೋಡೆ, ಡಿ.ಎಸ್. ಹರಿಜನ, ಎಸ್.ಎಂ. ಡೋಣಿ, ನಿಜಪ್ಪ ಮೇಲಿನಕೇರಿ ಮತ್ತು ಕನರ್ಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ರಮೇಶ ಆಸಂಗಿ ಮತ್ತು ಮುಂತಾದವರು ಉಪಸ್ಥಿತರಿದ್ದರು