ವಿಜಯಪುರ: ಮಹಿಳೆಗೆ ಗೌರವ ತೋರುವ ಏಕೈಕ ಪಕ್ಷ ಬಿಜೆಪಿ: ಚಿತ್ರನಟಿ, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಹೇಳಿಕೆ

ಲೋಕದರ್ಶನ ವರದಿ

ವಿಜಯಪುರ 11: ಮಹಿಳೆಯನ್ನು ತಾಯಿ ಎಂದು ಪೂಜಿಸುವ, ಮಹಿಳೆಯನ್ನು ಗೌರವ ತೋರುವ ಸಂಸ್ಕೃತಿ ಹೊಂದಿದ ಏಕೈಕ ಪಕ್ಷ ಬಿಜೆಪಿ ಎಂದು ಖ್ಯಾತ ಚಿತ್ರನಟಿ, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧಾ ಹೇಳಿದರು.

ವಿಜಯಪುರದ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯದ  ಮುಂಭಾಗದಲ್ಲಿ ನಡೆದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಮಹಿಳೆಯನ್ನು ಅತ್ಯಂತ ಗೌರವದಿಂದ ಕಾಣುತ್ತದೆ, ಮಹಿಳೆಯನ್ನು ತಾಯಿ ಎಂದು ಪೂಜಿಸುತ್ತದೆ, ಸದಾ ಗೌರವಿಸುತ್ತದೆ. ಇದು ಭಾರತೀಯ ಜನತಾ ಪಕ್ಷದ ಸಂಸ್ಕೃತಿ, ಇದು ಭಾರತೀಯ ಜನತಾ ಪಕ್ಷದ ಸಂಸ್ಕಾರ. ಮಹಿಳೆ ಅತ್ಯಂತ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸುತ್ತಾಳೆ ಎಂದರು. 

ಕೆಲವೊಂದು ಕಡೆ ಎಷ್ಟೇ ಶ್ರೀಮಂತಿಕೆ ಇದೆ, ಸುಖದ ಸುಪ್ಪತ್ತಿಗೆ ಇದೆ, ಆದರೆ ಅಲ್ಲಿ ಗೌರವವೇ ಇಲ್ಲದಿದ್ದರೆ ಅಲ್ಲಿ ನಾವು ನಿಲ್ಲಲ್ಲು ಸಾಧ್ಯವೇ? ಇಲ್ಲ. ಹಾಗೆಯೇ ಗೌರವ ಸಿಗುವ ಜಾಗದಲ್ಲಿ ನಾವು ಇರಬೇಕು, ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ ದೊರಕುತ್ತದೆ. ಮಹಿಳೆ ರಾಜಕೀಯ ರಂಗದಲ್ಲಿ ಉನ್ನತ ಸ್ಥಾನ ಅಲಂಕರಿಸುವ ವಾತಾವರಣ ಬಿಜೆಪಿಯಲ್ಲಿದೆ ಎಂದರು. 

ನಾವು ಮೋದಿ ಹೆಸರಿನಲ್ಲಿ ವೋಟು ಕೇಳುತ್ತಿದ್ದೇವೆ, ಮೋದಿ ನಮ್ಮ ನಾಯಕರು ಅವರ ಹೆಸರಿನಲ್ಲಿ ಮತ ಕೇಳಿದರೆ ತಪ್ಪೇನು? ಪ್ರತಿಪಕ್ಷದ ಶಾಸಕ ಸಹೋದರರೊಬ್ಬರು ಇದನ್ನು ಟೀಕೆ ಮಾಡಿದರು, ಪಾಪ ಅವರು ಎಲ್ಲಿಯೂ ತಮ್ಮ ಪಕ್ಷದ ಇಂದಿರಾ ಗಾಂಧಿ, ರಾಜೀವ ಗಾಂಧಿ ಅವರ ಹೆಸರು ಹೇಳಿಲ್ಲವೇನೋ? ಎಂದು ಪ್ರಶ್ನಿಸಿದರು.  ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ದಶಕಗಳ ಹಿಂದೆಯೇ ರಮೇಶ ಜಿಗಜಿಣಗಿ ಅವರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದವರು. ಚತುಷ್ಪಥ ರಸ್ತೆ, ಪಾಸ್ಪೋಟರ್್ ಸೇವಾ ಕೇಂದ್ರ ಆರಂಭ ಸೇರಿದಂತೆ ಅವರ ಸಾಧನೆಯ ಪಟ್ಟಿ ದೊಡ್ಡದಿದೆ ಎಂದರು. ಜನತೆ ಈ ಬಾರಿ ಜಿಗಜಿಣಗಿ ಅವರಿಗೆ ಆಶೀರ್ವಾದ  ನೀಡಬೇಕು ಎಂದು ಕೋರಿದರು.  ಮಹಿಳಾ ಮೋರ್ಚಾ  ಜಿಲ್ಲಾಧ್ಯಕ್ಷೆ ಮಲ್ಲಮ್ಮ ಜೋಗೂರ, ಜಿ.ಪಂ. ಸದಸ್ಯರಾದ ದಾನಮ್ಮ ಅಂಗಡಿ, ಜ್ಯೋತಿ, ಅಸ್ಕಿ, ಶ್ರೀದೇವಿ ಐಹೊಳಿ, ಸೌಮ್ಯಾ ಕಲ್ಲೂರ, ಗೀತಾ ಕುಗನೂರ, ರಜನಿ ಸಂಬಣ್ಣಿ, ಅನುರಾಧಾ ಕಲಾಲ, ಶಾಂತಾ, ಶಾಂತಾ ಉತ್ಲಾಸಕರ್, ಮೀತಾ ದೇಸಾಯಿ, ಮಂಜುಳಾ ಅಂಗಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಮಹಾತ್ಮಾ ಗಾಂಧಿ ರಸ್ತೆಯ ಹತ್ತಿರ ವಿರುವ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ನಗರದ ಆಝಾದ ರಸ್ತೆ, ಸರಾಫ ಬಜಾರ್, ಎಲ್.ಬಿ.ಎಸ್.ಮಾರುಕಟ್ಟೆಯ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮತ ಯಾಚಿಸಿದರು. ರಮೇಶ ಜಿಗಜಿಣಗಿ ಅವರ ಸಾಧನೆಯ ಕರಪತ್ರಗಳನ್ನು ಮತದಾರರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ವಿಜಯ ಜೋಶಿ, ಕೃಷ್ಣಾ ಗುನಾಳಕರ, ಸತೀಶ ಡೋಬಳೆ, ವಿನಾಯಕಕ ದಹಿಂಡೆ, ಸಚಿನ ಅಡಕಿ, ಉಮೇಶ ವೀರಕರ, ವಿಠ್ಠಲ ನಡುವಿನಕೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.