ಲೋಕದರ್ಶನ ವರದಿ
ವಿಜಯಪುರ, 10 : ವಿಜಯಪುರ ಜಿಲ್ಲಾ ಹೆಳವ ಸಮಿತಿ ಸಭೆ ರವಿವಾರ ಅಫಜಲಪುರ ಟಕ್ಕೇದ ಶ್ರೀ ಮಲ್ಲಿಕಾಜರ್ುನ ದೇವಸ್ಥಾನದಲ್ಲಿ ಜರುಗಿತು.
ಸಮಾಜ ಸಂಘಟನೆ ಹಾಗೂ ಜಿಲ್ಲಾ ಸಂಘವನ್ನು ಪುನರ್ರಚನೆ ಮಾಡುವ ಕುರಿತು ಸುದೀರ್ಘವಾಗಿ ಚಚರ್ಿಸಿ ಸಮಾಜದ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಹಾಗೂ ತಾಲೂಕಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸಭೆಯಲ್ಲಿ ತೀಮರ್ಾನಿಸಲಾಯಿತು.
ಸರಕಾರದ ವಿವಿಧ ವಸತಿ ಯೋಜನೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಮಾಜಬಾಂಧವರಿಗೆ ತಿಳಿಸಲಾಯಿತು.
ಸಮಾಜದ ಮುಖಂಡರಾದ ಡಾ.ದಿಲೀಪ್ ಗಂಜ್ಯಾಳ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಂಗಪ್ಪ ಬಾಗೇವಾಡಿ, ಶಿವಶರಣ ಹೆಳವರ, ಸಂಗಮೇಶ ಹೆಳವರ ಐಹೊಳೆ, ಪತ್ರಕರ್ತ ದೇವೇಂದ್ರ ಹೆಳವರ ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿ ಹೆಳವ ಸಮಾಜ ಬಾಂಧವರು ಸಂಘಟಿತರಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸಾಧಕರಿಗೆ ರಾಷ್ಟ್ರ ಪ್ರಶಸ್ತಿ ಹಾಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಸಂತೋಷ ಹೆಳವರ, ಗೌರವ ಅಧ್ಯಕ್ಷ ಶರಣಪ್ಪ ಹೆಳವರ ಲಕ್ಕುಂಡಿ, ಯಮನಪ್ಪ ಹೆಳವರ ಮುದ್ನೂರ, ಕೆಂಚಪ್ಪ ಹೆಳವರ, ಸದಾಶಿವ ಹೆಳವರ, ಪತ್ರಕರ್ತ ವೆಂಕಟೇಶ ಭೈರಾಮಡಗಿ, ಸಿದ್ದಣ್ಣ ಹೆಳವರ ಗಬಸಾವಳಗಿ, ಮಲ್ಲಪ್ಪ ಹೆಳವರ ಖಾನಾಪುರ, ಪರಶುರಾಮ ಹೆಳವರ, ಸಾಬು ಅಮೀನಪ್ಪ ಹೆಳವರ ಟಕ್ಕೆ, ಮಹಾಂತೇಶ ಹೆಳವರ, ರವಿ ಹೆಳವರ, ರವಿ ರಾಣಿಬೆನ್ನೂರ, ಸಾಬು ಜೆಟ್ಟೆಪ ಹೆಳವರ, ವಿಜಯ ಹೆಳವರ, ಸಿದ್ದು ಹೆಳವರ, ಅಯ್ಯಪ್ಪ ಹೆಳವರ ವಿಷ್ಣು ಹೆಳವರ, ರಾಜು ಹೆಳವರ, ಲೋಹಿತ ಹೆಳವರ ಮುಂತಾವದರು ಸಭೆಯಲ್ಲಿ ಉಪಸ್ಥಿತರಿದ್ದರು.