ವಿಜಯಪುರ: ಮಹಿಳೆಯ ಯಶಸ್ಸಿಗೆ ಪುರುಷ ಪೂರಕವಾಗಬೇಕು: ಮುಖ್ಯ ಗುರುಮಾತೆ ಸುಜಾತಾ ರೇಶ್ಮಿ ಹೇಳಿಕೆ

ಲೋಕದರ್ಶನ ವರದಿ

ವಿಜಯಪುರ 11: ಹೆಣ್ಣು ಜಗದ ಕಣ್ಣು  ಎನ್ನುವುದು ಪ್ರತೀತಿ. ಹಾಗೆಯೇ ಪ್ರತಿಯೊಬ್ಬ ಯಶಸ್ವಿಪುರುಷನ ಹಿಂದೆ ಒಂದು ಹೆಣ್ಣು ಇರುವ ಹಾಗೆ ಪ್ರತಿಯೋಂದು ಯಶಸ್ವಿ ಹೆಣ್ಣಿನ ಹಿಂದಿನ ಶಕ್ತಿ ಗಂಡಾದರೆ ಸಮಾನತೆಯುಳ್ಳ ಸಮಾಜವನ್ನು ಕಾಣಲು ಸಾಧ್ಯವಾಗುವದು ಅಷ್ಟೇ ಅಲ್ಲ ಸುಂದರ ಸಂಸೃತಿಯ ಅನಾವರಣವಾಗುವುದು ಎಂದು ಸ್ವಪ್ನಾ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯ ಮುಖ್ಯ ಗುರುಮಾತೆ ಸುಜಾತಾ ರೇಶ್ಮಿ ಹೇಳಿದರು. ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ 2019ನೇ ಸಾಲಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯರಾದ ವಿಕಾಸ ದರಬಾರ: ಪ್ರಾಚೀನ ಭಾರತದಲ್ಲಿ ಮಹಿಳೆಯ ಸ್ಥಾನಮಾನ ಬಹಳ ಎತ್ತರದಲ್ಲಿತ್ತು, ಆದರೆ ಕಾಲ ಕಳೆದಂತೆ ಅದು ಕುಸಿಯುತ್ತ ಸಾಗಿ ಶೋಚನೀಯವಾಗುತ್ತ ಹೋಯಿತು. ಕಾಲ ಬದಲಾದಂತೆ ಮತ್ತೇ ಸ್ತ್ರೀಪರ್ವ ಆರಂಭವಾಗಿದ್ದು ಇಂದು ಮತ್ತೇ ಮಹಿಳೆಯರ ಸ್ಥಾನಮಾನಗಳು ಉನ್ನತ ಶಿಖರದೆಡೆ ಸಾಗಿರುವ ಪರಿಣಾಮ ಇಂದು ಮಹೀಳೆ ಕೇವಲ ಮನೆಕೆಲಸಕ್ಕೆ ಮಾತ್ರ ಸೀಮಿತವಾಗಿರದೇ ಬಂದೂಕು ಹಿಡಿದು ಹೋರಾಟಕ್ಕೆ ನಿಂತಿದ್ದಾಳೆ, ಖಾಕಿ ದರಿಸಿ ಕಾನೂನು ಕಾಯುತ್ತಿದ್ದಾಳೆ, ಕಪ್ಪು ಕೋಟು ಧರಿಸಿ ವಾದ ಮಾಡುತ್ತಿದ್ದಾಳೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ನಾರಿ ತನ್ನ ಛಾಪನ್ನು ಮೂಡಿಸುತ್ತಿದ್ದು ಅದನ್ನು ಅರಿತ ಯುವ ಭಾರತದ ನವ ನಾರಿಯರು ಸದೃಢ ಸಮಾಜವನ್ನು ನಿರ್ಮಾಣ  ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಾಚಾರ್ಯರಾದ ಜಿ.ಹೆಚ್.ಮಣ್ಣೂರ; ಮೊನ್ನೆ ನಡೆದ ಪುಲ್ವಾಮಾ ದಾಳಿಯ ವಿರುದ್ಧದ ಏರ್ಸ್ಟ್ರೈಕ್ನಂತ ಸೇಡಿನ ದಾಳಿಗೆ ಗಟ್ಟಿ ನಿಲುವನ್ನು ತೆಗೆದುಕೊಳ್ಳುವಲ್ಲಿ ನಿರ್ಮಲಾ ಸೀತಾರಾಮನ್ ಹಾಗೂ ಸುಷ್ಮಾ ಸ್ವರಾಜರಂತ ಮಹಿಳೆಯರ ಪಾತ್ರವು ಬಹಳ ಮುಖ್ಯವಾಯಿತು ಇದು ಭಾರತ ದೇಶದ ಸ್ತ್ರೀಯ ಸ್ಥಾನಮಾನವನ್ನು ತಿಳಿಸುತ್ತದೆ. ಆ ನಿಟ್ಟಿನಲ್ಲಿ ವಿದ್ಯಾಥರ್ಿನಿಯರು ಇವರ ಬದುಕನ್ನು ನೋಡಿ ಕಲಿಯಬೇಕು ಹಾಗೂ ಇವರಿಗಿಂತ ಉನ್ನತ ಪದವಿಯ ಗುರಿಯನ್ನು ಹೊಂದಬೇಕು ಎಂದು ಹೇಳಿದರು.

ಉಪನ್ಯಾಸಕ ಮನೋಹರ ದೊಡ್ಡಮನಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶ್ರೀನಿವಾಸ ಖೇಡಕರ, ಭಾಗೀರಥಿ ಕರ್ಜಗಿ ಪ್ರಾರ್ಥಿಸಿದರು ಎನ್ಎಸ್ಎಸ್ ಘಟಕಾಧಿಕಾರಿ ಸೀಮಾ ಪಾಟೀಲ ಸ್ವಾಗತಿಸಿದರು.  ಮೇಘಾ ಕುಲಕಣರ್ಿ ಪರಿಚಸಿದರು, ಆರತಿ ಬಿಸ್ಟಗೊಂಡ ವಂದಿಸಿದರು ಹಾಗೂ ವಿದ್ಯಾರ್ಥಿನಿಯರಾದ ಗೌರಿ ಹಾಗೂ ಗೀತಾಂಜಲಿ ನಿರೂಪಿಸಿದರು.