ಗೌರಿ-ಗಣೇಶ ಹಬ್ಬದ ಆಚರಣೆ: ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದ ಪಿಐ ಸುರೇಶ ಬೆಂಡೆಗುಂಬಳ

ಗೌರಿ-ಗಣೇಶ ಹಬ್ಬದ ಆಚರಣೆ: ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದ ಪಿಐ ಸುರೇಶ ಬೆಂಡೆಗುಂಬಳ Gauri-Ganesha Festival Celebration: PI Suresh Bendegumbala Conveys a Message of Peace and Harmony


ಸವದತ್ತಿ  15: ನಗರದಲ್ಲಿ ಗೌರಿ-ಗಣೇಶ ಚತುರ್ಥಿ ಹಬ್ಬವನ್ನು ಸಾರ್ವಜನಿಕರು ಅತ್ಯಂತ ಭಕ್ತಿ-ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಿದರು. ವಿವಿಧ ವಾರ್ಡ್ಗಳಲ್ಲಿ ಮನೆ-ಮನೆಗೆ ಗಣೇಶ ಮೂರ್ತಿಗಳನ್ನು  ವಿಧಿ-ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ಗೌರಿ ಮತ್ತು ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪೊಲೀಸ್ ಸಿಬ್ಬಂದಿ ವರ್ಗದವರು ಒಂದೇ ರೀತಿಯ ಸಮವಸ್ತ್ರ ಧರಿಸಿ ಒಟ್ಟಾಗಿ ಗಣೇಶನನ್ನು ಬರಮಾಡಿಕೊಂಡು ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿದರು. ಹಬ್ಬದ ಸಂಭ್ರಮದಲ್ಲಿ ಭಕ್ತಿ ಗೀತೆಗಳು ಮೊಳಗಿದವು, ಯುವಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು. 

ಈ ಸಂದರ್ಭದಲ್ಲಿ ಪಿಐ ಸುರೇಶ ಬೆಂಡೆಗುಂಬಳ ಮಾತನಾಡಿದ,ಅವರು ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದರು. ನಮ್ಮ ನಗರದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಹಬ್ಬಗಳನ್ನು ಆಚರಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ತಿಳಿಸಿ, ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯ ಕೋರಿದರು.ಸಾರ್ವಜನಿಕ ಗಣೇಶೋತ್ಸವವು ಯಾವುದೇ ಅಡಚಣೆಯಿಲ್ಲದೆ ಶಾಂತಿಯುತವಾಗಿ ಹಾಗೂ ಸುರಕ್ಷಿತವಾಗಿ ಜರುಗಲು ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಪಿಎಸ್‌ಐ ರಾಜು,ಪೂಜೇರ, ಅಪರಾಧ ವಿಭಾಗದ ಪಿಎಸ್‌ಐ ಲಕ್ಷ್ಮಣ ಗೌಡಿ, ಎಸ್‌.ಎಮ್‌.ಮಂಗಣ್ಣವರ, ಈರಣ್ಣಾ ಕರಡಿ,ಉಮೇಶ್ ಗಾಣಗಿ,ಮಾರುತಿ ಬುರ್ಜಿ, ಶಿವಾನಂದ ಕೊರಕೊಪ್ಪ, ಅಮರ ಸಾರಾಪೂರೆ,ನಾಗರಾಜ ಹೊಲಿ, ಗಜಾನನ ಉಪ್ಪಾರ,ಶಂಕರ್ ಭಜಂತ್ರಿ,ವಿಜಯ ರಾಠೋಡ್, ಉದ್ದಪ್ಪ ಪೂಜೇರ, ರುದ್ರ​‍್ಪ ಕೊಟಗಿ,ಹಾಗೂ ಗೃಹರಕ್ಷಕ ಸಿಬ್ಬಂದಿ ಆನಂದ ಲಮ್ಮಾಣಿ, ಪ್ರಕಾಶ ಶಿರಹಟ್ಟಿಮಠ, ಮಲೀಕ ಶಿಲೇದಾರ,ಜಯಪ್ರಕಾಶ್ ಬೆಳವಡಿ, ಉಪಸ್ಥಿತರಿದ್ದರು.