ಲೋಕದರ್ಶನ ವರದಿ
ವಿಜಯಪುರ 10: ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಜಿಲ್ಲೆಯ ಎಂಟು ವಿಧಾನಸಭಾವಾರು ಹಂಚಿಕೆಯಾಗುವ ವಿವಿಪ್ಯಾಟ್-ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ಮೀಸಲು ಮತಯಂತ್ರಗಳ ಸಮಗ್ರ (ರ್ಯಾಂಡಮೈಜೇಶನ್) ಸಮ್ಮಿಶ್ರಣ ಕಾರ್ಯವು ಇಂದು ವಿಜಯಪುರ ಸಾಮಾನ್ಯ ವೀಕ್ಷಕರಾದ ಅಶೋಕ ಶಹಾ ಹಾಗೂ ವೆಚ್ಚ ವೀಕ್ಷಕರಾದ ಸುಹಾಸ ಕುಲಕರ್ಣಿ ಅವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಏಜೆಂಟರ್ ಸಮ್ಮುಖದಲ್ಲಿ ದ್ವೀತಿಯ ರ್ಯಾಂಡಮೈಜೇಶನ್ ಕಾರ್ಯವು ಯಶಸ್ವಿಯಾಗಿ ನೆರವೇರಿಸಲಾಗಿದ್ದು, ವಿಜಯಪುರ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಅಶೋಕ ಶಹಾ ಹಾಗೂ ವೆಚ್ಚ ವೀಕ್ಷಕರಾದ ಸುಹಾಸ ಕುಲಕಣರ್ಿ ಅವರು ಜಿಲ್ಲಾಡಳಿತದಿಂದ ವಿವಿಧ ವಿಧಾನಸಭಾವಾರು ಹಂಚಿಕೆಯಾಗಿರುವ ವಿವಿಪ್ಯಾಟ್, ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ಗಳ ಮಾಹಿತಿಯನ್ನು ನೀಡಿ, ಸಂಬಂಧಪಟ್ಟ ರಾಜಕೀಯ ಪಕ್ಷದ ಅಭ್ಯಥರ್ಿಗಳಿಗೆ ಹಾಗೂ ಏಜೆಂಟರಿಗೆ ದೃಢೀಕೃತ ನಕಲು ಪ್ರತಿಯನ್ನು ಸಹ ನೀಡಲಾಯಿತು.
ಜಿಲ್ಲೆಯ ಮುದ್ದೇಬಿಹಾಳ, ದೇವರಹಿಪ್ಪರಗಿ, ಬಸವನಬಾಗೇವಾಡಿ, ಬಬಲೇಶ್ವರ, ವಿಜಯಪುರ ನಗರ, ನಾಗಠಾಣ, ಇಂಡಿ ಹಾಗೂ ಸಿಂದಗಿ ಮತಕ್ಷೇತ್ರಗಳ ಕ್ರಮ ಸಂಖ್ಯೆವಾರು, ಮತಗಟ್ಟೆ ಸಂಖ್ಯೆವಾರು ಮತದಾನ ಕೇಂದ್ರವಾರು, ಹಂಚಿಕೆಯಾಗಿರುವ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿವಿಪ್ಯಾಟ್ಗಳ ರ್ಯಾಂಡಮೈಜೇಶನ್ ಪ್ರಕ್ರಿಯೆಯನ್ನು ಸಮಗ್ರವಾಗಿ ಪರಿಶೀಲನೆ ನಡೆಸಲಾಯಿತು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ರ್ಯಾಂಡಮೈಜೇಶನ್ ಪ್ರಕ್ರಿಯೆ ಬಗ್ಗೆ ಅವಶ್ಯಕ ಮಾಹಿತಿ ನೀಡಿದರು.
ಚುನಾವಣಾ ವೆಚ್ಚ ದಾಖಲೆಗೆ ಸೂಚನೆ:
ಇದೇ ಸಂದರ್ಭದಲ್ಲಿ ಚುನಾವಣಾ ವೆಚ್ಚ ವೀಕ್ಷಕರಾದ ಸುಹಾಸ ಕುಲಕಣರ್ಿ ಅವರು ಮಾತನಾಡಿ, ಅತ್ಯಂತ ಮಹತ್ವದ ಚುನಾವಣೆ ಇದಾಗಿರುವುದರಿಂದ ಚುನಾವಣಾ ಆಯೋಗದ ಪ್ರತಿಯೊಂದು ನಿದರ್ೇಶನಗಳನ್ನು ಕಡ್ಡಾಯವಾಗಿ ಅಭ್ಯರ್ಥಿಗಳು ಪಾಲಿಸಬೇಕು. ಚುನಾವಣೆ ಸಂದರ್ಭದಲ್ಲಿ ಮಾಡಲಾದ ವೆಚ್ಚಕ್ಕೆ ಸಂಬಂಧಪಟ್ಟಂತೆ ಸಮರ್ಪಕ ದಾಖಲಾತಿಗಳನ್ನು ಇಟ್ಟುಕೊಳ್ಳುವ ಜೊತೆಗೆ ನಿಗದಿತ ಅವಧಿಯಲ್ಲಿ ಮಾಡಲಾದ ವೆಚ್ಚದ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.
ಅದರಂತೆ ವೆಚ್ಚಕ್ಕೆ ಸಂಬಂಧಪಟ್ಟಂತೆ ಸಕಾಲದಲ್ಲಿ ಹಾಗೂ ಸಮರ್ಪಕವಾಗಿ ಮಾಹಿತಿ ಒದಗಿಸದೇ ಇದ್ದ ಪಕ್ಷದಲ್ಲಿ ಚುನಾವಣೆಗೆ ಅನರ್ಹಗೊಳ್ಳುವ ಸಾಧ್ಯತೆ ಇದ್ದು, ಸಂಬಂಧಪಟ್ಟ ಅಭ್ಯರ್ಥಿಗಳು ಚುನಾವಣೆಯ ಎಲ್ಲ ನಿಯಮಾವಳಿಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಅದರಂತೆ ಅಭ್ಯಥರ್ಿಗಳ ವೆಚ್ಚಗಳ ದಾಖಲೆಗೆ ಈಗಾಗಲೇ ತಂಡಗಳನ್ನು ರಚಿಸಿ, ವೆಚ್ಚವನ್ನು ಸಹ ದಾಖಲಿಸಲಾಗುತ್ತಿದೆ. ಯಾವುದೇ ರೀತಿಯ ದೂರುಗಳಿದ್ದಲ್ಲಿ ತಮ್ಮ ದೂರವಾಣಿ ಸಂಖ್ಯೆ 8762099624ಗೆ ಸಂಪರ್ಕಿಸಬಹುದು ಎಂದು ತಿಳಿಸಿ, ಸುಗಮ ಹಾಗೂ ಶಾಂತಿಯುತ ಮತ್ತು ಪಾರದರ್ಶಕ ಚುನಾವಣೆಗೆ ಅಭ್ಯಥರ್ಿಗಳು ಸಹಕಾರ ನೀಡುವಂತೆ ಕೋರಿದರು.
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗಿರುವ 2101 ಮತಗಟ್ಟೆಗಳಲ್ಲಿ ಒಟ್ಟು 2504 ಬ್ಯಾಲೆಟ್ ಯೂನಿಟ್, 2504 ಕಂಟ್ರೋಲ್ ಯೂನಿಟ್, 2673 ವಿವಿಪ್ಯಾಟ್ಗಳನ್ನು ಹಂಚಿಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಸೇರಿದಂತೆ ರಾಜಕೀಯ ಪಕ್ಷದ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತ್ತು ಏಜೆಂಟರು ಉಪಸ್ಥಿತರಿದ್ದರು