ವಿಜಯಪುರ: ವಿದ್ಯಾರ್ಥಿನಿಗೆ ಅತ್ಯಾಚಾರ ದುಷಕರ್ಮಿಗೆ ಶಿಕ್ಷೆಗೊಳಪಡಿಸಲು ಒತ್ತಾಯ

ಲೋಕದರ್ಶನ ವರದಿ

ವಿಜಯಪುರ 07: ಪುತ್ತೂರಿನಲ್ಲಿ ಕಾಲೇಜು ವಿದ್ಯಾಥರ್ಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕಮರ್ಿಗಳನ್ನು ಶಿಕ್ಷೆಗೊಳಪಡಿಸಬೇಕೆಮದು ಆಗ್ರಹಿಸಿ ವಿಜಯಪುರದಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ನೇತೃತ್ವದಲ್ಲಿ ವಿದ್ಯಾಥರ್ಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. 

  ನಗರದ ಗಾಂಧೀವೃತ್ತದಲ್ಲಿ ಜಮಾವಣೆಗೊಂಡ ನೂರಾರು ವಿದ್ಯಾಥರ್ಿಗಳು ಆರೋಪಿತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒಕ್ಕೊರಲಿನಿಂದ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ವಿದ್ಯಾಥರ್ಿ ಪರಿಷತ್ ವಿಭಾಗ ಸಂಚಾಲಕ ಸಚಿನ ಕುಳಗೆರಿ ಮಾತನಾಡಿ, ಅತ್ಯಾಚಾರ ಘಟನೆ ಅತ್ಯಂತ ಖಂಡನಿಯ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ 5 ಜನ ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿರುವುದು ಅಭಿನಂದನೀಯ. ಈ ಕೃತ್ಯದಲ್ಲಿ ಭಾಗಿಯಾದ ಎಲ್ಲಾ ದುಷ್ಕಮರ್ಿಗಳನ್ನು ವಿಚಾರಣೆಗೊಳಪಡಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇದಕ್ಕಾಗಿ ನ್ಯಾಯಾಲಯ ತುತರ್ು ವಿಚಾರಣೆಯನ್ನು ನಡೆಸಬೇಕೆಂದು ಆಗ್ರಹಿಸಿದರು.

          ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಧಂಧೆ ಹೆಚ್ಚಾಗಿ ನಡೆಯುತ್ತಿದೆ. ವಿದ್ಯಾಥರ್ಿ ಸಮುದಾಯವನ್ನು ದಾರಿ ತಪ್ಪಿಸಿ ಅಪರಾಧಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಡ್ರಗ್ಸ್ ಜಾಲ ಜಾಲವನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುವ ಮೂಲಕ ಡ್ರಗ್ ಮಾಫಿಯಾ ದಂಧೆಗೆ ಕಡಿವಾಣ ಹಾಕಬೇಕು ಎಂದು ನಿಂಗಣ್ಣ ಮನಗೂಳಿ ಆಗ್ರಹಿಸಿದರು.

      ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಎಬಿವಿಪಿಯ ಹೆಸರಿನೊಂದಿಗೆ ತಳುಕು ಹಾಕಿ ಸಂಘಟನೆಯ ಹೆಸರಿಗೆ ಅವಮಾನ ಮಾಡುವ ವ್ಯವಸ್ಥಿತ ಷಡ್ಯಂತರವೊಂದು ನಡೆಯುತ್ತಿದೆ. ಈ ಘಟನೆಯಲ್ಲಿ ಭಾಗಿಯಾದ ಯಾರೋಬ್ಬರು ನಮ್ಮ ಸಂಘಟನೆಗೆ ಸೇರಿದವರಲ್ಲ ಎಂದು ಅಭಾವಿಪ ಸ್ಪಷ್ಟನೆ ಸಹ ನೀಡಿದೆ. ಈ ಕುರಿತು ಅಪಪ್ರಚಾರವನ್ನು ಕೂಡಲೇ ತಡೆಗಟ್ಟಬೇಕು. ಇಂತಹ ಜಾಲತಾಣಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಂದು ಎಬಿವಿಪಿ ಆಗ್ರಹಿಸುತ್ತದೆ ಎಂದರು.

ವಿದ್ಯಾಥರ್ಿ ಮುಖಂಡರಾದ ಬಸವರಾಜಲಗಳಿ, ಚೇತನಮಠ, ವಿನೋದಮಣ್ಣೋಡ್ಡರ, ಏಶ್ವರ್ಯ ಕುಲಕಣರ್ಿ, ಸಹನಾಬಿರಾದಾರ, ಸೃಷ್ಟಿಬಿರಾದಾರ, ಮಂಜುನಾಥದಾಸ್ಯಾಳ, ಸುದೀಪಯಮಡೆ, ಅಕ್ಶಯಯದವಾಲ, ಇತರರು ಉಪಸ್ಥಿತರಿದ್ದರು.